ಬೆಂಗಳೂರು: ಕೊರೊನಾ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸೋಂಕು ತಗುಲಿದ್ದು ಖಚಿತವಾದರೆ ಮೊದಲು ಏನು ಮಾಡಬೇಕು? ಆಸ್ಪತ್ರೆಗಳನ್ನು ಹೇಗೆ ಸಂಪರ್ಕಿಸಬೇಕು? ಅಥವಾ ಆ್ಯಂಬುಲೆನ್ಸ್ಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆಗಳು ಹಲವರಲ್ಲಿವೆ. ಬೆಂಗಳೂರು ವ್ಯಾಪ್ತಿಯ ನಾಗರಿಕರ ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ತುರ್ತು ಆ್ಯಂಬುಲೆನ್ಸ್ ಅಗತ್ಯ ಬಿದ್ದಲ್ಲಿ ಸಾರ್ವಜನಿಕರು 1912 ಮತ್ತು 108ಕ್ಕೆ ಕರೆ ಮಾಡಬಹುದು. ಈ ಮೂಲಕ ಯಾವುದೇ ಗಾಬರಿಗೂ ಒಳಗಾಗದೇ ಆ್ಯಂಬುಲೆನ್ಸ್ ಸೇವೆಯನ್ನು ಪಡೆಯಬಹುದು.
ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್ಡೆಸಿವಿರ್ ಔಷಧ ಪಡೆಯಲು 7019861430 ಕ್ಕೆ ಕರೆ ಮಾಡಬಹುದು. ಆಸ್ಪತ್ರೆಗಳಲ್ಲಿ ಬೆಡ್ ದೊರೆಯದಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು. ರೋಗಿಗಳಿಗೆ ಅಥವಾ ಸೋಂಕಿತರಿಗೆ ಆಕ್ಸಿಜನ್ಗಾಗಿ 1912 ಅಥವಾ 108ಕ್ಕೆ ಕರೆ ಮಾಡುವ ಮೂಲಕ ಸೌಲಭ್ಯ ದೊರಕಿಸಿಕೊಳ್ಳಬಹುದು.
ಕೊರೊನಾಗೆ ಸಂಬಂಧಿಸಿದ ಇತರ ಯಾವುದೇ ಅಗತ್ಯ ಮಾಹಿತಿ ಅಥವಾ ಸೇವೆಗಳ ಕುರಿತು ತಿಳಿಯಲು ಬಿಬಿಎಂಪಿ ವ್ಯಾಪ್ತಿಯ ನಾಗರಿಕರು 1912 ಕ್ಕೆ ಮತ್ತು ರಾಜ್ಯದ ಇತರ ಭಾಗಗಳ ನಾಗರಿಕರು 14410 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಸರ್ಕಾರ ನಿಗದಿಪಡಿಸಿರುವ ಶುಲ್ಕ ಆದೇಶಗಳನ್ನು ಪಾಲಿಸಿ: ಫನಾ
ಕೊವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರ ಜತೆ ಕೈಜೋಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳಿ. ಕೊರೊನಾ ಸೋಂಕಿತರಿಂದ ಹೆಚ್ಚುವರಿ ಶುಲ್ಕವನ್ನ ಪಡೆಯಬೇಡಿ. ಸರ್ಕಾರದ ಆದೇಶಗಳನ್ನು ಪಾಲಿಸಿ ಎಂದು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಶನ್(ಫನಾ) ಪತ್ರ ಬರೆದಿದೆ.
ಸೋಂಕಿತರಿಗೆ ಬೆಡ್ ಹಂಚಿಕೆಯಲ್ಲಿ ಪಾರದರ್ಶಕತೆ ಇರಲಿ. ಸರ್ಕಾರಕ್ಕೆ ಕೊವಿಡ್ ಬೆಡ್ ಕಾಯ್ದಿರಿಸುವ ಬಗ್ಗೆ ಗಮನ ಕೊಡಿ. ಪೋರ್ಟಲ್‌ನಲ್ಲಿ ಬೆಡ್ ವಿವರಗಳನ್ನ ನೀಡುವತ್ತ ಗಮನ ಕೊಡಿ. ಸಣ್ಣಪುಟ್ಟ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ಕೆಟ್ಟ ಹೆಸರು ಬರುವುದು ಬೇಡ. ಒಟ್ಟಾಗಿ ಕೊವಿಡ್ ವಿರುದ್ಧ ಹೋರಾಡಿ, ಜಯ ಸಾಧಿಸೋಣ ಎಂದು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಫನಾ ಪತ್ರ ಬರೆದಿದೆ.
ಇದನ್ನೂ ಓದಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಅನುಮತಿ ನೀಡಿದ ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ
Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(Emergency health services contact number in Bengaluru and Karnataka for Covid 19 treatment)
Published On - 4:46 pm, Fri, 23 April 21