ತೋಟದಲ್ಲೇ ಬಾಡುತ್ತಿದೆ ಮಾವು; 1983 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹಣ್ಣಿಗೆ ಬೆಲೆ ಸಿಗದೆ ರೈತರು ಕಂಗಾಲು

|

Updated on: May 23, 2021 | 3:15 PM

ಸರಕಾರ ಹಣ್ಣು ಬೆಳೆಗಾರರಿಗೆ 10 ಸಾವಿರ ಪ್ರತಿ ಎಕರೆಗೆ ಕೊಡುವುದಾಗಿ ಹೇಳಿದೆ. ಆದರೆ ಸರಕಾರ ಕೊಡುವ ಆ ಹತ್ತು ಸಾವಿರ ರೂಪಾಯಿ ಹಣ ಕೂಲಿ ಆಳಿಗೂ ಸಾಕಾಗುವುದಿಲ್ಲ. ಇನ್ನೂ ಜಿಲ್ಲೆಯಲ್ಲಿ 1983 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಗಿಡದ ತುಂಬಾ ಹಣ್ಣುಗಳೇ ಕಾಣುತ್ತವೆ. ಆದರೆ ಹಣ್ಣು ಕಟಾವು ಮಾಡದೆ ಇದ್ದರಿಂದ ಹಣ್ಣಾಗಿ ಮಾವು ಉದುರಿ ಬಿದ್ದಿದ್ದು, ಕೊಳೆತು ಹೋಗುತ್ತಿವೆ ಎಂದು ರೈತರಾದ ಶ್ರೀಕಾಂತ್ ಸ್ವಾಮಿ ಹೇಳಿದ್ದಾರೆ.

ತೋಟದಲ್ಲೇ ಬಾಡುತ್ತಿದೆ ಮಾವು; 1983 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹಣ್ಣಿಗೆ ಬೆಲೆ ಸಿಗದೆ ರೈತರು ಕಂಗಾಲು
ಮಾವಿನ ಹಣ್ಣು
Follow us on

ಬೀದರ್: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರಕಾರ ಜಾರಿಗೆ ತಂದಿರುವ ಲಾಕ್​ಡೌನ್​ನಿಂದ ರೈತರು ಕಂಗಾಲಾಗಿದ್ದಾನೆ. ಪ್ರತಿ ವರ್ಷ ಬೆಸಿಗೆಯಲ್ಲಿ ಮಾವು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ ರೈತರಿಗೆ ಈಗ ಮಾವು ಮಾರಲು ಅವಕಾಶವೇ ಇಲ್ಲದಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಬೆಳೆಸಿದ ಮಾವು ಹೊಲದಲ್ಲಿಯೇ ಕೊಳೆಯುತ್ತಿದ್ದು, ಮಾವನ್ನೇ ನಂಬಿದ ರೈತರ ಬದುಕು ಕಣ್ಣೀರಿಡುವಂತಾಗಿದೆ. ಇದೆಕ್ಕೆಲ್ಲ ಸರಕಾರವೇ ಕಾರಣ. ನಮಗೆ ಮಾವು ವ್ಯಾಪರಕ್ಕೆ ಸ್ವಲ್ಪ ಅವಕಾಶ ನೀಡಿ. ಇರುವ ಅಲ್ಪ ಸ್ವಲ್ಪ ಬೆಳೆಯಿಂದಲಾದರು ನಾಲ್ಕು ಕಾಸು ಸಂಪಾದನೆ ಮಾಡಿಕೊಳ್ಳಲು ಅವಕಾಶ ಮಾಡಿ ಎಂದು ರೈತರು ಆಗ್ರಹಿಸಿದ್ದಾರೆ.

ಪ್ರಸಕ್ತ ವರ್ಷ ಮಳೆ ಉತ್ತಮವಾಗಿ ಬಂದಿರುವ ಹಿನ್ನಲೆಯಲ್ಲಿ ಸಮೃದ್ಧವಾಗಿ ಮಾವು ಬಂದಿದ್ದು, ಇಳುವರಿ ಸಹ ಉತ್ತಮಾವಾಗಿದೆ. ಇಂಥಹದ್ದರಲ್ಲಿ ಕೊರೊನಾ ನಿಯತ್ರಣ ಸಂಬಂಧ ಹೆರಿರುವ ಲಾಕ್​ಡೌನ್ ಮಾವು ಬೆಳೆಗಾರರನ್ನ ಪ್ರಪಾತಕ್ಕೆ ತಳ್ಳಿದಂತಾಗಿದೆ. ಬೇಸಿಗೆ ಆರಂಭದೊಂದಿಗೆ ರುಚಿಯಾದ ಮಾವುಗಳ ಸೀಜನ್ ಬರುತ್ತದೆ. ಏಪ್ರೀಲ್-ಮೇ ತಿಂಗಳಲಂತ್ತು, ಮಾರುಕಟ್ಟೆಗೆ ಎಲ್ಲಡೆಯೂ ತರಹೇವಾರಿ ವಿವಿಧ ಜಾತಿಯ ಮಾವುಗಳು ಕಾಣುತ್ತಿದ್ದವು. ಆದರೆ ಈ ಬಾರಿ ಲಾಕ್​ಡೌನ್​ನಿಂದಾಗಿ ಮಾವುಗಳೆ ಕಾಣುತ್ತಿಲ್ಲ. ಒಂದು ವೇಳೆ ಮಾವು ಮಾರಾಟ ಮಾಡಲು ರೈತರು ಮಾರುಕಟ್ಟೆಗೆ ತೆಗೆದುಕೊಂಡು ಬಂದರೆ ಖರೀದಿಸಲು ಜನರೇ ಇಲ್ಲ. ಹೀಗಾಗಿ ನಷ್ಟ ಅನುಭವಿಸಬೇಕಾಗಿದೆ ಎಂದು ಮಾವು ಬೆಳೆದ ರೈತ ಉಮೇಶ್ ಅಳಲು ತೋಡಿಕೊಂಡಿದ್ದಾರೆ.

ಸರಕಾರ ಹಣ್ಣು ಬೆಳೆಗಾರರಿಗೆ 10 ಸಾವಿರ ಪ್ರತಿ ಎಕರೆಗೆ ಕೊಡುವುದಾಗಿ ಹೇಳಿದೆ. ಆದರೆ ಸರಕಾರ ಕೊಡುವ ಆ ಹತ್ತು ಸಾವಿರ ರೂಪಾಯಿ ಹಣ ಕೂಲಿ ಆಳಿಗೂ ಸಾಕಾಗುವುದಿಲ್ಲ. ಇನ್ನೂ ಜಿಲ್ಲೆಯಲ್ಲಿ 1983 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಗಿಡದ ತುಂಬಾ ಹಣ್ಣುಗಳೇ ಕಾಣುತ್ತವೆ. ಆದರೆ ಹಣ್ಣು ಕಟಾವು ಮಾಡದೆ ಇದ್ದರಿಂದ ಹಣ್ಣಾಗಿ ಮಾವು ಉದುರಿ ಬಿದ್ದಿದ್ದು, ಕೊಳೆತು ಹೋಗುತ್ತಿವೆ ಎಂದು ರೈತರಾದ ಶ್ರೀಕಾಂತ್ ಸ್ವಾಮಿ ಹೇಳಿದ್ದಾರೆ.

ಬೇರೆ ಸಾಂಪ್ರದಾಯಿಕ ಉತ್ಪನ್ನಗಳನ್ನು ಹೇಗೋ ಕೆಲ ದಿನ ದಾಸ್ತಾನು ಮಾಡಬಹುದು. ಆದರೆ, ತೋಟಗಾರಿಕಾ ಬೆಳೆಗಳನ್ನು ಪ್ರೌಢಾವಸ್ಥೆಗೆ ಬಂದ ಕೂಡಲೇ ಮಾರಾಟ ಮಾಡಲೇಬೇಕಿದೆ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಾರುಕಟ್ಟೆಗೆ ಮಾವು ಸಾಗಾಟ ಮಾಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಇನ್ನೂ ಬೀದರ್ ಜಿಲ್ಲೆಯ ಭಾಲ್ಕಿ, ಬೀದರ್, ಹುಮ್ನಾಬಾದ್ ತಾಲೂಕಿನಲ್ಲಿ ಅತೀ ಹೆಚ್ಚು ಮಾವು ಬೆಳೆಗಾರರಿದ್ದಾರೆ, ಹೀಗಾಗಿ ನೂರಾರು ರೈತರು ಸಮೃದ್ಧವಾಗಿ ಬೆಳೆದಿದ್ದ ಮಾವು ಬೆಳೆ ಕೊವಿಡ್‌-19 ಲಾಕ್​ಡೌನ್​ನಿಂದಾಗಿ ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿದೆ.

ಮಾವಿನ ಗಿಡಗಳ ಆರೈಕೆಗೆ ಎಂದು ಪ್ರತಿಯೊಬ್ಬರು ಎರಡರಿಂದ ಮೂರು ಲಕ್ಷದವರೆಗೆ ಖರ್ಚುಮಾಡಿದ್ದಾರೆ. ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಬೆಳೆಗೆ ಉತ್ತಮ ಔಷೋಧೋಪಚಾರ, ಗೊಬ್ಬರ ಸಿಂಪಡಿಸಿದ್ದರಿಂದ ಸಮೃದ್ಧ ಬೆಳೆ ಬಂದಿದೆ. ಇನ್ನೇನು ಮಾವು ಮಾರಾಟ ಆರಂಭವಾಗಿ ಕೈ ತುಂಬಾ ಆದಾಯ ಗಳಿಸಬಹುದು ಎಂದು ಖುಷಿಯಲ್ಲಿರುವಾಗಲೇ ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ:

ಧಾರವಾಡದ ಮಾವು ಬೆಳೆಗೆ ಈ ಬಾರಿಯೂ ಕಂಟಕ; ಅಕಾಲಿಕ ಮಳೆಗೆ ರೈತರು ಕಂಗಾಲು

ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಸುಟ್ಟು ಕರಕಲಾದ ಬೆಳೆ; ಕೃಷಿ ಕನಸು ಕಂಡಿದ್ದ ಚಿಕ್ಕಮಗಳೂರು ರೈತ ಕಂಗಾಲು