BKS Varma Death: ಖ್ಯಾತ ಚಿತ್ರ ಕಲಾವಿದ ಬಿಕೆಸ್​ಎಸ್ ವರ್ಮಾ ನಿಧನ

|

Updated on: Feb 06, 2023 | 10:41 AM

ಬೆಂಗಳೂರು: ಖ್ಯಾತ ಕಲಾವಿದ ಬಿ.ಕೆ.ಎಸ್.ವರ್ಮಾ (74) ಹೃದಯಾಘಾತದಿಂದ ನಿಧನರಾಗಿದ್ದಾರೆ.

BKS Varma Death: ಖ್ಯಾತ ಚಿತ್ರ ಕಲಾವಿದ ಬಿಕೆಸ್​ಎಸ್ ವರ್ಮಾ ನಿಧನ
ಖ್ಯಾತ ಚಿತ್ರ ಕಲಾವಿದ ಬಿಕೆಸ್​ಎಸ್ ವರ್ಮಾ
Follow us on

ಬೆಂಗಳೂರು: ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. 1986ರಲ್ಲಿ ವರ್ಮಾ ಅವರ ಮೊದಲ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆದಿತ್ತು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದ್ದವು. ಮನೆಮನೆಗಳಲ್ಲೂ ಪೂಜೆಗೊಳ್ಳುತ್ತಿದ್ದವು.

ಒಮ್ಮೆ ಮೈಸೂರಿನ ಜಗನ್ಮೋಹನ ಅರಮನೆ’ಯಲ್ಲಿ ರಾಜಾ ರವಿವರ್ಮಾ ರವರ ಪೇಂಟಿಂಗ್ ಗಳನ್ನು ವೀಕ್ಷಿಸುತ್ತಿದ್ದಿದ್ದಾಗ ತನ್ಮಯರಾಗಿ ವರ್ಮಾ ಎಂಬ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡನಂತರ ಅವರ ಜೀವನದ ದಿಶೆಯೇ ಬದಲಾಯಿತಂತೆ.

ಆ ದಿನಗಳಲ್ಲಿ ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗ್, ಥ್ರೇಡ್ ಪೇಂಟಿಂಗ್, ಮಾಡಿ ಹಣಗಳಿಸಿದ್ದರು. ತಮ್ಮ ಎರಡೂ ಕೈಗಳ ಬೆರೆಳುಗಳನ್ನೆ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸಿರುವ ಪರಿ ಅನನ್ಯ.

ಅವರು ಬಿಡಿಸಿದ ಓಂಗಣೇಶ ಚಿತ್ತಾರ ಜನರ ಆಸಕ್ತಿಯನ್ನು ಕೆರಳಿಸಿತು. ಎರಡೆ ನಿಮಿಷಗಳಲ್ಲಿ ಸುಂದರವಾದ ಚಿತ್ರಕಲೆಯನ್ನು ಬಿಡಿಸುವ ಕಲೆಯನ್ನು ಮೆಚ್ಚಿ ಸ್ವಾಗತಿಸಿದ ಕಲಾವಿದರಲ್ಲಿ ಮುಖ್ಯರು,ಸೂಪರ್ ಸ್ಟಾರ್ ರಜನಿಕಾಂತ್, ಮೇರುನಟ ಡಾ. ರಾಜ್ ಕುಮಾರ್,ಅಂತಾರಾಷ್ಟ್ರೀಯ ಸುಪ್ರಸಿದ್ಧ ಕಲಾವಿದ ಡಾ.ರೋರಿಕ್, ಮತ್ತು ದೇವಿಕಾರಾಣಿ ದಂಪತಿಗಳು

Published On - 10:34 am, Mon, 6 February 23