ಗದಗ: ಲವ್ ಪ್ರಕರಣದಲ್ಲಿ ನಿರ್ಲಕ್ಷ್ಯ, ಪಿಎಸ್​ಐ ಅಮಾನತು

| Updated By: Rakesh Nayak Manchi

Updated on: Aug 28, 2023 | 9:54 PM

ಪ್ರೇಮ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯ ತೋರಿದ ನರೇಗಲ್ ಠಾಣೆಯ ಪಿಎಸ್​ಐಯನ್ನು ಅಮಾನತುಗೊಳಿಸಿ ಗದಗ ಎಸ್​ಪಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ, ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರಶೇಖರ್​ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ಎಸ್​ಪಿ ಆದೇಶ ಹೊರಡಿಸಿದ್ದಾರೆ.

ಗದಗ: ಲವ್ ಪ್ರಕರಣದಲ್ಲಿ ನಿರ್ಲಕ್ಷ್ಯ, ಪಿಎಸ್​ಐ ಅಮಾನತು
ಅಮಾನತುಗೊಂಡ ನರೇಗಲ್ ಠಾಣೆಯ ಪಿಎಸ್​ಐ ನಿಖೀಲ್
Follow us on

ಗದಗ, ಆಗಸ್ಟ್ 28: ಪ್ರೇಮ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯ ತೋರಿದ ನರೇಗಲ್ ಠಾಣೆಯ ಪಿಎಸ್​ಐಯನ್ನು ಅಮಾನತುಗೊಳಿಸಿ ಗದಗ (Gadag) ಎಸ್​ಪಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ, ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರಶೇಖರ್​ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು (Chikkamagaluru) ಎಸ್​ಪಿ ಆದೇಶ ಹೊರಡಿಸಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪೊಲೀಸ್ ಠಾಣೆಯ ಪಿಎಸ್​ಐ ನಿಖೀಲ್ ಅವರು ಪ್ರೇಮ ಪ್ರಕರಣವೊಂದರಲ್ಲಿ ಮೇಲಾಧಿಕಾರಿಗಳ ಜೊತೆ ಸರಿಯಾದ ವರ್ತನೆ ತೋರಿಲ್ಲ. ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಗದಗ ಎಸ್​ಪಿ ಬಿ.ಎಸ್. ನೇಮಗೌಡ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ನೇಮಗೌಡ ಅವರು ಮಾಹಿತಿ ನೀಡಿದ್ದಾರೆ.

ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

ಚಿಕ್ಕಮಗಳೂರು: ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಚಂದ್ರಶೇಖರ್ ಬಣಕಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಎಸ್​ಪಿ ವಿಕ್ರಂ ಅಮಾಟೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್: ಗ್ಯಾಂಗ್ ​​ಸ್ಟರ್​​ ಆಯೋಜಿಸಿದ ಪಾರ್ಟಿಯಲ್ಲಿ ಭಾಗಿಯಾದ 7 ಪೊಲೀಸರು ಅಮಾನತು

ಚಿಕ್ಕಮಗಳೂರು ತಾಲೂಕಿನ ಕಾಡುಮಲ್ಲಿಗೆ ಎಸ್ಟೇಟ್​ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸೆನ್ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಲಾಗಿತ್ತು. ಈ ವೇಳೆ ಕಾನ್​ಸ್ಟೇಬಲ್ ಚಂದ್ರಶೇಖರ್ ಸಿಕ್ಕಿಬಿದ್ದಿದ್ದಾರೆ. ಸದ್ಯ ಚಂದ್ರಶೇಖರ್ ಸೇರಿದಂತೆ ದಾಳಿ ವೇಳೆ ಸಿಕ್ಕಿಬಿದ್ದ 13 ಜನರ ಮೇಲೆ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ