ಲಸಿಕೆಗೆ ಹೆದರಬೇಡಿ, ತಪ್ಪು ಮಾಹಿತಿಗೆ ಕಿವಿಗೊಡಬೇಡಿ -ಆರೋಗ್ಯ ಸಚಿವ ಡಾ.ಕೆ.ಸುಧಾಕರ್

|

Updated on: Jan 22, 2021 | 11:51 AM

ಕಳೆದ 5 ದಿನದಿಂದ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿದೆ. ಇದುವರೆಗೆ 1,38,656 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ರು.

ಲಸಿಕೆಗೆ ಹೆದರಬೇಡಿ, ತಪ್ಪು ಮಾಹಿತಿಗೆ ಕಿವಿಗೊಡಬೇಡಿ -ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಡಾ. ಕೆ.ಸುಧಾಕರ್​
Follow us on

ಬೆಂಗಳೂರು: ಜನವರಿ 16ರಂದು ಕೊರೊನಾದಿಂದ ಕಂಗಾಲಾಗಿದ್ದ ಜನರಿಗೆ ಸಂಜೀವಿನಿ ರೂಪದಲ್ಲಿ ಕೊರೊನಾ ಲಸಿಕೆ ನೀಡುವ ಪರ್ವ ಭಾರತದಲ್ಲಿ ಶುರುವಾದ ದಿನ. ಬಹಳ ನಿರೀಕ್ಷೆ ಹುಟ್ಟು ಹಾಕಿದ್ದ ಈ ಬಹು ದೊಡ್ಡ ಅಭಿಯಾನ ಮೇಲ್ನೋಟಕ್ಕೆ ಅಂದಕೊಂಡಷ್ಟು ಯಶಸ್ವಿಯಾಗುತ್ತಿಲ್ಲ.

ಲಸಿಕೆ ಹಾಕಿಸಿಕೊಂಡ ಕೆಲವರಿಗೆ ಅಲರ್ಜಿ, ತಲೆ ಸುತ್ತಂತಹ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಅಲ್ಲದೆ ಆತಂಕಕಾರಿ ವಿಷಯ ಅಂದ್ರೆ ಲಸಿಕೆ ಹಾಕಿಸಿಕೊಂಡವರಲ್ಲಿ ಮೃತರೂ ಇದ್ದು ಕೇಂದ್ರ ಸರ್ಕಾರ ಆ ಸಾವಿಗೆ ಲಸಿಕೆ ಕಾರಣವಲ್ಲ ಎಂಬ ಸ್ಪಷ್ಟನೆ ನೀಡಿದೆ. ಹಾಗಾದ್ರೆ ಕರ್ನಾಟಕದಲ್ಲಿ ಇಲ್ಲಿಯ ವರೆಗೆ ಎಷ್ಟು ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಯಾವ ರೀತಿ ಪರಿಣಾಮಗಳನ್ನು ಸರ್ಕಾರ ನಿಭಾಯಿಸುತ್ತಿದೆ ಎಂಬುವುದರ ಬಗ್ಗೆ ಖುದ್ದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಕಳೆದ 5 ದಿನದಿಂದ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿದೆ. ಇದುವರೆಗೆ 1,38,656 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ರು. ಇನ್ನು 1,36,882, ಜನರಿಗೆ ಕೊವಿಶೀಲ್ಡ್ ಲಸಿಕೆ ನೀಡಲಾಗಿದ್ದು, ರಾಜ್ಯದಲ್ಲಿ 1,774 ಜನರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಇದರಲ್ಲಿ ಶೇ.2ರಿಂದ 3.5ರಷ್ಟು ಜನರಿಗೆ ಸ್ವಲ್ಪ ಅಡ್ಡ ಪರಿಣಾಮವಾದರೂ ಅರ್ಧ ದಿನದಲ್ಲೇ ನಿವಾರಣೆಯಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಲಸಿಕೆ ಪಡೆದು ಯಾರೂ ಮರಣ ಹೊಂದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆಯಲು 8,47,908 ಮಂದಿ ನೋಂದಣಿ ಮಾಡಿಕೊಂಡಿದ್ದರು.

ಲಸಿಕೆಗೆ ಹೆದರಬೇಡಿ, ತಪ್ಪು ಮಾಹಿತಿಗೆ ಕಿವಿಗೊಡಬೇಡಿ. ವ್ಯಾಕ್ಸಿನ್​ಗೆ ಭಯ ಬೇಡ. ಎಲ್ಲರೂ ಲಸಿಕೆ ಪಡೆಯಿರಿ. ಎರಡನೇ ಅಲೆ ಬರುವ ಮುನ್ನವೇ ಸುರಕ್ಷಿತವಾಗಿರಿ. ಎರಡನೇ ಹಂತರ ಲಸಿಕೆ ಕೂಡ ಆದಷ್ಟು ಬೇಗ ರಾಜ್ಯಕ್ಕೆ ಬರಲಿದೆ. ಹೀಗಾಗಿ ದೊಡ್ಡ ಸಿದ್ಧತೆಗಳು ಆಗಬೇಕಿದೆ. ಎರಡು ಕೋಟಿ ಜನರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಬೇಕಾಗಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ಲೆಕ್ಕಾಚಾರ ಉಲ್ಟಾ.. ಹೆಲ್ತ್ ವಾರಿಯರ್ಸ್‌ಗೆ ಬಂದ ವ್ಯಾಕ್ಸಿನ್ ಫ್ರಂಟ್‌ಲೈನ್ ವಾರಿಯರ್ಸ್‌ಗೆ