AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiradi Ghat: ಶಿರಾಡಿ ಘಾಟ್​ ಓಪನ್; ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ

ಆದರೆ ಬುಲೆಟ್ ಟ್ಯಾಂಕರ್ಸ್, ಕಂಟೇನರ್ ಹಾಗು ಬೃಹತ್ ವಾಹನಗಳಿಗೆ ಸಂಚಾರ ನಿಷೇಧ ಮುಂದುವರೆಯಲಿದೆ.

Shiradi Ghat: ಶಿರಾಡಿ ಘಾಟ್​ ಓಪನ್; ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ
ಘಾಟ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Aug 16, 2021 | 3:57 PM

Share

ಹಾಸನ:  ಕಳೆದ ಒಂದು ತಿಂಗಳಿನಿಂದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದ ಶಿರಾಡಿ ಘಾಟ್​ನಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕಾರು, ಜೀಪು, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು, ಸಾರಿಗೆ ಬಸ್ ಗಳು, 20 ಟನ್ ಸಾಮರ್ಥ್ಯದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶ ನೀಡಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶಿಸಿದ್ದಾರೆ. ಆದರೆ ಬುಲೆಟ್ ಟ್ಯಾಂಕರ್ಸ್, ಕಂಟೇನರ್ ಹಾಗು ಬೃಹತ್ ವಾಹನಗಳಿಗೆ ಸಂಚಾರ ನಿಷೇಧ ಮುಂದುವರೆಯಲಿದೆ. ಭಾರಿ ಮಳೆಯಿಂದ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ75 ರಲ್ಲಿ ರಸ್ತೆ ಕುಸಿತವಾಗಿತ್ತು. ಈ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಶಿರಾಡಿ ಘಾಟ್​ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ವಿಧಿಸಲಾಗಿತ್ತು.

ಯಾಕೆ ಸಂಚಾರ ನಿಷೇಧಿಸಲಾಗಿತ್ತು?

ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಬಳಿ ರಸ್ತೆಯ ಒಂದು ಕಡೆ ಕುಸಿದುಹೋಗಿರುವುದರಿಂದ ಶಿರಾಡಿ ಘಾಟ್​ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಬೆಂಗಳೂರು, ಹಾಸನ ಮಾರ್ಗದಿಂದ ಮಂಗಳೂರು ಅಥವಾ ದಕ್ಷಿಣ ಕನ್ನಡಕ್ಕೆ ತೆರಳುವವರು ಶಿರಾಡಿ ಘಾಟ್ ಬದಲಾಗಿ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್​ನಲ್ಲಿ ತೆರಳಲು ಸೂಚಿಸಲಾಗಿತ್ತು. ಬೆಂಗಳೂರಿನಿಂದ ಮೂಡಿಗೆರೆ- ಕೊಟ್ಟಿಗೆಹಾರ ಮಾರ್ಗದ ಮೂಲಕ ಚಾರ್ಮಾಡಿ ಘಾಟ್​ನಲ್ಲಿ ಮಂಗಳೂರಿಗೆ ತೆರಳಲು ಸೂಚಿಸಲಾಗಿತ್ತು.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಮಂಗಳೂರು ಮುಂತಾದ ಕಡೆಗಳಿಗೆ ತೆರಳುವವರು ಶಿರಾಡಿ ಘಾಟ್ ಬದಲಾಗಿ ಚಾರ್ಮಾಡಿ ಘಾಟ್ ಅಥವಾ ಮಡಿಕೇರಿ ಮಾರ್ಗದ ಸಂಪಾಜೆ ಘಾಟ್ ಮೂಲಕ ಸಂಚರಿಸಬಹುದಿತ್ತು. ಶಿರಾಡಿ ಘಾಟಿಯ ನಾಲ್ಕು ಕಡೆಗಳಲ್ಲಿ ಭೂಕುಸಿತ ಆಗಿರುವುದರಿಂದ ಇನ್ನೂ ಕೆಲವು ದಿನಗೂ ಆಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ಚಿಕ್ಕಮಗಳೂರಿನಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಈ ಬಾರಿ ಚಾರ್ಮಾಡಿ ಘಾಟ್​ನಲ್ಲಿ ರಸ್ತೆಗಳನ್ನು ರಿಪೇರಿ ಮಾಡಲಾಗಿದ್ದು, ವಾಹನ ಸಂಚಾರಕ್ಕೇನೂ ತೊಂದರೆಯಿಲ್ಲ. ಆದರೆ, ಮಳೆಯಿಂದ ಎಲ್ಲಾದರೂ ಗುಡ್ಡ ಕುಸಿದರೆ ಈ ಮಾರ್ಗವೂ ಬಂದ್ ಆಗುವ ಭೀತಿ ಪ್ರಯಾಣಿಕರದ್ದು. ಹಾಗೇನಾದರೂ ಬೆಂಗಳೂರಿನಿಂದ ಕರಾವಳಿಗೆ ಪ್ರಯಾಣ ಮಾಡುವವರು ಮಡಿಕೇರಿ ಘಾಟಿ ಮತ್ತು ಕುದುರೆಮುಖ ಘಾಟಿಯನ್ನು ಮಾತ್ರ ಅವಲಂಬಿಸಬೇಕಾಗುತ್ತದೆ.

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

ಹಾಸನದಲ್ಲಿ ನಿಲ್ಲದ ಕಾಡಾನೆ ಹಾವಳಿ; ಮನೆಯ ಕಾಂಪೌಂಡ್ ಬಳಿ ಬಂದು ಜನರನ್ನ ಅಟ್ಟಾಡಿಸಿದ ಒಂಟಿ ಆನೆಯ ಫೋಟೋಗಳಿವೆ

(Shiradi Ghat Open Mangaluru to Bengaluru Highway is allowed only from 6 am to 6 pm)

Published On - 2:56 pm, Mon, 16 August 21