ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೋಡಗುರ್ಕಿ ಬಳಿ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾದ ಘಟನೆ ಬೆಳಕಿಗೆ ಬಂದಿದೆ. H.N. ವ್ಯಾಲಿ ಯೋಜನೆಯ ಪೈಪ್‌ಲೈನ್ ಒಡೆದು ಘಟನೆ ಸಂಭವಿಸಿದೆ.
ಪೈಪ್‌ಲೈನ್ ಒಡೆದ ಪರಿಣಾಮ ನಂದಿಬೆಟ್ಟದ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವ ದೃಶ್ಯ ಕಂಡುಬಂತು. ಈ ಪೈಪ್ಲೈನ್ನ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹಾಕಲಾಗಿದ್ದು ಬೆಳಗ್ಗಿನಿಂದ ಅಪಾರ ಪ್ರಮಾಣದ ನೀರು ರಸ್ತೆಗೆ ಚಿಮ್ಮುತ್ತಿದೆ.
ನೀರು ಚಿಮ್ಮುತ್ತಿರೋ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಯ್ತು. ಇದಕ್ಕೆ ಕಾರಣ ಕಾರ್ ಮಾಲೀಕರು. ಹೌದು, ಚಿಮ್ಮುತ್ತಿರೋ ನೀರಿನಲ್ಲೆ ತಮ್ಮ ಕಾರ್ಗಳನ್ನ ಚಾಲಕರು ತೊಳೆದುಕೊಳ್ಳಲು ಮುಂದಾದರು. ರಸ್ತೆಯಲ್ಲಿ ಕಾರು ನಿಲ್ಲಿಸಿ ವಾಹನಗಳನ್ನು ವಾಶ್ ಮಾಡೋಕೆ ಮುಂದಾದರು. ಈ ವೇಳೆ, ಇದನ್ನು ಗಮನಿಸದ ಬೈಕ್ ಸವಾರನೊಬ್ಬ ಸೀದಾ ಬಂದು ನಿಲ್ಲಿಸಿದ್ದ ಡಸ್ಟರ್ ಕಾರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ದೃಶ್ಯಾವಳಿ ಸಹ ಕಂಡುಬಂತು!
Published On - 5:28 pm, Mon, 21 December 20