ಗದಗ: ಉತ್ತರ ಕರ್ನಾಟಕ (North Karnataka) ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಅನೇಕ ಮಠಗಳು ಭಾವೈಕ್ಯತೆಯ ಸಾರವನ್ನು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ. ಹೀಗೆ ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ಸಮೀಪದ ಕೋರಿಕೊಪ್ಪ ಗ್ರಾಮದಲ್ಲಿರುವ ಹನುಮಾನ ದೇವಸ್ಥಾನಕ್ಕೆ (Hanuman Temple) ಕಳೆದ 150 ವರ್ಷಗಳಿಂದ ಮುಸ್ಲಿಮರು ಕೂಡ ಬರುತ್ತಿದ್ದಾರೆ. ಹೌದು ನೀವು ಓದಿರುವುದು ಸತ್ಯ. ಮುಸ್ಲಿಮರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಹನುಮಂನ ದೇವಸ್ಥಾನಕ್ಕೆ ಮುಸ್ಲಿಂರು ಕೂಡ ನಡೆದುಕೊಳ್ಳುತ್ತಿದ್ದಾರೆ.
ಕೋರಿಕೊಪ್ಪ ಗ್ರಾಮದ ಪ್ರವೇಶ ದ್ವಾರದಲ್ಲಿ ಚಿಕ್ಕ ಹನುಮಾನ ದೇವಸ್ಥಾನದೆ. ಸುಮಾರು ವರ್ಷಗಳ ಹಿಂದೆ ಕೋರಿಕೊಪ್ಪ ಗ್ರಾಮಕ್ಕೆ ಪ್ಲೇಗ್ ಮತ್ತು ಕಾಲರಾ ರೋಗ ಒಕ್ಕರಿಸಿದ್ದರಿಂದ ಜನರು ಗ್ರಾಮವನ್ನು ತೊರೆದು ಬೇರೆಡೆ ವಲಸೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪೂಜೆ ಮಾಡಲು ಯಾರು ಇಲ್ಲದಂತಾಯಿತು. ಆಗ ಬದ್ನಿ ಗ್ರಾಮದ ಕೆಲವು ಮುಸ್ಲಿಂ ಕುಟುಂಬಗಳು ಹನುಮ ದೇವಸ್ಥಾನಕ್ಕೆ ನಡೆದುಕೊಂಡರು. ಇದು ಹೀಗೆ ಮುಂದುವರೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಎಲ್ಲರೂ ಸೇರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದರು.
ಶ್ರಾವಣ ಮಾಸದಲ್ಲಿ ಜಾತಿ, ಮತ ಭೇದವಿಲ್ಲದೆ ಗ್ರಾಮಸ್ಥರೆಲ್ಲರೂ ಸೇರಿ ದೇವಸ್ಥಾನದಲ್ಲಿ ಹೋಮ, ಹವನ, ಭಜನೆ ಮಾಡುತ್ತಾರೆ. ದೇವಾಲಯದ ಆವರಣದಲ್ಲಿ ಪುರಾತನ ಕಾಲದ ಮಣ್ಣಿನ ಮಡಕೆಗಳು, ಶಾಸನಗಳು ಲಭ್ಯವಾಗಿದ್ದು, ಇವುಗಳ ಕುರಿತು ಅಧ್ಯಯನ ನಡೆಸುವಂತೆ ಗ್ರಾಮಸ್ಥರು ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಈ ಅಧ್ಯಯನವು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮೀ ಯೋಜನೆಗೆ ರಾಹುಲ್ ಗಾಂಧಿ ಚಾಲನೆ
ಮುಸ್ಲಿಂರು ಹನುಮನ ದೇವೆ ಆರಾಧನೆ ಮಾಡುತ್ತಿರುವುದೇ ಈ ದೇವಾಲಯದ ವೈಶಿಷ್ಟ್ಯವಾಗಿದೆ. ಬದ್ನಿ ಗ್ರಾಮದ ಈ ದೇವಸ್ಥಾನಕ್ಕೆ ಹಿಂದೂಗಳು ಮತ್ತು ಜೈನರು ಬರುತ್ತಾರೆ ಎಂದು ಲಕ್ಷ್ಮೇಶ್ವರ ತಾಲೂಕಿನ ಮೊಹಮ್ಮದ್ ಲಕ್ಷ್ಮೇಶ್ವರ್ ಮತ್ತು ಜಿನೇಶ್ ಜೈನ್ ಹೇಳಿದರು.
ಲಕ್ಷ್ಮೇಶ್ವರದ ಪಿ.ಕೆ.ಪೂಜಾರ್ ಮಾತನಾಡಿ, ಅದರಕಟ್ಟಿ-ಕೊಂಡಿಕೊಪ್ಪ ರಸ್ತೆಯಲ್ಲಿರುವ ಕೋರಿಕೊಪ್ಪ ಗ್ರಾಮ ಕೋಮು ಸೌಹಾರ್ದಕ್ಕೆ ಹೆಸರಾಗಿದೆ. ಶನಿವಾರ ಮತ್ತು ಮಂಗಳವಾರದಂದು ಸುತ್ತಮುತ್ತಲಿನ ಗ್ರಾಮಗಳು ಮತ್ತು ಇತರೆಡೆಗಳಿಂದ ನೂರಾರು ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದರು.
ಕೋರಿಕೊಪ್ಪದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಶಾಂತಿಯುತವಾಗಿ ಸಹಬಾಳ್ವೆದಿಂದ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಎಂದಿಗೂ ಯಾವುದೇ ಕೋಮು ಘರ್ಷಣೆಗೆ ಸಾಕ್ಷಿಯಾಗಲಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Wed, 30 August 23