ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ಗೋಕಾಕ್​ನ ಈರಣ್ಣ ಕಡಾಡಿಗೆ ತಡವಾಗಿ ಸಿಕ್ಕಿರುವ ಬರ್ತ್​ಡೆ ಗಿಫ್ಟ್!

|

Updated on: Jun 08, 2020 | 4:55 PM

ರಾಜ್ಯಸಭಾ ಚುನಾವಣೆಗೆ ಸರ್ಪ್ರೈಸ್​ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ  ಈರಣ್ಣ ಕಡಾಡಿ  1989 ರಿಂದ ರಾಜ್ಯ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ 1966ರರ ಜೂನ್ 1ರಂದು ಜನಿಸಿರುವ ಕಡಾಡಿಗೆ ತಡವಾಗಿ ಸಿಕ್ಕಿರುವ ಬರ್ತ್​ಡೆ ಗಿಫ್ಟ್. ಅರಭಾವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಆರಂಭ ಮಾಡಿದ ಈರಣ್ಣ ಕಡಾಡಿ, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1994 ರಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ […]

ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ಗೋಕಾಕ್​ನ ಈರಣ್ಣ ಕಡಾಡಿಗೆ ತಡವಾಗಿ ಸಿಕ್ಕಿರುವ ಬರ್ತ್​ಡೆ ಗಿಫ್ಟ್!
Follow us on

ರಾಜ್ಯಸಭಾ ಚುನಾವಣೆಗೆ ಸರ್ಪ್ರೈಸ್​ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ  ಈರಣ್ಣ ಕಡಾಡಿ  1989 ರಿಂದ ರಾಜ್ಯ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ 1966ರರ ಜೂನ್ 1ರಂದು ಜನಿಸಿರುವ ಕಡಾಡಿಗೆ ತಡವಾಗಿ ಸಿಕ್ಕಿರುವ ಬರ್ತ್​ಡೆ ಗಿಫ್ಟ್.

ಅರಭಾವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಆರಂಭ ಮಾಡಿದ ಈರಣ್ಣ ಕಡಾಡಿ, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

1994 ರಲ್ಲಿ ಅರಭಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಮಾಜಿ ಸಚಿವ ವ್ಹಿ.ಎಸ್. ಕೌಜಲಗಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದವರು. 2010ರಲ್ಲಿ ಬೆಳಗಾವಿ ಜಿ.ಪಂ. ಅಧ್ಯಕ್ಷರಾಗಿದ್ದರು‌. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈರಣ್ಣ ಕಡಾಡಿ‌, ಮೊದಲಿನಿಂದಲೂ ಆರ್‌ಎಸ್‌ಎಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು  ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Published On - 4:48 pm, Mon, 8 June 20