ನಕಲಿ ಫೇಸ್​ಬುಕ್ ಖಾತೆ: ಹುಡುಗಿ ಹೆಸರಿನಲ್ಲಿ ಹಣ ಪಡೆದು ವಂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 04, 2021 | 8:15 PM

ರುದ್ರಗೌಡ ಎನ್ನುವ ಹುಬ್ಬಳಿ ಮೂಲದ ಯುವಕನಿಗೆ ಸುಷ್ಮಾ ಸುಸು ಎನ್ನುವ ಫೇಕ್ ಫೇಸ್​ಬುಕ್​ ಅಕೌಂಟ್​ನ ಮೂಲಕ ಹಾಸನದ ಪ್ರತಾಪ್ ವಂಚನೆ ಮಾಡಿದ್ದಾನೆ.

ನಕಲಿ ಫೇಸ್​ಬುಕ್ ಖಾತೆ: ಹುಡುಗಿ ಹೆಸರಿನಲ್ಲಿ ಹಣ ಪಡೆದು ವಂಚನೆ
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ: ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿ ಹುಡುಗಿ ಹೆಸರಿನಲ್ಲಿ ₹ 15 ಲಕ್ಷ ಪಡೆದು ಯುವಕನೊಬ್ಬನಿಗೆ ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ರುದ್ರಗೌಡ ಎನ್ನುವ ಹುಬ್ಬಳ್ಳಿ ಮೂಲದ ಯುವಕನಿಗೆ ಸುಷ್ಮಾ ಸುಸು ಎನ್ನುವ ಫೇಕ್ ಫೇಸ್​ಬುಕ್​ ಅಕೌಂಟ್​ನ ಮೂಲಕ ಹಾಸನದ ಪ್ರತಾಪ್ ವಂಚನೆ ಮಾಡಿದ್ದಾನೆ. ವ್ಯಾಟ್ಸ್​ಆ್ಯಪ್ ಮೂಲಕ ನಿತ್ಯ ಚಾಟಿಂಗ್ ಮಾಡುತ್ತಿದ್ದ ಪ್ರತಾಪ್ ತಾನು ಮೂಕಿ, ಕಿವುಡಿ ಎಂದು 8 ರಿಂದ 10 ಬ್ಯಾಂಕ್ ಖಾತೆಗಳನ್ನ ನೀಡಿ ಹಣ ಹಾಕಿಸಿಕೊಂಡಿದ್ದಾನೆ. ಮೋಸ ಹೋದ ಯುವಕ ಸದ್ಯ ದೂರು ದಾಖಲಿಸಿದ್ದು, ಆರೋಪಿ ಪ್ರತಾಪ್​ನನ್ನ ಧಾರವಾಡ ಸೈಬರ್ ಪೊಲೀಸರು ಬಂಧಿಸಿದ್ದಾರೆ.

IPS ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ: ಸಿಐಡಿ ಸೈಬರ್​ ಠಾಣೆಗೆ ರಮೇಶ್ ಬಾನೋತ್‌ ದೂರು