ಧರ್ಮಸ್ಥಳಕ್ಕೆ ಹೊರಟ್ಟಿದ್ದ ಸ್ನೇಹಿತರ ಕಾರು ಮರಕ್ಕೆ ಡಿಕ್ಕಿ.. ಓರ್ವ ಸಾವು ನಾಲ್ವರಿಗೆ ಗಾಯ

ಕಾರಿನಲ್ಲಿ ಧರ್ಮಸ್ಥಳಕ್ಕೆ ಐವರು ಸ್ನೇಹಿತರು ಹೊರಟಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೆಂಗಿನ ಮರಕ್ಕೆ ಗುದ್ದಿದೆ. ಘಟನೆಯಲ್ಲಿ ಬೆಂಗಳೂರು ಮೂಲದ ದೇವರಾಜು(38) ಮೃತಪಟ್ಟಿದ್ದಾರೆ. ಮಧುಕಿರಣ್, ಶ್ರೀನಿಧಿ, ಕೇಶವಯ್ಯ, ನಾಗರಾಜು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಾಳುಗಳಾಗಿದ್ದು ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • TV9 Web Team
  • Published On - 10:12 AM, 19 Jan 2021
ಧರ್ಮಸ್ಥಳಕ್ಕೆ ಹೊರಟ್ಟಿದ್ದ ಸ್ನೇಹಿತರ ಕಾರು ಮರಕ್ಕೆ ಡಿಕ್ಕಿ.. ಓರ್ವ ಸಾವು ನಾಲ್ವರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಕಾರು

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್‌ ಬಳಿ ಸಂಭವಿಸಿದೆ.

ತಡ ರಾತ್ರಿ KA 53 MD 4411 ಐಟ್ವೆಂಟಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಐವರು ಸ್ನೇಹಿತರು ಹೊರಟಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೆಂಗಿನ ಮರಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದ್ದು ಕಾರು ನಜ್ಜುಗುಜ್ಜಾಗಿದೆ.

ಇನ್ನು ಕಾರಿನಲ್ಲಿದ್ದವರನ್ನು ಹೊರ ತೆಗೆಯಲು ಸ್ಥಳೀಯರು ಹರ ಸಾಹಸ ಪಡುವಂತಾಯ್ತು. ಘಟನೆಯಲ್ಲಿ ಬೆಂಗಳೂರು ಮೂಲದ ದೇವರಾಜು(38) ಮೃತಪಟ್ಟಿದ್ದಾರೆ. ಮಧುಕಿರಣ್, ಶ್ರೀನಿಧಿ, ಕೇಶವಯ್ಯ, ನಾಗರಾಜು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಾಳುಗಳಾಗಿದ್ದು ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚನ್ನರಾಯಪಟ್ಟಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್​ ರಸ್ತೆಯಲ್ಲಿ ಅಪಘಾತ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ: ಡಿಸಿ ನೇತೃತ್ವದಲ್ಲಿ ಸಭೆ