ಚಿಕ್ಕಬಳ್ಳಾಪುರ: ಬಾರ್ನಲ್ಲಿ ಕಂಠಪೂರ್ತಿ ಕುಡಿದು ಹಣ ಕೊಡಲ್ಲ ಅಂದಿದ್ದಕ್ಕೆ ಶುರುವಾದ ಗಲಾಟೆ ಕೊನೆಗೆ ಮದ್ಯಪ್ರಿಯನ ಮೇಲೆ ಹಲ್ಲೆಯಲ್ಲಿ ಅಂತ್ಯವಾಗಿರುವ ಪ್ರಸಂಗ ಜಿಲ್ಲೆಯ ಚಿಂತಾಮಣಿಯಲ್ಲಿರುವ ಗಣೇಶ್ ಬಾರ್ನಲ್ಲಿ ಬೆಳಕಿಗೆ ಬಂದಿದೆ. ಬಾರ್ ಕ್ಯಾಶಿಯರ್ನಿಂದ ಅಮ್ಜದ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಆತನ ಕುಟುಂಬದವರು ಬಾರ್ ಎದುರು ಗಲಾಟೆ ಮಾಡಿದ್ದಾರೆ.
ಬಾರ್ ಎದುರು ಅಮ್ಜದ್ ಸಂಬಂಧಿಕರಿಂದ ಗಲಾಟೆ ನಡೆದಿದೆ. ಸದ್ಯ, ಹಲ್ಲೆಯಲ್ಲಿ ಗಾಯಗೊಂಡಿರುವ ಅಮ್ಜದ್ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನೆಲಮಂಗಲದ ಹಿಪ್ಪೇಆಂಜನೇಯ ಲೇಔಟ್ನ ಮನೆಯಲ್ಲಿ ಕಳವು
ಇತ್ತ, ನೆಲಮಂಗಲದ ಹಿಪ್ಪೇಆಂಜನೇಯ ಲೇಔಟ್ನ ಮನೆಯಲ್ಲಿ ಕಳವು ನಡೆದಿರುವುದು ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ. ವೆಂಕಟೇಶ್ ಎಂಬುವವರ ಮನೆಯಲ್ಲಿ 25 ಸಾವಿರ ನಗದು ಕಳ್ಳತನವಾಗಿದೆ. ಕಾರಿನಲ್ಲಿ ಬಂದ ಖದೀಮರು 25ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಕಿರಾತಕರು ಮನೆ ಬಳಿ ಕಾರು ನಿಲ್ಲಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿವೃತ್ತ DySP ಕೃಷ್ಣ ಮೂರ್ತಿ ಜೈಲಿಗೆ
ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ನಿವೃತ್ತ ಡಿವೈಎಸ್ಪಿ ಕೃಷ್ಣ ಮೂರ್ತಿ ಜೈಲುಪಾಲಾಗಿದ್ದಾರೆ. ಕೃಷ್ಣಮೂರ್ತಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ತುಮಕೂರಿನ 7ನೇ ಅಧಿಕ ಸತ್ರ ಜಿಲ್ಲಾ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ನಿವಾಸದ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. ಇದೀಗ, ಕೃಷ್ಣಮೂರ್ತಿಗೆ 17 ಲಕ್ಷ ದಂಡ ವಿಧಿಸಿ ಕೋರ್ಟ್ ಜೈಲಿಗೆ ಕಳುಹಿಸಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಲೆಮರೆಸಿಕೊಂಡಿರುವ ಜೆ.ಪಿ.ನಗರದ ಉದ್ಯಮಿ ಮನೆ ಮೇಲೆ ಎಸ್ಐಟಿ ದಾಳಿ
Published On - 6:05 pm, Sat, 20 March 21