ಇಷ್ಟ ಇದ್ರೆ ತಗೋಳಿ, ಇಲ್ಲ ಅಂದ್ರೆ ಹೋಗಿ ಅನ್ನುತ್ತಿರುವ ವ್ಯಾಪಾರಿಗಳು: ತರಕಾರಿ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು

|

Updated on: Apr 29, 2021 | 10:33 AM

ಬೆಲೆ ಏರಿಕೆಯಿಂದ ಕಂಗಾಲಾಗುವ ಪರಿಸ್ಥಿತಿ ಗ್ರಾಹಕರದ್ದಾಗಿದೆ. ಸಮಯ ಮೀರಿದರೆ ಅಗತ್ಯವಸ್ತುಗಳು ಸಿಗುವುದಿಲ್ಲ. ವಿಧಿಯಿಲ್ಲದೆ ಕೇಳಿದಷ್ಟು ಹಣ ಕೊಡಬೇಕಾದ ಸ್ಥಿತಿ ಎದುರಾಗಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಏರಿವೆ.

ಇಷ್ಟ ಇದ್ರೆ ತಗೋಳಿ, ಇಲ್ಲ ಅಂದ್ರೆ ಹೋಗಿ ಅನ್ನುತ್ತಿರುವ ವ್ಯಾಪಾರಿಗಳು: ತರಕಾರಿ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು
ಇಷ್ಟ ಇದ್ರೆ ತಗೋಳಿ, ಇಲ್ಲ ಅಂದ್ರೆ ಹೋಗಿ: ತರಕಾರಿ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು
Follow us on

ಬೆಂಗಳೂರು: ಹೆಮ್ಮಾರಿ ಕೊರೊನಾದಿಂದಾಗಿ ರಾಜ್ಯದಲ್ಲಿ 14 ದಿನಗಳ ಕೊವಿಡ್ ಕರ್ಫ್ಯೂ ಜಾರಿಯಲ್ಲಿದೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಒಳ್ಳೆಯದಾಗುತ್ತಿದ್ದರೆ ಇತರೆ ದೈನಂದಿನ ಸಂಗತಿಗಳು ಭಾರೀ ಏರುಪೇರಾಗಿವೆ. ಕೊವಿಡ್ ಕರ್ಫ್ಯೂನಿಂದಾಗಿ ಜನ ಮನೆಗಳಲ್ಲೇ ಇದ್ದಾರೆ. ಈ ಮಧ್ಯೆ, ಜನರಿಗೆ ಅತ್ಯಗತ್ಯವಾಗಿ ತರಕಾರಿ ಬೇಕಿದೆ. ಆದರೆ ಅವುಗಳ ಬೆಲೆ ಗಗನದಲ್ಲಿವೆ. ಜನಸಾಮಾನ್ಯ ಕೈಗೆಟುಕದಂತಾಗಿದೆ. ಇದೇ ವೇಳೆ ರಾಜಧಾನಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಕೊವಿಡ್ ಕರ್ಫ್ಯೂನಿಂದಾಗಿ ಅಂಗಡಿಮುಂಗಟ್ಟುಗಳನ್ನು ಬೆಳಗ್ಗೆ 10 ಗಂಟೆಗೇ ಮುಚ್ಚಿಸುತ್ತಿದ್ದಾರೆ.

ಬೇಗ ಬೇಗ ಅಂಗಡಿ ಬಂದ್ ಮಾಡುವಂತೆ ಪೋಲೀಸರು ಖಡಕ್ ವಾರ್ನಿಂಗ್ ನೀಡುತ್ತಿದ್ದಾರೆ. ಖರೀದಿ- ಮಾರಾಟಕ್ಕಾಗಿ ಗ್ರಾಹಕರು ಮತ್ತು ವ್ಯಾಪಾರಿಗಳು ಬೇಗ ಬೇಗ ಅಗತ್ಯ ವಸ್ತು ಮಾರಾಟ, ಖರೀದಿ ಮಾಡಿ ಮನೆ ಸೇರೋ ಅವಸರದಲ್ಲಿದ್ದಾರೆ.

ಲಾಕ್ ಡೌನ್ ಟೈಂನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ..!
ಈ ಮಧ್ಯೆ, ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಕಂಗಾಲಾಗುವ ಪರಿಸ್ಥಿತಿ ಗ್ರಾಹಕರದ್ದಾಗಿದೆ. ಸಮಯ ಮೀರಿದರೆ ಅಗತ್ಯವಸ್ತುಗಳು ಸಿಗುವುದಿಲ್ಲ. ವಿಧಿಯಿಲ್ಲದೆ ಕೇಳಿದಷ್ಟು ಹಣ ಕೊಡಬೇಕಾದ ಸ್ಥಿತಿ ಎದುರಾಗಿದೆ. 10 ರೂ. ಇದ್ದ ಒಂದು ಕಟ್ಟು ಕೊತ್ತಂಬರಿ ಈಗ 30 ರೂಪಾಯಿಗೆ ಮಾರಾಟವಾಗುತ್ತಿದೆ. 1 ಕೆಜಿ ಬೀನ್ಸ್ 40-50 ರೂಪಾಯಿಗೆ ಮಾರಾಟವಾಗುತ್ತಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಏರಿವೆ.

ಒಂದು ಕಟ್ಟು ವೀಳ್ಯೆದೆಲೆ 30 ರೂ ಇತ್ತು, ಈಗ 80 ರೂ ಆಗಿದೆ. ಒಂದು ನಿಂಬೆಹಣ್ಣು 3 ರೂ. ಇತ್ತು, ಈಗ 10 ರೂ.ಗೆ ಮಾರಾಟವಾಗುತ್ತಿದೆ.
80 ರೂ. ಇದ್ದ ಬಟಾಣಿ ಬೆಲೆ ಈಗ 150 ರೂ. ಗೆ ಏರಿಕೆಯಾಗಿದೆ. ತೊಂಡೆಕಾಯಿ 90 ರೂ ಇತ್ತು ಈಗ 100 ರೂ. ದಾಟಿದೆ.

ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು:

ತರಕಾರಿ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು

ಹೀಗೆ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲಾಗಿದ್ದು ಈಗ್ಲೇ ಕೆಲಸ ಇಲ್ಲ, ಇಂತಹ ಸಮಯದಲ್ಲಿ ಏರಿಕೆ ಮಾಡಿದ್ರೆ ಹೇಗೆ..? ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಮಾರಾಟಗಾರರು ಮಾತ್ರ ಯಾವುದೇ ಕಾಳಜಿಯೂ ಇಲ್ಲದೆ ಇಷ್ಟ ಇದ್ರೆ ತಗೋಳಿ, ಇಲ್ಲ ಅಂದ್ರೆ ಹೋಗಿ ಅಂತಾರೆ. ವಿಧಿಯಿಲ್ಲದೇ ತೆಗೆದುಕೊಳ್ಳಬೇಕು ಎಂದು ಮಹಿಳೆಯೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೂಲ್ಸ್ ಬ್ರೇಕ್; ಹಣ್ಣು, ತರಕಾರಿ ಖರೀದಿಗೆ ಮುಗಿಬಿದ್ದ ಜನ

ಗಲ್ಲಿಗಳಲ್ಲಿ ತರಕಾರಿ ಮಾರುತ್ತಿದ್ದವನಿಗೆ ಕೊರೊನಾ, ತರಕಾರಿ ಕೊಂಡವರಲ್ಲಿ ಹೆಚ್ಚಾಯ್ತು ಆತಂಕ

(due to covid curfew vegetables rate in bangalore increase)

Published On - 10:29 am, Thu, 29 April 21