ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಲೆಮರೆಸಿಕೊಂಡಿರುವ ಜೆ.ಪಿ.ನಗರದ ಉದ್ಯಮಿ ಮನೆ ಮೇಲೆ ಎಸ್ಐಟಿ ದಾಳಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಿಗೆ ನೆರವು ನೀಡಿದ್ದ ಉದ್ಯಮಿ ಮನೆ ಮೇಲೆ ದಾಳಿ ನಡೆದಿದೆ. ಉದ್ಯಮಿ ಶಿವಕುಮಾರ್ ನಿವಾಸದ ಮೇಲೆ ಎಸ್ಐಟಿ ದಾಳಿ ನಡೆದಿದೆ. ಜೆ.ಪಿ.ನಗರದ ಕೊತ್ತನೂರು ದಿಣ್ಣೆಯಲ್ಲಿನ ಮನೆ ಮೇಲೆ ದಾಳಿ ನಡೆದಿದೆ. ಜೆ.ಪಿ.ನಗರದ 7ನೇ ಹಂತದ ಕೊತ್ತನೂರು ದಿಣ್ಣೆಯಲ್ಲಿರುವ ಉದ್ಯಮಿ ಶಿವಕುಮಾರ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಿಗೆ ನೆರವು ನೀಡಿದ್ದ ಉದ್ಯಮಿ ಮನೆ ಮೇಲೆ ದಾಳಿ ನಡೆದಿದೆ. ಉದ್ಯಮಿ ಶಿವಕುಮಾರ್ ನಿವಾಸದ ಮೇಲೆ ಎಸ್ಐಟಿ ದಾಳಿ ನಡೆದಿದೆ. ಜೆ.ಪಿ.ನಗರದ ಕೊತ್ತನೂರು ದಿಣ್ಣೆಯಲ್ಲಿನ ಮನೆ ಮೇಲೆ ದಾಳಿ ನಡೆದಿದೆ. ಜೆ.ಪಿ.ನಗರದ 7ನೇ ಹಂತದ ಕೊತ್ತನೂರು ದಿಣ್ಣೆಯಲ್ಲಿರುವ ಉದ್ಯಮಿ ಶಿವಕುಮಾರ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದ್ಯಮಿ ಶಿವಕುಮಾರ್ ಶಂಕಿತ ನರೇಶ್ ಜೊತೆಗೆ 3 ತಿಂಗಳಿಂದ ನಿರಂತರ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ಮಾ.5ರಂದು ಯುವತಿಗೆ ಹಣ ನೀಡಿರುವ ಸುಳಿವು ಆಧರಿಸಿ ಶಿವಕುಮಾರ್ ಮನೆ ಮೇಲೆ ಎಸ್ಐಟಿ ತಂಡ ದಾಳಿ ಮಾಡಿದೆ. ಸದ್ಯ ಶಿವಕುಮಾರ್, ಕಳೆದ 10 ದಿನದಿಂದ ತಲೆ ಮರೆಸಿಕೊಂಡಿದ್ದಾರೆ.
ಇತ್ತ, ಶಿವಕುಮಾರ್ ಕುಟುಂಬಸ್ಥರಿಂದ ಮಾಹಿತಿ ಪಡೆದು ಎಸ್ಐಟಿ ಅಧಿಕಾರಿಗಳು ವಾಪಸ್ ಆಗಿದ್ದಾರೆ. ಅಧಿಕಾರಿಗಳು ಮಾಹಿತಿ ಪಡೆದು ಹಿಂದಿರುಗಿದ್ದಾರೆ.
ಇದನ್ನೂ ಓದಿ: ‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳುತ್ತಿರುವ ಸರ್ಕಾರಕ್ಕೆ ನಾವೂ ಉತ್ತರ ನೀಡಬೇಕಿದೆ’