ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಅನುಮತಿ ನೀಡಿದ ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ

ಔಷಧ ರೂಪದಲ್ಲಿ ಝೈಡಸ್ ಕ್ಯಾಡಿಲ್ಲಾ ಕಂಪನಿಯ ವಿರಾಫಿನ್ ಔಷಧ ಬಳಸಲು ಅನುಮತಿ ದೊರೆತಿದ್ದು, ಒಂದು ಡೋಸ್ ಲಸಿಕೆಯ ಬಳಕೆಯು ಕೊರೊನಾ ಸೋಂಕಿತರಲ್ಲಿ ಚೇತರಿಕೆ ಉಂಟುಮಾಡಿದೆ ಎಂದು ಕಂಪನಿ ತಿಳಿಸಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಅನುಮತಿ ನೀಡಿದ ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ
ಸಾಂಕೇತಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 23, 2021 | 4:21 PM

ದೆಹಲಿ: ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿಯು ಝೈಡಸ್ ಕ್ಯಾಡಿಲ್ಲಾ ಕಂಪನಿಯ ವಿರಾಫಿನ್ ಔಷಧವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲು ಅನುಮತಿ ನೀಡಿದೆ. ಲಘು ಕೊರೊನಾದಿಂದ ಬಳಲುತ್ತಿರುವವರಿಗೆ ಔಷಧ ರೂಪದಲ್ಲಿ ಝೈಡಸ್ ಕ್ಯಾಡಿಲ್ಲಾ ಕಂಪನಿಯ ವಿರಾಫಿನ್ ಔಷಧ ಬಳಸಲು ಅನುಮತಿ ದೊರೆತಿದ್ದು, ಒಂದು ಡೋಸ್ ಲಸಿಕೆಯ ಬಳಕೆಯು ಕೊರೊನಾ ಸೋಂಕಿತರಲ್ಲಿ ಚೇತರಿಕೆ ಉಂಟುಮಾಡಿದೆ ಎಂದು ಕಂಪನಿ ತಿಳಿಸಿದೆ.

ಚರ್ಮದ ಒಳಪದರಕ್ಕೆ ಕೊಡುವ ವಿರಾಫಿನ್​ನಲ್ಲಿ PegIFN ಔಷಧವಿದೆ. ಈ ಸಿಂಗಲ್ ಡೋಸ್ ಔಷಧಿ ಇದು ವೈರಾಣು ಸೋಂಕು ನಿರೋಧಕ, ಕೊರೊನಾ ಸೋಂಕು ಪ್ರಕರಣಗಳಲ್ಲೂ ಪರಿಣಾಮಕಾರಿ ಎಂದು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಕೋವಿಡ್-19 ರೋಗಿಗಳಿಗೆ ಈ ಔಷಧಿ ನೀಡಿದಾಗ ಕೃತಕ ಆಮ್ಲಜನಕವನ್ನು ನೀಡಬೇಕಾದ ಅಗತ್ಯವೂ ಹೆಚ್ಚಿನ ಸಂದರ್ಭಗಳಲ್ಲಿ ಕಂಡುಬರಲಿಲ್ಲ. ಕೊರೊನಾ ಸೋಂಕಿನಿಂದ ಉಂಟಾಗುವ ಉಸಿರಾಟದ ಹಲವು ಸಮಸ್ಯೆಗಳನ್ನು ವಿರಾಫಿನ್ ಪರಿಣಾಮಕಾರಿಯಾಗಿ ತಡೆದದ್ದು ಪ್ರಯೋಗಗಳ ವೇಳೆ ದಾಖಲಾಗಿದೆ. ಕೊರೊನಾದಿಂದ ರೋಗಿಗಳು ಚೇತರಿಸಿಕೊಂಡ ನಂತರ ಕಾಣಿಸುವ ಕೆಲ ಇತರ ಆರೋಗ್ಯದ ಸಮಸ್ಯೆಗಳನ್ನೂ ಇದು ತಡೆಯಬಲ್ಲದು.  ಎಂದು ಕಂಪನಿ ಹೇಳಿಕೊಂಡಿದೆ. ವಿರಾಫಿನ್ ಚಿಕಿತ್ಸೆಯ ನಂತರ ಕೊರೊನಾ ಸೋಂಕು ದೃಢಪಟ್ಟಿದ್ದ ಶೇ 91.15ರಷ್ಟು ರೋಗಿಗಳಲ್ಲಿ ಆರ್​ಟಿ-ಪಿಸಿಆರ್ ಪರೀಕ್ಷೆ ವೇಳೆ 7 ದಿನಗಳಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: Long Covid: ಕೊರೊನಾ ನೆಗೆಟಿವ್​ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು

ಕೊವಿಡ್​ನಿಂದ ಭಯಭೀತರಾದ ರೋಗಿಗಳಿಗೆ ಉತ್ಸಾಹ ತುಂಬಲು ವೈದ್ಯರಿಂದ ಮನೋರಂಜನೆ​; ವಿಡಿಯೋ ವೈರಲ್​

(Zydus cadila gets emergency approval for covid treatment in India GGD)

Published On - 3:46 pm, Fri, 23 April 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ