ಗದಗ: ಬಸ್​ನಲ್ಲಿ ಲ್ಯಾಪ್​ಟಾಪ್​ ಕೊಂಡೊಯ್ಯಲು ಹೆಚ್ಚುವರಿಯಾಗಿ 10 ರೂ. ಕೇಳಿದ ಕಂಡಕ್ಟರ್,ಅವಕ್ಕಾದ ಪ್ರಯಾಣಿಕ

| Updated By: ರಮೇಶ್ ಬಿ. ಜವಳಗೇರಾ

Updated on: Nov 10, 2022 | 11:01 PM

ಬಸ್​ನಲ್ಲಿ ಲ್ಯಾಪ್​ಟಾಪ್​ ಕೊಂಡೊಯ್ಯಲು ಕಂಡಕ್ಟರ್​ ಪ್ರಯಾಣಿಕನ ಬಳಿ ಹೆಚ್ಚವರಿಯಾಗಿ 10 ರೂ. ಕೇಳಿದ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ.

ಗದಗ: ಬಸ್​ನಲ್ಲಿ ಲ್ಯಾಪ್​ಟಾಪ್​ ಕೊಂಡೊಯ್ಯಲು ಹೆಚ್ಚುವರಿಯಾಗಿ 10 ರೂ. ಕೇಳಿದ ಕಂಡಕ್ಟರ್,ಅವಕ್ಕಾದ ಪ್ರಯಾಣಿಕ
ಬಸ್​ನಲ್ಲಿ ಲ್ಯಾಪ್​ಟಾಪ್​ಗೆ 10 ರೂಪಾಯಿ ಹೆಚ್ಚುವರಿ ಚಾರ್ಜ್ ಕೇಳಿದ ಕಂಡಕ್ಟರ್
Follow us on

ಗದಗ:  ಬಸ್‌ನಲ್ಲಿ ಪ್ರಯಾಣಿರೊಬ್ಬರ ಲ್ಯಾಪ್​ಟಾಪ್​ಗೆ (laptop) ಕಂಡಕ್ಟರ್ 10 ರೂಪಾಯಿ ಹೆಚ್ಚುವರಿ ಹಣ ಕೇಳಿರುವ ಸ್ವಾರಸ್ಯಕರ ಪ್ರಸಂಗ ಗದಗನಲ್ಲಿ ನಡೆದಿದೆ. ಅಚ್ಚರಿ ಅನ್ನಿಸಿದರೂ ಸತ್ಯ. NWKRTC ಬಸ್​ನಲ್ಲಿ ಗದಗನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಲ್ಯಾಪ್​ಟಾಪ್ ಓಪನ್ ಮಾಡಿದ್ದಕ್ಕೆ ಕಂಡಕ್ಟರ್ ಹೆಚ್ಚುವರಿಯಾಗಿ 10 ಕೇಳಿದ್ದಾನೆ. ಇದರಿಂದ ಪ್ರಯಾಣಿಕ ಒಂದು ಕ್ಷಣ ಅವಕ್ಕಾಗಿದ್ದಾರೆ.

ಹೌದು… ಗದಗನಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಪ್ರಯಾಣಿಕರೊಬ್ಬರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಲ್ಯಾಪ್​ಟಾಪ್ ಆನ್ ಮಾಡಿದ್ದಾರೆ. ಇದನ್ನು ಗಮನಿಸಿದ ಕಂಡಕ್ಟರ್ ಪ್ರಯಾಣಿಕರನ ಹತ್ತಿರ ಬಂದು ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಲು ಹೆಚ್ಚುವರಿ 10 ರೂ ನೀಡುವಂತೆ ಕೇಳಿದ್ದಾರೆ. ಆದರೆ ಪ್ರಯಾಣಿಕನು ಪಾವತಿಸಲು ನಿರಾಕರಿಸಿದ್ದಾರೆ.

KSRTC ಬಸ್​ನಲ್ಲಿ 30 ಕೆಜಿಯವರೆಗೆ ಲಗೇಜ್​ ಸಾಗಣೆ ಉಚಿತ! ನಿಮ್ಮ ಸಾಕುನಾಯಿಗೂ ಟಿಕೆಟ್ ಇದೆ

ಇನ್ನು ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಹೆಸರು ಹೇಳಲು ಇಚ್ಛಿಸದ ವೃತ್ತಿನಿರತ ಪ್ರಯಾಣಿಕ, ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವಾಗ ಬಸ್​ನಲ್ಲಿ ಕೆಲಸ ಮಾಡಲು ಲ್ಯಾಪ್‌ಟಾಪ್ ಆನ್ ಮಾಡಿದ್ದೇನೆ. ಅದನ್ನು ಗಮನಿಸಿದ ಕಂಡಕ್ಟರ್ ಬಂದು ಲ್ಯಾಪ್‌ಟಾಪ್ ಒಯ್ಯಲು 10 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಕೇಳಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊರಡಿಸಿದ ಆದೇಶವನ್ನು ಉಲ್ಲೇಖಿಸಿ ಮತ್ತು ಇದು ಎನ್‌ಡಬ್ಲ್ಯೂಕೆಆರ್‌ಟಿಸಿಗೂ ಅನ್ವಯಿಸುತ್ತದೆ. ಆದ್ರೆ, 30 ಕೆಜಿಯ ಮಿತಿಯನ್ನು ದಾಟದ ಉಚಿತವಾಗಿ ಸಾಗಿಸಬಹುದಾದ ಲಗೇಜ್‌ಗಳ ಪಟ್ಟಿಯಲ್ಲಿ ಲ್ಯಾಪ್‌ಟಾಪ್‌ ಆದೇಶದಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಿದರು ಎಂದು ಪ್ರಯಾಣಿಕ ಹೇಳಿದ್ದಾನೆ.

ಆಗ ಈ ಬಗ್ಗೆ ನನ್ನ ಕೆಲವು ಕಂಡಕ್ಟರ್ ಸ್ನೇಹಿತರನ್ನು ಸಂಪರ್ಕಿಸಿದಾಗ, ಪ್ರಯಾಣ ಮಾಡುವಾಗ ಲ್ಯಾಪ್‌ಟಾಪ್ ಬಳಸುವ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಿಧಿಸಲು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಹೆಚ್ಚುವರಿ ಹಣ ಚಾರ್ಜ್ ಮಾಡದಿದ್ದರೆ ದಂಡ ಪಾವತಿಸಬೇಕಾಗುತ್ತದೆ ಎನ್ನುವುದು ನನ್ನ ಗಮನಕ್ಕೆ ಬಂತು ಎಂದು ತಿಳಿಸಿದ್ದಾರೆ.

NWKRTC ಯ ವಕ್ತಾರರನ್ನು ಈ ಬಗ್ಗೆ ಕೇಳಿದ್ರೆ, ಲ್ಯಾಪ್‌ಟಾಪ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಅಂತಹ ಯಾವುದೇ ನಿಯಮವಿಲ್ಲ. ಲ್ಯಾಪ್‌ಟಾಪ್ ಮೊಬೈಲ್ ಫೋನ್‌ನಂತೆಯೇ ಒಂದು ಸಾಧನವಾಗಿರುವುದರಿಂದ ಪ್ರಯಾಣಿಕರ ಲಗೇಜ್‌ನ ಒಂದು ಭಾಗವಾಗಿದೆ. ಹಾಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದಿದ್ದಾರೆ.

ಇನ್ನು ಇದರ ಬಗ್ಗೆ ಗದಗ ಡಿಪೋ ವಿಭಾಗದ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ಪ್ರತಿಕ್ರಿಯಿಸಿ, ಸುತ್ತೋಲೆಯ ಪ್ರಕಾರ ಟಿವಿ, ರೆಫ್ರಿಜರೇಟರ್, ಡೆಸ್ಕ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಘಟಕಗಳ ಸಂಖ್ಯೆ ಮತ್ತು ದೂರದ ಆಧಾರದ ಮೇಲೆ 5 ರೂ.ನಿಂದ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ಲ್ಯಾಪ್‌ಟಾಪ್‌ಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಲ್ಯಾಪ್‌ಟಾಪ್‌ಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Published On - 11:00 pm, Thu, 10 November 22