ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಪಾಂಡ್ಯಪುರದಲ್ಲಿ ಕಾಡಾನೆಗಳ ದಾಳಿಯಿಂದ ಅಡಕೆ ಮತ್ತು ತೆಂಗಿನ ತೋಟ ನಾಶವಾಗಿದೆ. ಆರು ಕಾಡಾನೆಗಳ ಗ್ಯಾಂಗ್ ತೋಟಗಳಿಗೆ ನುಗ್ಗಿ ಸುಮಾರು 50 ಅಡಿಕೆ ಮರ ಮತ್ತು 70 ಬಾಳೆ ಗಿಡಗಳನ್ನು ನಾಶಮಾಡಿವೆ. ಮಹೇಶ್, ಶ್ರೀನಿವಾಸ್, ರಮೇಶ್ ಎಂಬುವರಿಗೆ ಸೇರಿದ ತೋಟ ಆನೆಗಳ ಅಟ್ಟಹಾಸದಿಂದ ಅಪಾರ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತಡರಾತ್ರಿ ದಾಳಿ ನಡೆಸಿದ ಕಾಡಾನೆಗಳು ಕಾಡಿಗೆ ಹಿಂದಿರುಗಿವೆ. ಆದರೆ ಈ ರೀತಿಯ ದಾಳಿಗಳು ಆಗಾಗ ನಡೆಯುತ್ತಿದ್ದು, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
arecanut
ಇದನ್ನೂ ಓದಿ: Kaun Banega Crorepati ಕರೋಡ್ಪತಿ ಆಗೋ ಆಸೆಗೆ ಬಿದ್ದು.. 84 ಸಾವಿರ ರೂ. ಲಾಸ್ ಮಾಡ್ಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!