ಜಿಂದಾಲ್ ಕಂಪನಿ ಸಹಯೋಗದಿಂದ ರಾಜ್ಯದಲ್ಲಿ ಮೊದಲ ಬಾರಿಗೆ 1 ಸಾವಿರ ಆಕ್ಸಿಜನ್ ಬೆಡ್​ಗಳ ಆಸ್ಪತ್ರೆ ಬಳ್ಳಾರಿಯಲ್ಲಿ ಆರಂಭ

|

Updated on: May 20, 2021 | 11:39 AM

ದೇಶದ ಕೊರೊನಾ ಡೇಂಜರ್ ಜಿಲ್ಲೆಗಳಲ್ಲಿ ಬಳ್ಳಾರಿ ಕೂಡ ಇದೆ. ಕೊರೊನಾ ಪಾಸಿಟಿವ್ ರೇಟ್ ಶೇ.47 ರಷ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಸಮರ್ಪಕವಾಗಿದ್ದರೂ ದಿನದಿಂದ ದಿನಕ್ಕೆ ಆಕ್ಸಿಜನ್ ಬೆಡ್​ಗಳ ಕೊರತೆ ಕೂಡ ಹೆಚ್ಚಾಗುತ್ತಿದೆ.

ಜಿಂದಾಲ್ ಕಂಪನಿ ಸಹಯೋಗದಿಂದ ರಾಜ್ಯದಲ್ಲಿ ಮೊದಲ ಬಾರಿಗೆ 1 ಸಾವಿರ ಆಕ್ಸಿಜನ್ ಬೆಡ್​ಗಳ ಆಸ್ಪತ್ರೆ ಬಳ್ಳಾರಿಯಲ್ಲಿ ಆರಂಭ
1 ಸಾವಿರ ಆಕ್ಸಿಜನ್ ಬೆಡ್​ಗಳ ಆಸ್ಪತ್ರೆ
Follow us on

ಬಳ್ಳಾರಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜಿಲ್ಲಾಡಳಿತ ಎಷ್ಟೇ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸಿದರೂ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಜೊತೆಗೆ ಸಾವಿನ ಸರಣಿ ಕೂಡ ಮುಂದುವರಿದಿದೆ. ಹೀಗಾಗಿ ಈಗ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ದೃಷ್ಟಿಯಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ 1 ಸಾವಿರ ಆಕ್ಸಿಜನ್ ಬೆಡ್ಗಳ ತಾತ್ಕಾಲಿಕ ಆಸ್ಪತ್ರೆ ಗಣಿನಾಡಿನಲ್ಲಿ ಜಿಂದಾಲ್ ಕಂಪನಿ ಸಹಯೋಗದೊಂದಿಗೆ ಈಗ ಆರಂಭಗೊಂಡಿದೆ.

ದೇಶದ ಕೊರೊನಾ ಡೇಂಜರ್ ಜಿಲ್ಲೆಗಳಲ್ಲಿ ಬಳ್ಳಾರಿ ಕೂಡ ಇದೆ. ಕೊರೊನಾ ಪಾಸಿಟಿವ್ ರೇಟ್ ಶೇ.47 ರಷ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಸಮರ್ಪಕವಾಗಿದ್ದರೂ ದಿನದಿಂದ ದಿನಕ್ಕೆ ಆಕ್ಸಿಜನ್ ಬೆಡ್​ಗಳ ಕೊರತೆ ಕೂಡ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ಈಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಂದಾಲ್ ಕಂಪನಿ ಸಹಯೋಗದೊಂದಿಗೆ ತೋರಣಗಲ್ಲು ಬಳಿ ಒಂದು ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ಆರಂಭ ಮಾಡಲಾಗಿದೆ. ಮೊದಲ ಹಂತವಾಗಿ 300 ಆಕ್ಸಿಜನ್ ಬೆಡ್​ಗಳು ಆರಂಭವಾಗಿದ್ದು, ನಿನ್ನೆ (ಮೇ 19) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುವಲ್ ಮೂಲಕ ಚಾಲನೆ ನೀಡಿದರು.

ವರ್ಚುವಲ್​ನಲ್ಲಿ ಜಿಂದಾಲ್ ಕಂಪನಿ ಮಾಲೀಕ ಸಜ್ಜನ್ ಜಿಂದಾಲ್, ತಾತ್ಕಲಿಕ ಆಸ್ಪತ್ರೆ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದರು. ವರ್ಚುವಲ್ ಚಾಲನೆ ಬಳಿಕ ಆನಂದ್ ಸಿಂಗ್ ತಾತ್ಕಾಲಿಕ ಆಸ್ಪತ್ರೆಗೆ ಪೂಜೆ ನೇರವೇರಿಸಿ ಚಾಲನೆ ನೀಡಿದರು. ನಿನ್ನೆಯಿಂದ ಈ ಆಕ್ಸಿಜನ್ ಬೆಡ್ ಆಸ್ಪತ್ರೆ ಕಾರ್ಯಾರಂಭ ಮಾಡಲಾಗಿದೆ. ತಜ್ಞ ವೈದ್ಯರು, ಅರವಳಿಕೆ ತಜ್ಞ ವೈದ್ಯರು, ನರ್ಸ್​ಗಳು ಸೇರಿದಂತೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಜರ್ಮನ್ ಆ್ಯಂಗರ್​ನೊಳಗೆ ಹವಾ ನಿಯಂತ್ರಿತ ವ್ಯವಸ್ಥೆ

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್ ಮಾದರಿ ಶಾಲೆಯ ಆವರಣದಲ್ಲಿ ಮೂರು ಬೃಹತ್ ಜರ್ಮನ್ ಆ್ಯಂಗರ್ ನಿರ್ಮಾಣ ಮಾಡಲಾಗಿದೆ. ಒಂದು ಸಾವಿರ ಆಕ್ಸಿಜನ್ ಬೆಡ್​ಗಳ ಜರ್ಮನ್ ಆ್ಯಂಗರ್ ಸಂಪೂರ್ಣ ನಿರ್ಮಾಣ ಕಾರ್ಯವನ್ನು ಎಂವಿ ಕನ್ಸಲ್ ಟೆನ್ಸಿಗೆ ವಹಿಸಲಾಗಿತ್ತು. ಒಟ್ಟು ಮೂರು ಬೃಹತ್ ಜರ್ಮನ್ ಆ್ಯಂಗರ್​ಗಳಲ್ಲಿ ಒಂದು ಸಾವಿರ ಆಕ್ಸಿಜನ್ ಬೆಡ್ ಸಿದ್ಧಗೊಳ್ಳುತ್ತಿದ್ದು, ಈಗಾಗಲೇ 300 ಬೆಡ್​ಗಳು ನಿನ್ನೆಯಿಂದ ಆರಂಭಗೊಂಡಿವೆ. ಈ ಜರ್ಮನ್ ಆ್ಯಂಗರ್​ಗಳು ಬಿಸಿಲಿನ ತಾಪಮಾನ ನಿಯಂತ್ರಣ ಮಾಡುತ್ತವೆ. ಜೊತೆಗೆ ಮಳೆ ಬಂದರೂ ಕೂಡ ಯಾವುದೇ ಹಾನಿಯಾಗುವುದಿಲ್ಲ.

1 ಸಾವಿರ ಆಕ್ಸಿಜನ್ ಬೆಡ್​ಗಳ ಪೈಕಿ ಮಹಿಳೆಯರಿಗೆ ಪತ್ಯೇಕವಾಗಿ ಮಾಡಲಾಗಿದೆ. ಈಡೀ ಜರ್ಮನ್ ಆ್ಯಂಗರ್​ನೊಳಗೆ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಆಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆಯಾಗಬಾರದೆಂದು ಜಿಂದಾಲ್ ಕಂಪನಿಯಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಘಟಕದಿಂದಲೇ ನೇರವಾಗಿ 4.8 ಕಿಮೀ ದೂರದಿಂದ ಆಕ್ಸಿಜನ್ ಪೈಪ್ ಲೈನ್ ಮಾಡಲಾಗಿದೆ. ದಿನದ 24 ಗಂಟೆ ಕೂಡ ವೈದ್ಯರು ನರ್ಸ್​ಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಂದಾಲ್ ಕಂಪನಿಯಲ್ಲಿ ಒಂದು ಸಾವಿರ ಆಕ್ಸಿಜನ್ ಬೆಡ್​ಗಳು ನಿರ್ಮಾಣವಾಗುವುದರಿಂದ ಬಳ್ಳಾರಿ, ವಿಜಯನಗರ ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಸೋಂಕಿತರಿಗೆ ಕೂಡ ಇಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ.

ಇದನ್ನೂ ಓದಿ

ರಾಯಚೂರು ವಿದ್ಯುದಾಗಾರದಲ್ಲಿ ಕೊರೊನಾಘಾತ: 5 ಮಂದಿ ಕೊರೊನಾಗೆ ಬಲಿ; ಆಡಳಿತ ಮಂಡಳಿ ನಿರ್ಲಕ್ಷ್ಯ, ಆತಂಕ ಇನ್ನೂ ಅಧಿಕ

ಮಹಾಮಾರಿ ಕೊರೊನಾ 2ನೇ ಅಲೆ ಜುಲೈನಲ್ಲಿ ಕಡಿಮೆಯಾಗಲಿದೆ; ಆದರೆ 3ನೇ ಅಲೆ ಯಾವಾಗ ಶುರುವಾಗಲಿದೆ ಗೊತ್ತಾ?

(For the first 1000 bed hospital in state has opened in Bellary in association with Jindal Company)

Published On - 11:39 am, Thu, 20 May 21