AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇಗವಾಗಿ ಹರಡುವ ಹೊಸ ಪ್ರಭೇದದ ಕೊರೊನಾ ವೈರಾಣು ಪತ್ತೆ: ಎಚ್ಚರಿಕೆ ವಹಿಸಲು ಜನರಿಗೆ ಸುಧಾಕರ್ ಮನವಿ

ಹೊಸ ಪ್ರಭೇದದ ವೈರಾಣು ಪತ್ತೆಯಾದ ಕಾರಣಕ್ಕೆ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೊನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಎಲ್ಲರೂ ದಯವಿಟ್ಟು ಮಾಸ್ಕ್​ ಧರಿಸಬೇಕೆಂದು ಸುಧಾಕರ್​ ಮನವಿ ಮಾಡಿದರು.

ವೇಗವಾಗಿ ಹರಡುವ ಹೊಸ ಪ್ರಭೇದದ ಕೊರೊನಾ ವೈರಾಣು ಪತ್ತೆ: ಎಚ್ಚರಿಕೆ ವಹಿಸಲು ಜನರಿಗೆ ಸುಧಾಕರ್ ಮನವಿ
ಡಾ.ಕೆ.ಸುಧಾಕರ್
KUSHAL V
| Edited By: |

Updated on:Dec 22, 2020 | 10:35 AM

Share

ಬೆಂಗಳೂರು: ಇಂಗ್ಲೆಂಡ್​ನಲ್ಲಿ ಹೊಸ ಪ್ರಭೇದದ ಕೊರೊನಾ ಪತ್ತೆಯಾಗಿದೆ. ಕೊರೊನಾಗಿಂತಲೂ ಹೊಸ ವೈರಾಣು ಬಹು ಬೇಗನೇ ಹರಡುತ್ತೆ. ಬ್ರಿಟನ್​ನಿಂದ ರಾಜ್ಯಕ್ಕೆ 138 ಪ್ರಯಾಣಿಕರು ಕೊರೊನಾ ನೆಗೆಟಿವ್​ ರಿಪೋರ್ಟ್ ಇಲ್ಲದೆ ಬಂದಿದ್ದಾರೆ. ಇವರನ್ನು ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗುತ್ತೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕೇಂದ್ರ ಸರ್ಕಾರವೂ ವಿಶೇಷ ನಿಗಾ ಇಡುವಂತೆ ಸೂಚಿಸಿದೆ ಎಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್​ ಹೇಳಿದರು.

ಹೊಸ ಪ್ರಭೇದದ ವೈರಾಣು ಪತ್ತೆಯಾದ ಕಾರಣಕ್ಕೆ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೊನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಎಲ್ಲರೂ ದಯವಿಟ್ಟು ಮಾಸ್ಕ್​ ಧರಿಸಬೇಕೆಂದು ಸುಧಾಕರ್​ ಮನವಿ ಮಾಡಿದರು.

ಸರ್ಕಾರಕ್ಕೆ ಜನರ ರಕ್ಷಣೆಯೇ ಮುಖ್ಯ ಎಂದ ಸುಧಾಕರ್,​ ಕೊರೊನಾದ ಹೊಸ ಪ್ರಭೇದ ಬರುತ್ತಿರುವ ಹಿನ್ನೆಲೆ ಎಚ್ಚರಿಕೆ ಇರಲಿ. ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು. ವಿದೇಶದಿಂದ ಬಂದವರು RTPCR ಟೆಸ್ಟ್​ ಮಾಡಿಸಿಕೊಳ್ಳಬೇಕು. ಮೂರು ದೇಶಗಳಲ್ಲಿ ಹೊಸ ಪ್ರಬೇಧ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರು ಕ್ವಾರಂಟೈನ್​ಗೆ ಒಳಗಾಗಬೇಕು. ಶಾಲೆಗಳ ಆರಂಭದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

‘ಕೊರೊನಾ ಹೊಸ ಪ್ರಬೇಧದ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ’ ರೋಗಲಕ್ಷಣದಲ್ಲಿ ಬದಲಾವಣೆ ಇಲ್ಲ, ತೀವ್ರತೆಯೂ ಇಲ್ಲ. ಕೊರೊನಾ ಹೊಸ ಪ್ರಬೇಧದಲ್ಲಿ ಹರಡುವಿಕೆ ಗುಣ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕೊರೊನಾ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಆದರೆ, ಕೊರೊನಾ ಹೊಸ ಪ್ರಬೇಧದ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸುಧಾಕರ್​ ಹೇಳಿದರು.

ಇಂಗ್ಲೆಂಡ್​ನಲ್ಲಿ ಕೊರೊನಾ ರೂಪಾಂತರ ಪ್ರಭೇದ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶ ಪಾಲಿಸಲು ರಾಜ್ಯ ಸರ್ಕಾರ ಸಿದ್ಧ. ನಾಗರಿಕ ವಿಮಾನಯಾನ ಇಲಾಖೆಯಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಇಂಗ್ಲೆಂಡ್​ನಿಂದ ಭಾರತಕ್ಕೆ ಬರುವ ವಿಮಾನಗಳು ತಾತ್ಕಾಲಿಕವಾಗಿ ರದ್ದಾಗಿದೆ. ನಾಳೆಯಿಂದ ಡಿಸೆಂಬರ್ 31ರವರೆಗೆ ವಿಮಾನ ಹಾರಾಟ ಬಂದ್ ಆಗಿದೆ.

‘ವಿದೇಶದಿಂದ ಬರೋರಿಗೆ 7 ದಿನ ಹೋಂ ಐಸೋಲೇಷನ್ ಕಡ್ಡಾಯ’ ಜೊತೆಗೆ, ಈಗಾಗಲೇ ಆಗಮಿಸುತ್ತಿರುವವರಿಗೆ ಕಡ್ಡಾಯವಾಗಿ ಏರ್‌ಪೋರ್ಟ್‌ಗಳಲ್ಲಿ RTPCR ಟೆಸ್ಟ್ ಮಾಡಿಸಬೇಕು. RTPCR ಟೆಸ್ಟ್​ನಲ್ಲಿ ಪಾಸಿಟಿವ್​ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್, ಐಸೋಲೇಷನ್ ಮಾಡಬೇಕು. ಇದಲ್ಲದೆ, ವಿದೇಶದಿಂದ ಬರೋರಿಗೆ 7 ದಿನ ಹೋಂ ಐಸೋಲೇಷನ್ ಕಡ್ಡಾಯ ಎಂದು ಸುಧಾಕರ್​ ಹೇಳಿದರು. ಏರ್‌ಪೋರ್ಟ್‌ಗಳಲ್ಲಿ ಟೆಸ್ಟ್‌ಗೆ ಸಿದ್ಧತೆ ಮಾಡಿಕೊಳ್ಳಲು ನಾಗರಿಕ ವಿಮಾನಯಾನ ಇಲಾಖೆಯಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಅಂತಾ ಹೇಳಿದರು.

ಇದಕ್ಕೂ ಮುನ್ನ, ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸಚಿವ ಸುಧಾಕರ್ ಇಂಗ್ಲೆಂಡ್​ನಲ್ಲಿನ ಕೊರೊನಾ ರೂಪಾಂತರ ಪ್ರಬೇಧ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಭಾಗಿಯಾಗಿದ್ದರು.

ಬ್ರಿಟನ್​ ವಿಮಾನ ಹಾರಾಟ ರದ್ದು ನಾಳೆ ರಾತ್ರಿಯಿಂದ ಬ್ರಿಟನ್ ವಿಮಾನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಡಿಸೆಂಬರ್ 31ರವರೆಗೆ ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಭಾರತ ಮಾತ್ರವಲ್ಲದೆ 30 ದೇಶಗಳು ಬ್ರಿಟನ್​ಗೆ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ. ನಾಳೆಯೊಳಗೆ ಬ್ರಿಟನ್​ನಿಂದ ಬರುವವರು ಕಡ್ಡಾಯವಾಗಿ RTPCR​ ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.ಬ್ರಿಟನ್​ನಲ್ಲಿ ಹೊಸ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಿಂದಾಗಿ ಈ ಕ್ರಮ ಜರುಗಿಸಲಾಗಿದೆ.

ಷೇರು ಮಾರುಕಟ್ಟೆ ಕುಸಿತ ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಎರಡನೇ ಅಲೆಯ ಭೀತಿ ಎದುರಾಗಿದೆ. ರೂಪಾಂತರಗೊಂಡಿರುವ ಕೊರೊನಾ ವೈರಸ್​ ಸಾಕಷ್ಟು ಅಪಾಯಕಾರಿ ಎನ್ನುವ ವಾದವನ್ನು ತಜ್ಞರು ಮುಂದಿಡುತ್ತಿದ್ದಂತೆ ವಿಶ್ವದ ಷೇರು ಮಾರುಕಟ್ಟೆ ಇಳಿಕೆ ಹಾದಿ ಹಿಡಿದೆ. ಭಾರತದ ಷೇರು ಮಾರುಕಟ್ಟೆ ಕೂಡ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.

ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್​ ಸೂಚ್ಯಂಕ​ 2,037 ಅಂಕ ಕಳೆದುಕೊಂಡು 44,923 ಅಂಕಕ್ಕೆ ಇಳಿಕೆ ಆಗಿತ್ತು. ನಂತರ ಮಾರುಕಟ್ಟೆ ಕೊಂಚ ಚೇತರಿಕೆ ಕಂಡಿತ್ತು. ಮಧ್ಯಾಹ್ನ 3:30ಕ್ಕೆ ಷೇರು ವಹಿವಾಟು ಮುಕ್ತಗೊಳ್ಳುವ ವೇಳೆಗೆ ಸೆನ್ಸೆಕ್ಸ್​ ಸೂಚ್ಯಂಕ ಶೇ. 3.00 ಅಥವಾ 1,406.73 ಅಂಕ ಕಳೆದುಕೊಂಡು 45553.96 ಅಂಕಕ್ಕೆ ನಿಂತಿದೆ. ಇನ್ನು, ನಿಫ್ಟಿ ಶೇ. 3.14 ಅಥವಾ 432.10 ಅಂಕ ಕಳೆದುಕೊಂಡು 13328.40 ಅಂಕಕ್ಕೆ ಕುಸಿದಿದೆ.

ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹೊಸ ಪ್ರಭೇದ ಪತ್ತೆ, ಭಾರತವೂ ಸೇರಿದಂತೆ 30 ದೇಶಗಳಿಂದ ವಿಮಾನಯಾನ ರದ್ದು

Published On - 6:49 pm, Mon, 21 December 20