ಹಾಡು ಹಗಲೇ ವೃದ್ಧನ ಕೊಲೆ
ಮನೆಯಲ್ಲಿ ಯಾರೂ ಇಲ್ಲ ಎಂದುಕೊಂಡು ದುಷ್ಕರ್ಮಿಗಳು ಒಳಗೆ ನುಗ್ಗಿರಬಹುದು. ವೃದ್ಧನನ್ನು ಕೊಂಡು ಕೊಲೆ ಮಾಡಿರಬಹುದು, ಆದರೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರ್ವಾಲ್ ಹಾಗೂ ಗಾಂಧಿಚೌಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಿಜಯಪುರ: ನಗರದ ಗೋಡಗೋಳೆ ಮಾಳಾ ಪ್ರದೇಶದ ಮನೆಯಲ್ಲಿದ್ದ ವೃದ್ಧನ ಕತ್ತುಕೊಯ್ದು ಕೊಲೆ ಮಾಡಲಾಗಿದೆ. ಮೃತರನ್ನು ವಿನಯ್ ನಾಯಕ್ (68) ಎಂದು ಗುರುತಿಸಲಾಗಿದೆ. ಕುಟುಂಬದ ಸದಸ್ಯರು ಹೊರಗೆ ಹೋಗಿದ್ದಾಗ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.