ಕುಟುಂಬ ಸಮೇತ ಶೃಂಗೇರಿಗೆ ಭೇಟಿ, ಭಕ್ತರ ಸೆಲ್ಫಿಗೆ ಡಿಕೆಶಿ ಸುಸ್ತೋ ಸುಸ್ತು!

|

Updated on: Nov 19, 2019 | 5:33 PM

ಚಿಕ್ಕಮಗಳೂರು: ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದಾರೆ. ಈಗಾಗಲೇ ಹಲವು ದೇವಾಲಯಗಳಿಗೆ ಭೇಟಿ ನೀಡಿರುವ ಡಿಕೆಶಿ ಇಂದು ಕುಟುಂಬ ಸಮೇತರಾಗಿ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯಾ ಜೊತೆ ತೆರಳಿ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ಕುಟುಂಬಸ್ಥರು ಶಾರದಾಂಬೆ ದೇವಾಲಯದ ಪ್ರದಕ್ಷಿಣೆ ವೇಳೆ ಅಲ್ಲಿದ್ದ ಜನರು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಭಕ್ತರ ಸೆಲ್ಫಿಗೆ ಡಿಕೆಶಿ ಸುಸ್ತು! ಸರ್ […]

ಕುಟುಂಬ ಸಮೇತ ಶೃಂಗೇರಿಗೆ ಭೇಟಿ, ಭಕ್ತರ ಸೆಲ್ಫಿಗೆ ಡಿಕೆಶಿ ಸುಸ್ತೋ ಸುಸ್ತು!
Follow us on

ಚಿಕ್ಕಮಗಳೂರು: ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದಾರೆ. ಈಗಾಗಲೇ ಹಲವು ದೇವಾಲಯಗಳಿಗೆ ಭೇಟಿ ನೀಡಿರುವ ಡಿಕೆಶಿ ಇಂದು ಕುಟುಂಬ ಸಮೇತರಾಗಿ ಶೃಂಗೇರಿಗೆ ಭೇಟಿ ನೀಡಿದ್ದಾರೆ.

ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯಾ ಜೊತೆ ತೆರಳಿ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ಕುಟುಂಬಸ್ಥರು ಶಾರದಾಂಬೆ ದೇವಾಲಯದ ಪ್ರದಕ್ಷಿಣೆ ವೇಳೆ ಅಲ್ಲಿದ್ದ ಜನರು ಸೆಲ್ಫಿಗೆ ಮುಗಿಬಿದ್ದಿದ್ದಾರೆ.

ಭಕ್ತರ ಸೆಲ್ಫಿಗೆ ಡಿಕೆಶಿ ಸುಸ್ತು!
ಸರ್ ನಂಗೊಂದು ಸೆಲ್ಫಿ, ನಂಗೊಂದು ಸೆಲ್ಫಿ ಅಂತ ಡಿ.ಕೆ.ಶಿವಕುಮಾರ್ ಹಿಂದೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕೊನೆಗೆ ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳಲು ಡಿಕೆಶಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಡಿಕೆಶಿ ಕುಟುಂಬಕ್ಕೆ ಸ್ಥಳೀಯ ಶಾಸಕ ರಾಜೇಗೌಡ ಸಾಥ್ ನೀಡಿದ್ದಾರೆ.

Published On - 4:48 pm, Tue, 19 November 19