ಗದಗದ ಸುದ್ದಿಗಳು: 45 ಜನರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ, ವಿದ್ಯುತ್​ ತಂತಿ ತಗುಲಿ ಜೋಡೆತ್ತು ಸಾವು

ಗದಗ ಜಿಲ್ಲೆಯ ಎರಡು ಪ್ರಮುಖ ಸುದ್ದಿಗಳನ್ನು ನೀವು ಇಲ್ಲಿ ಓದಬಹುದು.

ಗದಗದ ಸುದ್ದಿಗಳು: 45 ಜನರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ, ವಿದ್ಯುತ್​ ತಂತಿ ತಗುಲಿ ಜೋಡೆತ್ತು ಸಾವು
ಪಲ್ಟಿಯಾದ ಬಸ್
Edited By:

Updated on: Aug 16, 2021 | 7:16 PM

ಗದಗ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ಕಂದಕಕ್ಕೆ ವಾಲಿದ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಳಿ ನಡೆದಿದೆ. ಬಸ್ಸಿಗೆ ಅಡ್ಡ ಬಂದ ಬೈಕ್ ಸವಾರನನ್ನ ತಪ್ಪಿಸಲು ಹೋಗಿ ಅವಾಂತರ ನಡೆದಿದ್ದು, ಬಸ್ಸಿನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆಯೇ ಹೊರತು ಅದೃಷ್ಟವಶಾತ್ ಹೆಚ್ಚಿನ ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮುಂಡರಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ವಿದ್ಯುತ್​ ತಂತಿ ತಗುಲಿ ಜೋಡೆತ್ತು ಸಾವು
ವಿದ್ಯುತ್​ ತಂತಿ ತಗುಲಿ ಶೆಡ್​​​​ ಬಳಿ ಕಟ್ಟಿದ್ದ ಜೋಡೆತ್ತು ಸಾವಿಗೀಡಾದ ದುರ್ಘಟನೆ ಗದಗ ತಾಲೂಕಿನ ಮಹಾಲಿಂಗಪುರ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಲಮಾಣಿ ಎಂಬ ರೈತರಿಗೆ ಸೇರಿದ್ದ ಜೋಡೆತ್ತು ಸಾವನ್ನಪ್ಪಿದ್ದು, ಶೆಡ್ ಮುಂದಿದ್ದ ವಿದ್ಯುತ್​ ಕಂಬದಲ್ಲಿ ಬ್ಲಾಸ್ಟ್​ ಆಗಿ ಘಟನೆ ಜರುಗಿದೆ. ಹೆಸ್ಕಾಂ ವಿರುದ್ಧ ಮಹಾಲಿಂಗಪುರ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಜೋಡೆತ್ತುಗಳು

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

Shiradi Ghat: ಶಿರಾಡಿ ಘಾಟ್​ ಓಪನ್; ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ

(Gadag News today bus accident which carries 45 passengers)