ನರಗುಂದದ ಕಲಕೇರಿ ಚೆಕ್​ಪೋಸ್ಟ್​​ ಬಳಿ 1.50 ಕೋಟಿ ಮೌಲ್ಯದ ಇನ್ಸುಲಿನ್ ಜಪ್ತಿ

|

Updated on: Apr 10, 2023 | 1:11 PM

ನರಗುಂದ ತಾಲೂಕಿನ ಕಲಕೇರಿ ಚೆಕ್​ಪೋಸ್ಟ್​​ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 1.50 ಕೋಟಿ ಮೌಲ್ಯದ ಇನ್ಸುಲಿನ್ ಜಪ್ತಿ ಮಾಡಲಾಗಿದೆ.

ನರಗುಂದದ ಕಲಕೇರಿ ಚೆಕ್​ಪೋಸ್ಟ್​​ ಬಳಿ 1.50 ಕೋಟಿ ಮೌಲ್ಯದ ಇನ್ಸುಲಿನ್ ಜಪ್ತಿ
1.50 ಕೋಟಿ ಮೌಲ್ಯದ ಇನ್ಸುಲಿನ್ ಜಪ್ತಿ
Follow us on

ಗದಗ: ಕರ್ನಾಟಕ ರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಮತದಾರರನ್ನು ಸೆಳೆಯಲು ಅಮೀಷವೊಡಲ್ಲು ಚೆಕ್​ಪೋಸ್ಟ್​​ ಮೂಲಕ ಸಾಗಿಸಲಾಗುತ್ತಿದ್ದ ಹಣ, ಮದ್ಯ, ಹೀಗೆ ಅನೇಕ ವಸ್ತುಗಳನ್ನು ಅಧಿಕಾರಿಗಳು ಸೀಜ್ ಮಾಡುತ್ತಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಚೆಕ್​ಪೋಸ್ಟ್​​ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 1.50 ಕೋಟಿ ಮೌಲ್ಯದ ಇನ್ಸುಲಿನ್ ಜಪ್ತಿ ಮಾಡಲಾಗಿದೆ. ಗೋವಾದಿಂದ ಮಹಾರಾಷ್ಟ್ರದ ಔರಂಗಾಬಾದ್​ಗೆ ವಾಹನ ತೆರಳ್ತಿದ್ದು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ವಾಹನದಲ್ಲಿದ್ದ 1.50 ಕೋಟಿ ರೂ. ಮೌಲ್ಯದ ಇನ್ಸುಲಿನ್ ಜಪ್ತಿ ಮಾಡಲಾಗಿದೆ.

ಇನ್ನು ಮತ್ತೊಂದೆಡೆ ಗದಗದ ದುಂದೂರ ಚೆಕ್​ಪೋಸ್ಟ್​ನಲ್ಲಿ 3.72 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿಯಿಂದ ಯಲಬುರ್ಗಾ ಕಡೆ ಯಾವುದೇ ದಾಖಲೆಗಳು ಇಲ್ಲದೇ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Karnataka Assembly Polls 2023: ಕೆಲವರನ್ನು ಬಿಟ್ಟು ಬಿಜೆಪಿಯ ಎಲ್ಲ ಶಾಸಕರಿಗೆ ಟಿಕೆಟ್ ಸಿಗಲಿದೆ: ಬಿಎಸ್ ಯಡಿಯೂರಪ್ಪ

ಬೆಂಗಳೂರಿನಲ್ಲಿ 7 ಕೋಟಿ ರೂ. ಮೌಲ್ಯದ ಮಾದಕವಸ್ತು​ ಜಪ್ತಿ

ಬೆಂಗಳೂರಿನಲ್ಲಿ ನಟೋರಿಯಸ್ ವಿದೇಶಿ ಡ್ರಗ್ ಫೆಡ್ಲರ್​ಗಳ ಬಂಧನವಾಗಿದೆ. ವಿವಿಪುರಂ ಪೊಲೀಸರು ಇಬ್ಬರು ನೈಜೀರಿಯಾ ಡ್ರಗ್ ಫೆಡ್ಲರ್​ಗಳನ್ನು ಅರೆಸ್ಟ್ ಮಾಡಿದ್ದಾರೆ. ಲಾರೆನ್ಸ್ ಹಾಗೂ ಚುಕ್ವೂನೇಜಿಮ್ ಬಂಧಿತ ಡ್ರಗ್ ಫೆಡ್ಲರ್​ಗಳು. ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ. ಇನ್ನು ಸಾಫ್ಟ್‌ವೇರ್ ಇಂಜನಿಯರ್ ಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪೊಲೀಸರು Brown MDMA ಸೀಜ್ ಮಾಡಿದ್ದಾರೆ. ಒರಿಜಿನಲ್ ಒಂದು ಗ್ರಾಂ Brown MDMA ನಲ್ಲಿ 10 _gram ತಯಾರಿಸುತ್ತಿದ್ದ ಆರೋಪಿಗಳು, ಇದುವರೆಗೂ ನಗರದಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಸಾಫ್ಟ್‌ವೇರ್ ಇಂಜನಿಯರ್, ದೊಡ್ಡ ದೊಡ್ಡ ಉದ್ಯಮಿಗಳು ಸೇರಿ ಹಲವರಿಗೆ ಮಾರಾಟ ಮಾಡಲಾಗುತ್ತಿತ್ತು. ನಗರದಲ್ಲಿ ಸುಮಾರು ಐದು ವರ್ಷಗಳಿಂದ ಮಾರಾಟ ಮಾಡ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಇಬ್ಬರು ಫೆಡ್ಲರ್ ಗಳ ಮೊಬೈಲ್ ವಶಕ್ಕೆ ಪಡೆದಿರೋ ಪೊಲೀಸರು ಮೊಬೈಲ್ ನಲ್ಲಿನ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:09 pm, Mon, 10 April 23