ಚಿಕ್ಕಬಳ್ಳಾಪುರ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ಸಾವು, ಐವರ ಸ್ಥಿತಿ ಚಿಂತಾಜನಕ
ಆದರೆ ಪ್ರತ್ಯಕ್ಷದರ್ಶಿ ನೀಡುವ ವಿವರಣೆ ಬೇರೆಯಾಗಿದೆ. ಅವರು ಅಪಘಾತಕ್ಕೀಡಾದ ಜೀಪಿನ ಹಿಂಭಾಗದಲ್ಲಿ ಬರುತ್ತಿದ್ದರಂತೆ. ಅವರು ಹೇಳುವ ಹಾಗೆ ಜೀಪಿನಲ್ಲಿ ಒಂದು ಮಗು ಸೇರಿದಂತೆ ಒಟ್ಟಿ 13ಜನ ಇದ್ದರು. ಅಪಘಾತ ನಡೆದ ಬಳಿಕ ಅವರಲ್ಲಿ ಕೇವಲ 2-3 ಜನ ಮಾತ್ರ ಉಸಿರಾಡುತ್ತಿದ್ದರು ಎಂದು ಅವರು ಹೇಳುತ್ತಾರೆ.
ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ ನಗರದ ಹೊರಭಾಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವಿದು (gory road mishap ). ಕ್ರೇನ್ ಮೂಲಕ ರಸ್ತೆಯ ಮೇಲಿಂದ ಎತ್ತಲಾಗುತ್ತಿರುವ ನುಜ್ಜುಗುಜ್ಜಾಗಿರುವ ಜೀಪನ್ನು ನೋಡಿದರೆ ಅಪಘಾತದ ಭೀಕರತೆ ಅರ್ಥವಾಗುತ್ತದೆ. ಪೊಲೀಸರು ಮತ್ತು ಟಿವಿ9 ಕನ್ನಡವಾಹಿನಿಯ ಚಿಕ್ಕಬಳ್ಳಾಪುರ ವರದಿಗಾರ ನೀಡುವ ಮಾಹಿತಿ ಪ್ರಕಾರ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ (Bangalore-Hyderabad highway) ರಸ್ತೆ ಬದಿ ನಿಂತಿದ್ದ ಸಿಮೆಂಟ್ ಲೋಡಿನ ಲಾರಿಗೆ (cement bags laden lorry) ಭಾರಿ ವೇಗದಲ್ಲಿ ಜೀಪು ಗುದ್ದಿದ ಕಾರಣ ಅದರಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟರೆ ಇನ್ನುಳಿದ ಐವರ ಸ್ಥಿತಿ ಚಿಂತಾಜನಕವಾಗಿದೆ. ಈ ಭಾಗದಲ್ಲಿ ದಟ್ಟವಾಗಿ ಮಂಜು ಕವಿದಿದ್ದ ಕಾರಣ ಜೀಪ್ ಚಾಲಕನಿಗೆ ತನ್ನ ಮುಂದೆ ನಿಶ್ಚಲ ಸ್ಥಿತಿಯಲ್ಲಿದ್ದ ಲಾರಿ ಕಂಡಿರಲಾರದು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರತ್ಯಕ್ಷದರ್ಶಿ ನೀಡುವ ವಿವರಣೆ ಬೇರೆಯಾಗಿದೆ. ಅವರು ಅಪಘಾತಕ್ಕೀಡಾದ ಜೀಪಿನ ಹಿಂಭಾಗದಲ್ಲಿ ಬರುತ್ತಿದ್ದರಂತೆ. ಅವರು ಹೇಳುವ ಹಾಗೆ ಜೀಪಿನಲ್ಲಿ ಒಂದು ಮಗು ಸೇರಿದಂತೆ ಒಟ್ಟಿ 13ಜನ ಇದ್ದರು. ಅಪಘಾತ ನಡೆದ ಬಳಿಕ ಅವರಲ್ಲಿ ಕೇವಲ 2-3 ಜನ ಮಾತ್ರ ಉಸಿರಾಡುತ್ತಿದ್ದರು ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ