ವಿಮಾ ಕಚೇರಿಯಲ್ಲಿ ವೀಕೆಂಡ್ ನೈಟ್ ಪಾರ್ಟಿ, ಪೊಲೀಸರು-ಮಾಧ್ಯಮ ಕಂಡು ಪರಾರಿ
ಗದಗ: ನಗರದ ಸರ್ಕಾರಿ ಕಚೇರಿಯಲ್ಲಿಯೇ ಅಧಿಕಾರಿಗಳು, ಸಿಬ್ಬಂದಿ ಮತ್ತು ಏಜೆಂಟ್‌ಗಳು ರಾತ್ರಿ ವೇಳೆ ಮದ್ಯ ಪಾರ್ಟಿ ಎಂಜಾಯ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಕಚೇರಿಯಲ್ಲಿ ಪಾರ್ಟಿ ನಡೆದಿದೆ. ಗದಗದ ಎಪಿಎಂಸಿ ಯಾರ್ಡ್ ಆವರಣದಲ್ಲಿ ಈ ಕಚೇರಿ ಇದೆ. ಇನ್ನು ಪೊಲೀಸರು ಮತ್ತು ಮಾಧ್ಯಮಗಳನ್ನು ಕಂಡ ಕೂಡಲೇ ಇನ್ಶುರೆನ್ಸ್ ಕಚೇರಿ ಬಾಗಿಲು ಮುಚ್ಚಿ ಪರಾರಿಯಾಗಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮಗಳ ವರದಿಗೂ ಕಚೇರಿ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ಗದಗದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]
Follow us on
ಗದಗ: ನಗರದ ಸರ್ಕಾರಿ ಕಚೇರಿಯಲ್ಲಿಯೇ ಅಧಿಕಾರಿಗಳು, ಸಿಬ್ಬಂದಿ ಮತ್ತು ಏಜೆಂಟ್‌ಗಳು ರಾತ್ರಿ ವೇಳೆ ಮದ್ಯ ಪಾರ್ಟಿ ಎಂಜಾಯ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಕಚೇರಿಯಲ್ಲಿ ಪಾರ್ಟಿ ನಡೆದಿದೆ. ಗದಗದ ಎಪಿಎಂಸಿ ಯಾರ್ಡ್ ಆವರಣದಲ್ಲಿ ಈ ಕಚೇರಿ ಇದೆ. ಇನ್ನು ಪೊಲೀಸರು ಮತ್ತು ಮಾಧ್ಯಮಗಳನ್ನು ಕಂಡ ಕೂಡಲೇ ಇನ್ಶುರೆನ್ಸ್ ಕಚೇರಿ ಬಾಗಿಲು ಮುಚ್ಚಿ ಪರಾರಿಯಾಗಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮಗಳ ವರದಿಗೂ ಕಚೇರಿ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ಗದಗದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.