ಆ ಪಟ್ಟಣದಲ್ಲೊಬ್ಬ ಡಿಫರಂಟ್ ಯುವಕ ಇದ್ದಾನೆ. ಆತನ ಸಾಧನೆ ನೋಡಿದ್ರೆ ನೀವು ಬೆಚ್ಚಿಬಿಳ್ತೀರಾ. ಹೌದು ಯಾರೇ ಆಗಲಿ ಸೀದಾ ತೆಂಗಿನ ಗಿಡ ಏರೋಕೆ ಭಯಪಡ್ತಾರೆ. ಆದ್ರೆ, ಈ ಯುವಕ ಯಾವುದೇ ಭಯವಿಲ್ಲದೇ ತೆಂಗಿನ ಗಿಡ ಏರೋದು ತಲೆ ಕೆಳಗೆ ಮಾಡಿ. ಅದು ಸರ ಸರನೇ ಮರ ಏರ್ತಾನೆ ಈ ಹುಡುಗ. ಈತ ವಿಚಿತ್ರವಾಗಿ ಮರ ಏರೋ ಶೈಲಿಗೆ ಇಡೀ ಪಟ್ಟಣದ ಜನ್ರೇ ಫಿದಾ ಆಗಿದ್ದಾರೆ. ತೆಂಗಿನ ಮರವನ್ನ ಉಲ್ಟಾ ಏರುವ ಮೂಲಕ ಅಚ್ಛರಿ ಮೂಡಿಸಿದ್ದಾನೆ. ಯಾರೀ ಅಂಜದ ಗಂಡು ಅಂತೀರಾ ಈ ಸ್ಟೋರಿ ನೋಡಿ….
ತಲೆ ಕೆಳಗೆ ಮಾಡಿ ತೆಂಗಿನ ಮರ ಏರೋ ಡಿಫರಂಟ್ ಯುವಕ…! ಯುವಕನ ಸಾಹಸ ನೋಡಿ ‘ಹೌದೋ ಗಂಡು’ ಅಂತಿರೋ ಜನ…! ಹಳ್ಳಿ ಪ್ರತಿಭೆಯ ಈ ಸಾಹಸ ನೋಡಿ ಅಚ್ಚರಿ ಪಡ್ತಾಯಿರೋ ಜನ್ರು…! ಕ್ಷಣಾರ್ಧದಲ್ಲಿ ಉಲ್ಟಾ ತೆಂಗಿನ ಮರ ಏರಿ ಹುಬ್ಬೇರುವಂತೆ ಮಾಡಿ ಯುವಕ..!
ಚಿತ್ರದುರ್ಗದಲ್ಲಿ ಕೋತಿ ರಾಮ ಕೋಟೆ ಹತ್ತಿ ಫೇಮಸ್ ಆಗಿದ್ದಾನೆ. ಆದ್ರೆ, ಇಲ್ಲೊಬ್ಬ ಯುವಕನ ಸಾಧನೆ ಮಾತ್ರ ತುಂಬ ಡಿಫರಂಟ್. ಸೀದಾ ಮರ ಏರೋದು ತುಂಬಾ ಕಷ್ಟ. ಅದು 40-50 ಅಡಿ ಎತ್ತರದ ತೆಂಗಿನ ಮರ ಏರೋದು ಅಂದ್ರೆ ಸುಮ್ಮನೆಯ ಮಾತಾ!? ಇಷ್ಟೊಂದು ಎತ್ತರದ ತೆಂಗಿನ ಮರಗಳನ್ನು ಈ ಯುವಕ ಕ್ಷಣಾರ್ಧದಲ್ಲಿ ತಲೆ ಕೆಳಗೆ ಮಾಡಿ ಸರಸರನೇ ಏರ್ತಾನೆ.
ಹೌದು ಅಂಜದ ಗಂಡು ಸಾಧನೆ ಮಾಡಿದ್ದು, ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ. ಹೌದು ಶಿರಹಟ್ಟಿ ಪಟ್ಟಣದ 22 ವರ್ಷದ ಯುವಕ ಈಶ್ವರ (Ishwar Jidagannavar) ಎಂಬಾತನೇ ವಿಶೇಷ ಸಾಧನೆ ಮಾಡಿದ ಯುವಕ. ಈತ ತೆಂಗಿನ ಮರ ಏರ್ತಾನೆ ಅಂದ್ರೆ ಸಾಕು ನೂರಾರು ಜನ್ರು ನಿಂತು ನೋಡ್ತಾರೆ. ಮರ ಏರೋದ್ರಲ್ಲೇನು ವಿಶೇಷ ಅಂತಾರೆ.
ಸೀದಾ ಮರ ಏರೋ ಸಾಮಾನ್ಯ. ಈ ಈಶ್ವರ ಉಲ್ಟಾ ಮರ ಹತ್ತುತ್ತಾನೆ. ಉಲ್ಟಾ ಮರ ಹತ್ತೋದ್ರಲ್ಲಿ ಈತ ಫುಲ್ ಫೇಮಸ್ ಆಗಿದ್ದಾನೆ. ತಮ್ಮ ತೋಟದಲ್ಲಿ ತೆಂಗಿನ ಮರದಲ್ಲಿ ಸುಮಾರು ಎರಡು ವರ್ಷಗಳ ಪರಿಶ್ರಮ ದಿಂದ ಉಲ್ಟಾ ತೆಂಗಿನ ಮರ ಏರಲು ಕಲಿತಿದ್ದಾನೆ. ಸಿದಾ ತೆಂಗಿನ ಮರ ಏರಲು ಜನ್ರು ಹಿಂದೇಟು ಹಾಕ್ತಾರೆ. ಆದ್ರೆ ಈಶ್ವರ ಮಾತ್ರ ಕ್ಷಣಾರ್ಧದಲ್ಲಿ ತಲೆ ಕೆಳಗೆ ಮಾಡಿ ತೆಂಗಿನ ಮರ ಹತ್ತಿ ಬಿಡುತ್ತಾನೆ.
ಈಶ್ವರನ ಸಾಹಸಮಯ ಕೆಲಸ ನೋಡಿ ಜನ್ರು ಅಚ್ಚರಿಗೊಂಡಿದ್ದಾರೆ. ಈತ ತಲೆ ಕೆಳಗೆ ಮಾಡಿ ಮರ ಏರ್ತಾಯಿದ್ರೆ ಜನ್ರ ಎದೆಯಲ್ಲಿ ಢವಢವ ಶುರುವಾಗುತ್ತೆ. ಅಷ್ಟೊಂದ ಜೀವ ರಿಸ್ಕ್ ದಿಂದ ಮರ ಹತ್ತುವ ಸಾಧನೆ ಮಾಡಿದ್ದಾನೆ. ಒಂದು ದಿನ ಆತನ ತೋಟದಲ್ಲಿ ಮಂಗವೊಂದು ಉಲ್ಟಾ ಮರ ಇಳಿಯೋದನ್ನು ನೋಡಿದ್ದಾನೆ. ಅಷ್ಟೇ ನಾನೂ ಯಾಕೆ ತಲೆ ಕೆಳಗೆ ಮಾಡಿ ಮರ ಹತ್ತಬಾರದು ಅಂತ ತಲೆಯಲ್ಲಿ ಅಲೋಚನೆ ಬಂದಿದೆ ಅಷ್ಟೇ.
ತಮ್ಮದೇ ತೋಟದಲ್ಲಿ ತಲೆ ಕೆಳಗೆ ಮಾಡಿ ಮರ ಏರಲು ಶುರು ಮಾಡಿ ಸಾಕಷ್ಟು ಶ್ರಮಪಟ್ಟು ಈ ಸಾಧನೆ ಮಾಡಿದ್ದಾನೆ. ಏರುವಾಗ ಸ್ವಲ್ಪ ಹೆಚ್ಚುಕಮ್ಮಿಯಾದ್ರೂ ಜೀವನಕ್ಕೆ ಅಪಾಯ ಗ್ಯಾರಂಟಿ. ಮನೆಯಲ್ಲಿ ತಂದೆ, ತಾಯಿಗೆ ಗೋತ್ತಿಲ್ಲದೇ ಈ ಸಾಹಸ ಮಾಡಿದ್ದಾನೆ. ಮನೆಯಲ್ಲಿ ತಂದೆ, ತಾಯಿಗೆ ಗೋತ್ತಾದ್ರೆ ಬೈತಾರೇ ಅಂತ ಮನೆಯಲ್ಲೂ ಯಾರಿಗೂ ಹೇಳಿಲ್ಲ. ಜನ್ರಿಂದ್ಲೇ ಮಗನ ಸಾಧನೆ ಬಗ್ಗೆ ತಂದೆ ತಿಳಿದುಕೊಂಡಿದ್ದಾರೆ. ಈಶ್ವರ ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರುವ ಗುರಿಯನ್ನು ಹೊಂದಿದ್ದಾರೆ.
ಈಗಾಗಲೇ 40 ಅಡಿ ಎತ್ತರದ ತೆಂಗಿನ ಮರವನ್ನ ಉಲ್ಟಾ ಏರಿರುವ ಈಶ್ವರ. ನೂರು ಅಡಿಯವರಿಗೆ ಉಲ್ಟಾ ಏರಬೇಕೆಂಬ ಆಸೆಯಿದೆ ಈತನಿಗೆ. ಈ ಮೂಲಕ ಸಾಧನೆ ಮಾಡುವ ಛಲ ಹೊಂದಿದ್ದಾನೆ. ತೆಂಗಿನ ಮರ ಹತ್ತುವುದು ತುಂಬಾನೆ ಕಷ್ಟದ ಕೆಲಸ ಯಾಕೆಂದರೆ ತೆಂಗಿನ ಮರ ಏರಲು ಹೋದ್ರೆ ಕೈ ಕಾಲುಗಳು ಜಾರುತ್ತವೆ.. ಆದ್ರೆ ಇಂತಹ ಕಷ್ಟದ ಕೆಲಸವನ್ನ ಸರಳವಾಗಿ ತೆಂಗಿನ ಮರ ಏರುವ ಮೂಲಕ ಈಶ್ವರ ಈ ಭಾಗದಲ್ಲಿ ಭಾರಿ ಫೇಮಸ್ ಆಗಿದ್ದಾನೆ. ನಮ್ಮೂರು ಯುವಕನ ಸಾಧನೆ ನೋಡಿ ನಮಗೆ ತುಂಬ ಖುಷಿಯಾಗಿದೆ. ಈತ ದೊಡ್ಡ ಸಾಧನೆ ಮಾಡಿ ನಮ್ಮೂರು, ರಾಜ್ಯದ ಹೆಸರು ತರುವಂತಾಗಲೀ ಅಂತ ಹಾರೈಸಿದ್ದಾರೆ.
ಒಟ್ಟಿನಲ್ಲಿ ಡೆಂಜರ್ ಜೋನ್ ನಲ್ಲಿ ತೆಂಗಿನ ಮರ ಏರಿ ಸಾಹಸ ಕೆಲಸ ಮಾಡಿರುವ ಈಶ್ವರ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರದುರ್ಗದ ಕೋಟೆ ಹತ್ತವು ಕೋತಿ ರಾಮನಂತೆ ನಮ್ಮ ಈಶ್ವರನು ಫೇಮಸ್ ಆಗಬೇಕು ಸಾಧನೆ ಮಾಡಬೇಕು ಅನ್ನೋದು ಎಲ್ಲರ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Mon, 11 March 24