ಕಂಬಳದಲ್ಲಿ ತನ್ನದೇ ದಾಖಲೆ ಮುರಿದು ಓಡಿದ ಮಿಜಾರು ಶ್ರೀನಿವಾಸ ಗೌಡ
ಈ ಓಟದಲ್ಲಿ ಅವರು ವಾಸ್ತವವಾಗಿ 125 ಮೀಟರ್ ದೂರವನ್ನು 11.21 ಸೆಕೆಂಡ್ಗಳಲ್ಲಿ ತಲುಪಿದ್ದು, ಅದನ್ನು 100 ಮೀಟರ್ಗೆ ಹೋಲಿಕೆ ಮಾಡಿದಾಗ ಕೇವಲ 8.96 ಸೆಕೆಂಡ್ಗಳಲ್ಲಿ ಗುರಿ ತಲುಪಿದಂತಾಗುತ್ತದೆ.
ಮಂಗಳೂರು: ಕಂಬಳದಲ್ಲಿ ಅತಿ ವೇಗವಾಗಿ ಓಡುವ ಮೂಲಕ ಕಳೆದ ಬಾರಿ ದಾಖಲೆ ಬರೆದಿದ್ದ ಮಿಜಾರು ಶ್ರೀನಿವಾಸ ಗೌಡ, ಈ ವರ್ಷ ತನ್ನ ಹಳೆಯ ದಾಖಲೆಯನ್ನೇ ಮುರಿದುಹಾಕಿದ್ದಾರೆ. ವೇಣೂರುನಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ ಗೌಡ ಹೊಸ ದಾಖಲೆ ನಿರ್ಮಿಸಿದ್ದು, 100 ಮೀಟರ್ ದೂರವನ್ನು ಕೇವಲ 8.96 ಸೆಕೆಂಡ್ಗಳಲ್ಲಿ ತಲುಪಿದ್ದಾರೆ. ಈ ಓಟದಲ್ಲಿ ಅವರು ವಾಸ್ತವವಾಗಿ 125 ಮೀಟರ್ ದೂರವನ್ನು 11.21 ಸೆಕೆಂಡ್ಗಳಲ್ಲಿ ತಲುಪಿದ್ದು, ಅದನ್ನು 100 ಮೀಟರ್ಗೆ ಹೋಲಿಕೆ ಮಾಡಿದಾಗ ಕೇವಲ 8.96 ಸೆಕೆಂಡ್ಗಳಲ್ಲಿ ಗುರಿ ತಲುಪಿದಂತಾಗುತ್ತದೆ.
ಅಂದಹಾಗೆ ಕಳೆದ ವರ್ಷ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 100 ಮೀಟರ್ ಅಂತರವನ್ನು 9.55 ಸೆಕೆಂಡ್‌ನಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಅದಾದ ನಂತರ ಕಳೆದ ವರ್ಷದ ವೇಣೂರು ಕಂಬಳದಲ್ಲಿ ಈ ದಾಖಲೆ ಮುರಿದಿದ್ದ ಬಜಗೋಳಿ ನಿಶಾಂತ್ ಶೆಟ್ಟಿ ಎನ್ನುವವರು 100 ಮೀಟರ್ ಅಂತರವನ್ನು 9.52 ಸೆಕೆಂಡ್‌ನಲ್ಲಿ ಕ್ರಮಿಸಿದ್ದರು. ಅಲ್ಲದೇ ಬೈಂದೂರು ವಿಶ್ವನಾಥ ದೇವಾಡಿಗ ಎಂಬುವವರು ಈ ವರ್ಷ ನಡೆದ ಐಕಳ ಕಂಬಳದಲ್ಲಿ 100 ಮೀಟರ್ ಅನ್ನು 9.15 ಸೆಕೆಂಡ್‌ನಲ್ಲಿ ಕ್ರಮಿಸಿ ಇಬ್ಬರ ದಾಖಲೆಯನ್ನೂ ಬದಿಗೊತ್ತಿ ಹೊಸ ದಾಖಲೆ ಬರೆದಿದ್ದರು. ಆದರೆ, ಇದೀಗ ಈ ದಾಖಲೆಯನ್ನೂ ಪುಡಿಗಟ್ಟಿ ಮತ್ತೆ ಶ್ರೀನಿವಾಸ ಗೌಡ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: Kambala Record ಕಂಬಳದಲ್ಲಿ ಹೊಸ ದಾಖಲೆ: ಶ್ರೀನಿವಾಸ್ ಗೌಡರ ದಾಖಲೆ ಮುರಿದ ಬೈಂದೂರು ವಿಶ್ವನಾಥ್
ಜಗತ್ತಿನ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ!
Published On - 5:36 pm, Sat, 20 March 21