ಗದಗ: ಹಾಲಕೆರೆ ಅನ್ನದಾನ ಸಂಸ್ಥಾನ ಮಠದ ಬಸವ ಪುರಾಣ ಪ್ರವಚನದಲ್ಲಿ ಭಾಗವಹಿಸಲಿದ್ದಾರೆ ಮುಸ್ಲಿಮರು!

|

Updated on: Nov 25, 2024 | 10:48 AM

ಗದಗ ಗಜೇಂದ್ರಗಡದ ಹಾಲಕೆರೆ ಅನ್ನದಾನ ಸಂಸ್ಥಾನ ಮಠ ಈ ವರ್ಷ ವಿನೂತನ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ‘ಬಸವ ಪುರಾಣ’ ಪ್ರವಚನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಸ್ಲಿಮರನ್ನೂ ಆಹ್ವಾನಿಸುವ ಮೂಲಕ ಸಮಾಜಕ್ಕೆ ಒಗ್ಗಟ್ಟಿನ ಸಂದೇಶ ಸಾರಲು ಮುಂದಾಗಿದೆ. ವಿವರ ಇಲ್ಲಿದೆ.

ಗದಗ: ಹಾಲಕೆರೆ ಅನ್ನದಾನ ಸಂಸ್ಥಾನ ಮಠದ ಬಸವ ಪುರಾಣ ಪ್ರವಚನದಲ್ಲಿ ಭಾಗವಹಿಸಲಿದ್ದಾರೆ ಮುಸ್ಲಿಮರು!
ಹಾಲಕೆರೆ ಅನ್ನದಾನ ಸಂಸ್ಥಾನ ಮಠದ ಬಸವ ಪುರಾಣ ಪ್ರವಚನದಲ್ಲಿ ಭಾಗವಹಿಸಲಿದ್ದಾರೆ ಮುಸ್ಲಿಮರು! (ಸಾಂದರ್ಭಿಕ ಚಿತ್ರ)
Follow us on

ಗದಗ, ನವೆಂಬರ್ 25: ಗಜೇಂದ್ರಗಡದ ಹಾಲಕೆರೆ ಅನ್ನದಾನ ಸಂಸ್ಥಾನ ಮಠದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ‘ಬಸವ ಪುರಾಣ’ ಪ್ರವಚನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮುಸ್ಲಿಮರಿಗೆ ಆಹ್ವಾನ ನೀಡಿದ್ದಾರೆ. ಸ್ವಾಮೀಜಿಯವರ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಸ್ಲಿಮರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಗಜೇಂದ್ರಗಡದ ಜಾಮಿಯಾ ಮಸೀದಿಗೆ ಭೇಟಿ ನೀಡಿದ್ದ ಶ್ರೀಗಳು, ನವೆಂಬರ್ 25 ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಸ್ಲಿಮರನ್ನು ಆಹ್ವಾನಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ. ಬ್ರಿಟಿಷರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿದರು ಮತ್ತು ಈಗ ಮಠವು ವಿವಿಧ ಕಾರ್ಯಕ್ರಮಗಳ ಮೂಲಕ ಅವರನ್ನು ಒಂದುಗೂಡಿಸಲು ಬಯಸಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಮುಂದೆ ಶಾಂತಿ ಸೌಹಾರ್ದತೆಯಿಂದ ಬಾಳಲು ಪ್ರತಿಜ್ಞೆ ಮಾಡಬೇಕು ಎಂದು ಮಸೀದಿಯ ಟಕ್ಕೇಡ್ ದರ್ಗಾ ಹಜರತ್ ನಿಜಾಮುದ್ದೀನ್ ಅಶ್ರಫಿ ಹೇಳಿದ್ದಾರೆ. ನಾವೆಲ್ಲರೂ ಭಾರತೀಯರು. ಆದರೆ ಧರ್ಮಾಂಧರು ಯಾವಾಗಲೂ ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಾರೆ ಮತ್ತು ಅವರ ಪ್ರಯತ್ನಗಳನ್ನು ನಾವು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

10 ಸಾವಿರ ಜನರಿಗೆ ಆಸನ ವ್ಯವಸ್ಥೆ

10 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರಸಾದ ವಿತರಿಸಲಾಗುವುದು. ಈ ಅಪೂರ್ವ ಕಾರ್ಯಕ್ರಮದಲ್ಲಿ ಗದಗ ಹಾಗೂ ಸಮೀಪದ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಗಜೇಂದ್ರಗಡ ವೀರಶೈವ-ಲಿಂಗಾಯತ ಸಂಘದ ಅಧ್ಯಕ್ಷ ಸಿದ್ದಪ್ಪ ಬಂಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೀದರ್: ಮದಾರ ಸಾಹೆಬ್ ಉರೂಸ್​ಗೆ ಹಿಂದೂಗಳದ್ದೇ ಸಾರಥ್ಯ! ಕೋಮು ಸೌಹಾರ್ದತೆಗೆ ಸಾಕ್ಷಿ ಕೋಹಿನೂರು ಜಾತ್ರೆ

ಕಾರ್ಯಕ್ರಮದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಶ್ರೀಗಳನ್ನು ಮಠದ ಇತರ ಭಕ್ತರು ಅಭಿನಂದಿಸಿದ್ದಾರೆ. ಈ ವರ್ಷದ ಆರಂಭದಲ್ಲಿಯೂ ಗಜೇಂದ್ರಗಡ ಜಿಲ್ಲೆ ದೇಶದ ಗಮನ ಸೆಳೆದಿತ್ತು. ಶಿಲ್ಪಿ ಮುತ್ತಣ್ಣ ಅಳವಂಡಿ ರಾಮಮಂದಿರದಲ್ಲಿ (ಅಯೋಧ್ಯೆ) ಎರಡು ತಿಂಗಳ ಕಾಲ ಕೆಲಸ ಮಾಡಿರುವುದು ಗೊತ್ತಾದಾಗ ಜಿಲ್ಲೆಯು ಗಮನ ಸೆಳೆದಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ