ಗಿಡ ನೆಡಲು ಗುಂಡಿ ತೋಡಿದರೆ ಸಿಕ್ಕಿದ್ದು ಪುರಾತನ ಕಾಲದ ಮಡಿಕೆಗಳು..! ಏನಂತಾರೆ ಇತಿಹಾಸ ತಜ್ಞರು?

ಜೈನ ಸಮುದಾಯದಲ್ಲಿ ಬಂಡಿ ಹಬ್ಬದ ಆಚರಣೆ ನಡೆಯುತ್ತದೆ. ಈ ಹಬ್ಬದಲ್ಲಿ ಇದೇ ರೀತಿಯ ಆಕೃತಿಗಳನ್ನು ರಚಿಸಿ, ರಾತ್ರಿ ಬೆಂಕಿ ಹಾಕಿಕೊಂಡು ನರ್ತಿಸುತ್ತ ನಂತರ ಅವುಗಳನ್ನು ಹೊರ ಪ್ರದೇಶದಲ್ಲಿ ಇಡುವ ಸಂಪ್ರದಾಯ ಆಚರಣೆ ನಡೆಯುತ್ತಿತ್ತು. ಬಹುಶ್ಯಃ ಅದೇ ಇರಬಹುದು ಎಂದು ಅಂದಾಜಿಸಲಾಗಿದೆ.

ಗಿಡ ನೆಡಲು ಗುಂಡಿ ತೋಡಿದರೆ ಸಿಕ್ಕಿದ್ದು ಪುರಾತನ ಕಾಲದ ಮಡಿಕೆಗಳು..! ಏನಂತಾರೆ ಇತಿಹಾಸ ತಜ್ಞರು?
ಒಡೆದ ಸ್ಥಿತಿಯಲ್ಲಿ ಪತ್ತೆಯಾದ ಮಡಿಕೆಗಳು
Lakshmi Hegde

| Edited By: sadhu srinath

Dec 21, 2020 | 6:17 PM

ಶಿರಸಿ: ತುಂಬ ಹಳೇ ಮಾದರಿಯ, ವಿಶಿಷ್ಟವಾದ ಮಣ್ಣಿನ ಮಡಿಕೆ ಮತ್ತು ಪಾತ್ರೆಗಳು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೇರ್ಲವಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಇವು 17ನೇ ಶತಮಾನಕ್ಕೆ ಸೇರಿದ್ದಾಗಿರಬಹುದು.. ಜೈನರ ಅವಧಿಯಲ್ಲಿ ಬಳಕೆಯಾಗುತ್ತಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ದೇವಿಕೈ ಮಜರೆಲ್ಲಿಯಲ್ಲಿನ ನೇರ್ಲವಳ್ಳಿ ಅರಣ್ಯ ಪ್ರದೇಶದಲ್ಲಿ, ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಸಲುವಾಗಿ ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಈ ವೇಳೆ ಕೆಲಸಗಾರರು ಸುಮಾರು 5 ಅಡಿ ಆಳದ ಗುಂಡಿಗಳನ್ನು ತೋಡಿದಾಗ ಮಡಕೆಗಳು ಪತ್ತೆಯಾಗಿವೆ. ಈ ಪ್ರದೇಶದ ಸಮೀಪದಲ್ಲೇ ಜೀರ್ಣಾವಸ್ಥೆಯಲ್ಲಿರುವ ದೇವಸ್ಥಾನವೊಂದು ಇದ್ದು, ಆ ದೇಗುಲಕ್ಕೂ, ಮಡಿಕೆಗಳಿಗೂ ಏನಾದರೂ ಸಂಬಂಧ ಇರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ಚಿತ್ರವಿರುವ ಮಡಿಕೆಗಳು ಮಡಿಕೆಗಳು ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವುಗಳ ಮೇಲೆ ಮಹಿಳೆಯ ಚಿತ್ರ, ಕಿರೀಟ ಹಾಕಿಕೊಂಡಿರುವ ವ್ಯಕ್ತಿಯ ಚಿತ್ರಗಳು ಇವೆ. ಇದೇ ಜಾಗದಲ್ಲಿ ಉತ್ಖನನ ನಡೆಸಿದರೆ ಇನ್ನಷ್ಟು ಪುರಾತನ ಮಡಿಕೆಗಳು ಸಿಗಬಹುದು ಎನ್ನುತ್ತಾರೆ ಸ್ಥಳೀಯರು.

ತಜ್ಞರ ವಿಶ್ಲೇಷಣೆ ಇನ್ನು ಈ ಪುರಾತನ ಮಡಿಕೆಗಳನ್ನು ಪರಿಶೀಲನೆ ಮಾಡಿರುವ ಇತಿಹಾಸ ತಜ್ಞ ಲಕ್ಷ್ಮೀಶ್ ಸೋಂದಾ, ಇವೆಲ್ಲ 17ನೇ ಶತಮಾನಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಿದ್ದಾರೆ.

ಜೈನ ಸಮುದಾಯದಲ್ಲಿ ಬಂಡಿ ಹಬ್ಬದ ಆಚರಣೆ ನಡೆಯುತ್ತದೆ. ಈ ಹಬ್ಬದಲ್ಲಿ ಇದೇ ರೀತಿಯ ಆಕೃತಿಗಳನ್ನು ರಚಿಸಿ, ರಾತ್ರಿ ಬೆಂಕಿ ಹಾಕಿಕೊಂಡು ನರ್ತಿಸುತ್ತಾ ನಂತರ ಅವುಗಳನ್ನು ಹೊರ ಪ್ರದೇಶದಲ್ಲಿ ಇಡುವ ಸಂಪ್ರದಾಯ ಆಚರಣೆ ನಡೆಯುತ್ತಿತ್ತು. ಬಹುಶಃ ಅದೇ ಇರಬಹುದು ಎಂದಿದ್ದಾರೆ.

ಇನ್ನು ಇತಿಹಾಸ ತಜ್ಞ ಡಾ. ಸುಂದರ್ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೈನರ ಈ ಸಂಪ್ರದಾಯದ ಬಗ್ಗೆ ಸುಂದರ್​ ಅವರು ಇಟಲಿಯ ಸೆಮಿನಾರ್​​ನಲ್ಲಿ ಪ್ರಬಂಧ ಮಂಡಿಸಿದ್ದರು. ಅವರು ಪ್ರತಿಪಾದಿಸಿದ್ದ ಸಂಗತಿಗಳಿಗೆ ಈ ಅವಶೇಷಗಳ ಹೋಲಿಕೆ ಕಂಡುಬರುತ್ತಿದೆ.

ಕೆಲ ಕಲಾಕೃತಿಗಳು  ಪುರಾತನದ್ದಾಗಿಯೂ ಕಂಡುಬರುತ್ತಿದೆ. ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕಾಗಿದೆ. ಇಲ್ಲಿ ದೊರೆತ ಕುರುಹುಗಳನ್ನು ಜೋಪಾನ ಮಾಡಬೇಕಾದ ಅಗತ್ಯತೆ ಇದೆ ಎಂದಿದ್ದಾರೆ ಜಾನ್ಮನೆ ವಲಯ ಅರಣ್ಯಾಧಿಕಾರಿ ಪವಿತ್ರ ಸಿ.ಜೆ.

ಬಿಜೆಪಿ ನಾಯಕರ ವಿರುದ್ಧದ 62 ಕ್ರಿಮಿನಲ್​ ಕೇಸ್ ಹಿಂಪಡೆಯಲು ರಾಜ್ಯ ಸರ್ಕಾರದಿಂದ ಸಿದ್ಧತೆ: ಹೈಕೋರ್ಟ್​ನಿಂದ ತಡೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada