ಪಂಜಾಬ್: ಗ್ಯಾಂಗ್ ಸ್ಟರ್ ಆಯೋಜಿಸಿದ ಪಾರ್ಟಿಯಲ್ಲಿ ಭಾಗಿಯಾದ 7 ಪೊಲೀಸರು ಅಮಾನತು
ಗ್ಯಾಂಗ್ಸ್ಟರ್ ಕಮಲ್ ಬೋರಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ, ಈ ಖುಷಿಗೆ ಪಾರ್ಟಿ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಐವರು ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಪೊಲೀಸ್ ಉಪ ಅಧೀಕ್ಷಕರು (ಡಿಎಸ್‌ಪಿ) ಶ್ರೇಣಿಯ ಅಧಿಕಾರಿಗಳು ಹಾಡುತ್ತ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಮೃತಸರ, ಆ.26: ಗ್ಯಾಂಗ್ಸ್ಟರ್ (Gangster Goes) ಕಮಲ್ ಬೋರಿ ಜತೆಗೆ ಪಂಜಾಬ್ನ (Punjab) ಅಮೃತಸರದ ಪೊಲೀಸರು ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಶುಕ್ರವಾರ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿತ್ತು. ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಈ ಏಳು ಜನ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.
ಗ್ಯಾಂಗ್ಸ್ಟರ್ ಕಮಲ್ ಬೋರಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ, ಈ ಖುಷಿಗೆ ಪಾರ್ಟಿ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಐವರು ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಪೊಲೀಸ್ ಉಪ ಅಧೀಕ್ಷಕರು (ಡಿಎಸ್‌ಪಿ) ಶ್ರೇಣಿಯ ಅಧಿಕಾರಿಗಳು ಹಾಡುತ್ತ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಏಳು ಜನ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
ಇದರಲ್ಲಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಪಟಿಯಾಲ ಮತ್ತು ಬಟಿಂಡಾಗೆ ವರ್ಗಾವಣೆ ಮಾಡಲಾಗಿದೆ. ಜತೆಗೆ ಗ್ಯಾಂಗ್ ಸ್ಟರ್ ಕಮಲ್ ಬೋರಿ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದು, ಪೊಲೀಸರು ಇದೀಗ ಆತನನ್ನು ಕೂಡ ಬಂಧಿಸಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ