ಸೈಟ್‌ ಹಂಚಿಕೆಯಲ್ಲಿ ಗೋಲ್‌ಮಾಲ್ ಮಾಡಿದ್ದ ಆರೋಪ: 10 BDA ಅಧಿಕಾರಿಗಳ ವಿರುದ್ಧ FIR ದಾಖಲು

|

Updated on: Mar 01, 2021 | 8:03 PM

ಸೈಟ್‌ ಹಂಚಿಕೆಯಲ್ಲಿ ಗೋಲ್‌ಮಾಲ್ ಮಾಡಿದ್ದ ಆರೋಪದಡಿ 10 BDA ಅಧಿಕಾರಿಗಳ ವಿರುದ್ಧ FIRದಾಖಲಾಗಿದೆ. ಆರೋಪಕ್ಕೆ ಸಂಬಂಧಪಟ್ಟಂತೆ ಶೇಷಾದ್ರಿಪುರಂ ಠಾಣೆಯಲ್ಲಿ FIR ದಾಖಲಾಗಿದೆ. ಗೋಲ್‌ಮಾಲ್‌ಗೆ ಸಾಥ್‌ ನೀಡಿದ್ದ 43 ಜನರ ವಿರುದ್ಧವೂ FIR ದಾಖಲಾಗಿದೆ. 

ಸೈಟ್‌ ಹಂಚಿಕೆಯಲ್ಲಿ ಗೋಲ್‌ಮಾಲ್ ಮಾಡಿದ್ದ ಆರೋಪ: 10 BDA ಅಧಿಕಾರಿಗಳ ವಿರುದ್ಧ FIR ದಾಖಲು
ಬಿಡಿಎ ಹೆಡ್ ಆಫೀಸ್
Follow us on

ಬೆಂಗಳೂರು: ಸೈಟ್‌ ಹಂಚಿಕೆಯಲ್ಲಿ ಗೋಲ್‌ಮಾಲ್ ಮಾಡಿದ್ದ ಆರೋಪದಡಿ 10 BDA ಅಧಿಕಾರಿಗಳ ವಿರುದ್ಧ FIRದಾಖಲಾಗಿದೆ. ಆರೋಪಕ್ಕೆ ಸಂಬಂಧಪಟ್ಟಂತೆ ಶೇಷಾದ್ರಿಪುರಂ ಠಾಣೆಯಲ್ಲಿ FIR ದಾಖಲಾಗಿದೆ. ಗೋಲ್‌ಮಾಲ್‌ಗೆ ಸಾಥ್‌ ನೀಡಿದ್ದ 43 ಜನರ ವಿರುದ್ಧವೂ FIR ದಾಖಲಾಗಿದೆ. ಬಿಡಿಎ ಉಪ ಕಾರ್ಯದರ್ಶಿ-1 ಆಗಿದ್ದ ಅನಿಲ್ ಕುಮಾರ್‌, ಬಿಡಿಎ ಉಪ ಕಾರ್ಯದರ್ಶಿ-1 ಆಗಿದ್ದ ಭಾಸ್ಕರ್‌, ಬಿಡಿಎ ಉಪ ಕಾರ್ಯದರ್ಶಿ-1 ಆಗಿದ್ದ ಸುಧಾ ಸೇರಿದಂತೆ 10 ಆರೋಪಿತ ಅಧಿಕಾರಿಗಳ ವಿರುದ್ಧ FIRದಾಖಲಾಗಿದೆ.

ಏನಿದು ಪ್ರಕರಣ?
FIRನಲ್ಲಿ ಉಲ್ಲೇಖಿಸಲಾಗಿರುವ ಅಧಿಕಾರಿಗಳು ಅನಾಥ ಮಕ್ಕಳ ಅಭಿವೃದ್ಧಿ ಸಂಘಕ್ಕೆ ಸೈಟ್ ಹಂಚಿಕೆ ಮಾಡಿದ್ರು. ಅನಧಿಕೃತವಾಗಿ ಸೈಟ್ ಹಂಚಿದ ಆರೋಪದಡಿ ಮೊಕದ್ದಮೆ ದಾಖಲಾಗಿದೆ. ಬಿಡಿಎನಲ್ಲಿ ಗೋಲ್‌ಮಾಲ್ ಬಗ್ಗೆ ಟಿವಿ9ನಲ್ಲಿ ‘ಬಿಡಿಎ ಬೇಟೆ’ ಶೀರ್ಷಿಕೆಯಡಿ ಎಕ್ಸ್‌ಕ್ಲ್ಯೂಸಿವ್‌ ವರದಿ ಸಹ ಪ್ರಸಾರವಾಗಿತ್ತು.

ಮನೆಗಳವು ಮಾಡುತ್ತಿದ್ದ ಮೂವರ ಬಂಧನ
ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ಮೂವರ ಬಂಧನವಾಗಿದೆ. ನರಸಿಂಹ ರೆಡ್ಡಿ, ಶಿವರಾಜ್​, ರಾಕೇಶ್ ಬಂಧಿತ ಕಳ್ಳರು. ಖಾಲಿ ಇರುವ ಮನೆ ಹಗಲು ಗಮನಿಸುತ್ತಿದ್ದ ಆರೋಪಿಗಳು ರಾತ್ರಿ ವೇಳೆ ತೆರಳಿ ಕಳವು ಮಾಡುತ್ತಿದ್ದರು. ಸದ್ಯ, ಆರೋಪಿಗಳ ಬಂಧನದಿಂದ ಮೂರು ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ, ಮೂವರಿಂದ 24 ಲಕ್ಷ ರೂ. ಮೌಲ್ಯದ 477 ಗ್ರಾಂ ಚಿನ್ನಾಭಣ ವಶಕ್ಕೆ ಪಡೆಯಲಾಗಿದೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯನ‌‌ ನಿರ್ಲಕ್ಷ್ಯಕ್ಕೆ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಸ್ಥಿತಿ ಗಂಭೀರ
ಇತ್ತ, ವೈದ್ಯನ‌‌ ನಿರ್ಲಕ್ಷ್ಯಕ್ಕೆ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಮಾರುತಿಗಲ್ಲಿಯ ಜೋಶಿ ನರ್ಸಿಂಗ್ ಹೋಂ ಎದುರು ಧರಣಿ ನಡೆಯಿತು.

ಫೆ.21ರಂದು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪರಶುರಾಮ ಎಂಬುವವರಿಗೆ
ಯಾವುದೇ ಪರೀಕ್ಷೆ ನಡೆಸದೇ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು ಎಂಬ ಆರೋಪ ಕೇಳಿಬಂದಿದೆ. ಶಸ್ತ್ರಚಿಕಿತ್ಸೆ ಮಾಡಿದ ಮಾರನೇ ದಿನವೇ ಆಸ್ಪತ್ರೆಯವರು ಡಿಸ್ಚಾರ್ಜ್ ಮಾಡಿದ್ದರಂತೆ.

ಈ ನಡುವೆ, ಶಸ್ತ್ರಚಿಕಿತ್ಸೆ ಮಾಡಿದ ಪರಶುರಾಮ ಹೊಟ್ಟೆ ಭಾಗದಲ್ಲಿ ಮಲಮೂತ್ರ ವಿಸರ್ಜನೆ ಆಗುತ್ತಿತ್ತಂತೆ. ಬಳಿಕ ಆಸ್ಪತ್ರೆಗೆ ಹೋದರೆ ಪರಶುರಾಮರಿಗೆ ಕ್ಯಾನ್ಸರ್ 4ನೇ ಸ್ಟೇಜ್ ಇದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರಂತೆ. ಸದ್ಯ, ವೈದ್ಯರ ಎಡವಟ್ಟಿನಿಂದ ಪರಶುರಾಮ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಯಾವುದೇ ಪರೀಕ್ಷೆಗಳನ್ನು ಮಾಡದೇ ಶಸ್ತ್ರಚಿಕಿತ್ಸೆ ನಡೆಸಿದ್ದೇಕೆ ಮತ್ತು ನಿರ್ಲಕ್ಷ್ಯವಹಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿ ಧರಣಿ ನಡೆಸಲಾಯಿತು. ಪ್ರತಿಭಟನಾ ಸ್ಥಳಕ್ಕೆ THO ಶಿವಾನಂದ ಮಾಸ್ತಮರ್ಡಿ ಭೇಟಿ ಕೊಟ್ಟರು.

ಇದನ್ನೂ ಓದಿ: SSLC Examinations 2021 | SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ; ಜೂ.21 ರಿಂದ ಎಕ್ಸಾಂ ಶುರು

Published On - 7:54 pm, Mon, 1 March 21