ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌: ಅಶ್ಲೀಲ ಫೋಟೋ ಪೋಸ್ಟ್‌

|

Updated on: Aug 26, 2023 | 8:08 PM

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಫೇಸ್‌ಬುಕ್‌ ಅಕೌಂಟ್​ ಅನ್ನು ಕಿಡಿಗೇಡಿಗಳು ಶನಿವಾರ ಹ್ಯಾಕ್​ ಮಾಡಿದ್ದು, ಅಶ್ಲೀಲ ಫೋಟೋಗಳನ್ನು ಪೋಸ್ಟ್​​ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌: ಅಶ್ಲೀಲ ಫೋಟೋ ಪೋಸ್ಟ್‌
ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು, ಆಗಸ್ಟ್​ 26: ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಫೇಸ್‌ಬುಕ್‌ ಅಕೌಂಟ್​ ಅನ್ನು ಕಿಡಿಗೇಡಿಗಳು ಶನಿವಾರ ಹ್ಯಾಕ್​ ಮಾಡಿದ್ದಾರೆ. ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ ಅಶ್ಲೀಲ ಫೋಟೋ ಪೋಸ್ಟ್​​ ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಹೆಚ್‌.ಡಿ.ಕುಮಾರಸ್ವಾಮಿ ಸೋಶಿಯಲ್ ಮೀಡಿಯಾ ತಂಡ, ಬಳಿಕ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಆಗಿದ್ದ ಅಶ್ಲೀಲ ಚಿತ್ರಗಳನ್ನು ಡಿಲೀಟ್‌ ಮಾಡಿದೆ.

ಇನ್ನೊಂದು ವಾರ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

ಹಾಸನದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇನ್ನೊಂದು ವಾರ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ. ಎಲ್ಲರೂ ಈಗ ಚಂದ್ರಯಾನದ ಗುಂಗಿನಲ್ಲಿ ಇದ್ದಾರೆ. ಚಂದ್ರಯಾನ-3 ಸಾಧನೆ ನಮ್ಮ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ವಿಜ್ಞಾನಿಗಳ ಅವಿರತ ಶ್ರಮದಿಂದ ವಿಶ್ವದಾದ್ಯಂತ ಪ್ರಸಂಶೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಅಭಿನಂದನೆ ಸಲ್ಲಿಸಿ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾವಿಕನಿಲ್ಲದ ಹಡಗಾಗಿದೆ: ಸ್ವಪಕ್ಷೀಯರ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ

ಈಗಲೂ ಈ ಸರ್ಕಾರಕ್ಕೆ ಹೇಳೋರು ಕೇಳೋರು ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಹಳ ಜನ ತಪ್ಪು ಮಾಡಲಿಬಿಡಿ ಕಠಿಣವಾಗಿ ಮಾತಾಡಬೇಡಿ ಅಂತಾರೆ. ಹಾಗಂತ ಬಿಟ್ಟರೆ ಇವರನ್ನು ಹೇಳುವವರು ಕೇಳುವವರು ಇರುವುದಿಲ್ಲ. ಗ್ಯಾರಂಟಿ ಯೋಜನೆ ರಾಜ್ಯದ ಎಷ್ಟು ಜನರಿಗೆ ಅನುಕೂಲ ಆಗುತ್ತಿದೆ. ಅದಾನಿ, ಅಂಬಾನಿಗೆ ಸೇರುವ ಹಣ ಹಂಚುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಯಾರಿಗೆ ಹಂಚುತ್ತಾರೋ ಯಾರಿಗೆ ಬಿಡ್ತಾರೊ ಗೊತ್ತಿಲ್ಲ. ಗೃಹಜ್ಯೋತಿ ಯೋಜನೆ ಹೆಸರಿನಲ್ಲಿ ಅನೇಕರಿಗೆ ಟೋಪಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನನಗೆ ಬಿಜೆಪಿ ಹೈಕಮಾಂಡ್​​ನಿಂದ ಯಾವುದೇ ಕರೆ ಬಂದಿಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ

ಸಚಿವರು ಲೋಡ್ ಶೆಡ್ಡಿಂಗ್ ಅಗತ್ಯವಿಲ್ಲ ಅಂತಾ ಹೇಳುತ್ತಾರೆ. ಆದರೆ ಈಗ ಅಘೋಷಿತವಾಗಿ ಲೋಡ್ ಶೆಡ್ಡಿಂಗ್​​ ಆಗ್ತಿದೆ. ರಾಜ್ಯದ 120 ತಾಲೂಕುಗಳಲ್ಲಿ ಬರ ಇದೆ ಎಂದು ಹೇಳಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಯ ವಿಜೃಂಭಣೆ ಬಿಟ್ಟು ರೈತರ ಬಗ್ಗೆ ಯೋಚಿಸಲಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:42 pm, Sat, 26 August 23