ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ಮಂಜುನಾಥ್ ಅಧಿಕಾರ ಸ್ವೀಕಾರ
ಸರ್ಕಾರದ ಆದೇಶದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ಶ್ರೀ ಮಂಜುನಾಥ ಆಯ್ಕೆಯಾದರು. ಹಾಗೂ ಇವರು ಜನವರಿ 20ರಂದು ಮಂಗಳೂರಿನಲ್ಲಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಮಂಗಳೂರು: ಸರಕಾರದ ಆದೇಶದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ಮಂಜುನಾಥ ಆಯ್ಕೆಯಾಗಿದ್ದಾರೆ. ಇವರು ಜ. 20ರಂದು ಮಂಗಳೂರಿನಲ್ಲಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರತ್ನಾಕರ ಹೆಗಡೆ, ಕಾರ್ಯದರ್ಶಿ ಪ್ರದೀಪ್ ಡಿಸೋಜ, ಎಂಜಿನಿಯರ್ ಹರಿಹರ ಹರಿಕಾಂತ, ಭಟ್ಕಳ ಹೊನ್ನಾವರ ಎಪಿಎಂಸಿ ಉಪಾಧ್ಯಕ್ಷ ಪರಮೇಶ್ ನಾಯ್ಕ, ಬಿಜೆಪಿ ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮುಕುಂದ ನಾಯ್ಕ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೇಖರ್ ನಾಯ್ಕ, ಪಕ್ಷದ ಹಿರಿಯರು ಹಾಗೂ ಉದ್ದಿಮೆದಾರ ಚಂದ್ರಕಾಂತ್ ಶೆಟ್ಟಿ , ಶಶಾಂಕ್ ಶೆಟ್ಟಿ , ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ನಾಯ್ಕ, ಸುಜಯ ಶೆಟ್ಟಿ, ಉಮೇಶ್ ಅಂಬಿಗ, ಗೋವಿಂದ ಮುಕ್ರಿ , ಸಾಮಾಜಿಕ ಕಾರ್ಯಕರ್ತ ನಾಗೇಶ್ ಸೂರಿ, ವಿನಾಯಕ ಭಟ್ಕಳ್ ಹಾಗೂ ಕರುನಾಡ ವಿಜಯ ಸೇನೆಯ ಜಿಲ್ಲಾ ಉಸ್ತುವಾರಿ ವಿನಾಯಕ ಆಚಾರಿ ಉಪಸ್ಥಿತರಿದ್ದರು.
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ವಿಶೇಷ ಚೇತನ ವ್ಯಕ್ತಿಯ ಪ್ರತಿಭಟನೆ