ಉದ್ಯಮಿಗಳಾಯ್ತು ಈಗ ಮಾಜಿ ಕ್ರಿಕೆಟರ್​ ಸರದಿ: ಟ್ರಾಫಿಕ್​ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಸುನೀಲ್​ ಜೋಶಿ

ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಗಳು ಧ್ವನಿ ಎತ್ತಿರುವ ಬೆನ್ನಲ್ಲೇ ನಗರದ ಟ್ರಾಫಿಕ್​ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್​ ಸುನೀಲ್​ ಜೋಶಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಪ್ರತಿನಿತ್ಯ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.

ಉದ್ಯಮಿಗಳಾಯ್ತು ಈಗ ಮಾಜಿ ಕ್ರಿಕೆಟರ್​ ಸರದಿ: ಟ್ರಾಫಿಕ್​ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಸುನೀಲ್​ ಜೋಶಿ
Sunil Joshi

Updated on: Oct 17, 2025 | 10:19 AM

ಬೆಂಗಳೂರು, ಅಕ್ಟೋಬರ್​ 17: ಮೂಲ ಸೌಲರ್ಯಗಳ ಕೊರತೆ, ಟ್ರಾಫಿಕ್​ ಮತ್ತು ರಸ್ತೆ ಗುಂಡಿಗಳಂತಹ ಸಮಸ್ಯೆಗಳಿಂದಾಗಿ ರಾಜಧಾನಿ ಬೆಂಗಳೂರು (Bengaluru) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ನಗರದಲ್ಲಿನ ರಸ್ತೆ ಗುಂಡಿಗಳು ಮತ್ತು ಕಸದ ಬಗ್ಗೆ ಚೀನಾ ಉದ್ಯಮಿಯೊಬ್ಬರು ತಮ್ಮನ್ನು ಪ್ರಶ್ನಿಸಿದ್ದಾರೆಂದು ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಜುಂದಾರ್​ ಶಾ ಇತ್ತೀಚೆಗಷ್ಟೇ ಪೋಸ್ಟ್​ ಮಾಡಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ಬೆನ್ನಲ್ಲೇ ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್​ ಒಬ್ಬರು ಧ್ವನಿ ಎತ್ತಿದ್ದಾರೆ.

ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಟ್ರಾಫಿಕ್​ ಬಗ್ಗೆ ಮಾಜಿ ಕ್ರಿಕೆಟರ್​ ಸುನೀಲ್​ ಜೋಶಿ ಅಸಮಾಧಾನ ಹೊರ ಹಾಕಿದ್ದಾರೆ. ಸರಕು ಸಾಗಣೆ ವಾಹನಗಳಿಂದ ಆಗುತ್ತಿರೋ ತೊಂದರೆ ಬಗ್ಗೆ ಗಮನ ಸೆಳೆದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವಿಮಾನ ನಿಲ್ದಾಣ ಮಾರ್ಗದಲ್ಲಿ ಹಗಲಿನ ವೇಳೆಯೂ ಸರಕು ಸಾಗಣೆ ಮಾಡುವ ವಾಹನಗಳು ಸಂಚಾರ ನಡೆಸುತ್ತಿವೆ. ಇವುಗಳಿಗೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಸಂಚಾರಕ್ಕೆ ಅನುಮತಿ ಇರುವಾಗ ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಸುನೀಲ್​ ಜೋಶಿ ಪೋಸ್ಟ್​ನಲ್ಲಿ ಏನಿದೆ?

ಸರಕು ಸಾಗಣೆ ಮಾಡುವ ವಾಹನಗಳು ಫಾಸ್ಟ್ ಲೇನ್‌ಗಳನ್ನು ಬಂದ್ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ ಬರುವ ಪ್ರಯಾಣಿಕರು ಭಾರಿ ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಜನರು ಪ್ರಯಾಣಿಸಲು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಸುನೀಲ್​ ಜೋಶಿ ಆಗ್ರಹಿಸಿದ್ದಾರೆ. ಜೊತೆಗೆ ಈ ಪೋಸ್ಟ್​ ಅನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.|

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us