ಪಾಕಿಸ್ತಾನದ ಡ್ರೋನ್​ ರವಾನಿಸಿದ್ದ 11 ಗ್ರೆನೇಡ್​ ಪಂಜಾಬ್​ನಲ್ಲಿ ಪತ್ತೆ

ಡ್ರೋನ್ ಸಂಚರಿಸಬಹುದು ಎಂದು ಶಂಕಿಸಲಾದ ಸ್ಥಳದಲ್ಲಿ ಭಾನುವಾರ ಮುಂಜಾನೆಯಿಂದ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭ 84 ಗ್ರೆನೇಡ್​ಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪಂಜಾಬ್​ನ ಗುರುದಾಸ್​ಪುರದಲ್ಲಿ ಪತ್ತೆಯಾದ ಗ್ರೆನೇಡ್​ಗಳು
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಸಾಧು ಶ್ರೀನಾಥ್​

Updated on:Dec 22, 2020 | 10:34 AM

ಚಂಡೀಗಡ: ಪಾಕಿಸ್ತಾನದಿಂದ ಬಂದಿದ್ದು ಎನ್ನಲಾದ ಡ್ರೋನ್​ ಮೂಲಕ ನೆಲಕ್ಕೆ ಬಿದ್ದ 11 ಕೈಬಾಂಬ್​ಗಳನ್ನು ಪಂಜಾಬ್​ನ ಗುರುದಾಸ್​ಪುರದಲ್ಲಿ ಪೊಲೀಸರು ಪತ್ತೆಹಚ್ಚಿ, ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪಂಜಾಬ್ ಪೊಲೀಸರು ಮತ್ತು ಬಿಎಸ್​ಎಫ್​ ಸಿಬ್ಬಂದಿ ಈ ಡ್ರೋನ್​ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುದಾಸ್​ಪುರ ಜಿಲ್ಲೆಯಲ್ಲಿ ಡ್ರೋನ್​ ಪತ್ತೆಯಾದ ತಕ್ಷಣವೇ ಪಂಜಾಬ್ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದರು. ರಾತ್ರಿ 11.30ರಲ್ಲಿ ಪಾಕ್ ಗಡಿಯಿಂದ ಡ್ರೋನ್ ಭಾರತದ ಗಡಿ ಪ್ರವೇಶಿಸುವುದು ಗುರುತಿಸಿದ ಬಿಎಸ್​ಎಫ್ ಯೋಧರು ಡ್ರೋನ್​ನತ್ತ ಗುಂಡು ಹಾರಿಸಿದರು.

ಡ್ರೋನ್ ಸಂಚರಿಸಬಹುದು ಎಂದು ಶಂಕಿಸಲಾದ ಸ್ಥಳದಲ್ಲಿ ಭಾನುವಾರ ಮುಂಜಾನೆಯಿಂದ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭ 84 ಗ್ರೆನೇಡ್​ಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಆಸ್ಟ್ರಿಯಾ ತಂತ್ರಜ್ಞಾನದ Arges Type HG 84 ಸರಣಿಯ ಗ್ರೆನೇಡ್​ಗಳು ಸ್ಫೋಟಗೊಳ್ಳುವ ಕೇಂದ್ರದ ಸುತ್ತಲಿನ 30 ಮೀಟರ್​ನಲ್ಲಿರುವ ಮನುಷ್ಯರನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ.

ಡ್ರೋನ್​ ಪತ್ತೆಹಚ್ಚಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಬಹುಶಃ ಅದು ಶಸ್ತ್ರಾಸ್ತ್ರಗಳನ್ನು ನೆಲಕ್ಕೆ ಹಾಕಿ, ಪಾಕಿಸ್ತಾನಕ್ಕೆ ಹಿಂದಿರುಗಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟಕ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಡಿಜಿಪಿ ದಿನಕರ ಗುಪ್ತ ಮಾಹಿತಿ ನೀಡಿದ್ದಾರೆ.

Published On - 6:32 pm, Mon, 21 December 20

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?