ಗದಗ: ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಅತ್ಯಾಚಾರಿಗಳಿಗೆ 25 ವರ್ಷ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಪ್ರತ್ಯೇಕ ಎರಡು ಪೋಕ್ಸೋ ಪ್ರಕರಣದಲ್ಲಿ ಮಲ್ಲೇಶ್ ಮತ್ತು ವೆಂಕಟೇಶ ಶಾವಿಗೆ ಇಬ್ಬರು ಅಪಾರಧಿಗಳಿಗೆ ತಲಾ 25 ವರ್ಷ ಶಿಕ್ಷೆ ನೀಡಿ ಆದೇಶ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ನವೆಂಬರ್ 19, 2018 ರಂದು ಪುಸ್ತಕ ತರಲು ಹೊರಟಿದ್ದ 8 ವರ್ಷದ ಬಾಲಕಿಯನ್ನು ಮಲ್ಲೇಶ ಪುಸ್ತಕ ಕೊಡಿಸುವುದಾಗಿ ಹೇಳಿ ಪುಸಲಾಯಿಸಿದ್ದಾನೆ. ಬಳಿಕ ಮಲ್ಲೇಶ ಬಾಲಕಿಯನ್ನು ಪಾಳುಬಿದ್ದ ಕಟ್ಟಡಕ್ಕೆ ಕರೆದ್ಯೊಯ್ದು ಅತ್ಯಾಚಾರವೆಸಗಿದ್ದಾನೆ. ಈ ಪ್ರಕರಣ ಸಂಬಂಧ ನ್ಯಾಯಾಲಯ 25 ವರ್ಷ ಶಿಕ್ಷೆ, 1 ಲಕ್ಷ 10 ಸಾವಿರ ದಂಡ ವಿಧಿಸಿದೆ.
ಮೊತ್ತೊಂದು ಪ್ರಕರಣದಲ್ಲಿ ಅಪರಾಧಿ ವೆಂಕಟೇಶ ಶಾವಿಗೆ ಅವನಿಗೆ 25 ವರ್ಷ ಶಿಕ್ಷೆ ಹಾಗೂ 1 ಲಕ್ಷ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಸರ್ಕಾರಿ ಅಭಿಯೋಜಕ ಅಮರೇಶ್ ಹಿರೇಮಠ ಹಾಗೂ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಜಂಟಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಅತ್ಯಾಚಾರ ಪ್ರಕರಣಗಳು ಗದಗ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದವು.
ಕಾಲುವೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ರಾಮನಗರ: ಕಾಲುವೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಮನಗರದ ಕೆಂಪೇಗೌಡ ಸರ್ಕಲ್ ಬಳಿ ನಡೆದಿದೆ. ರಾಮನಗರದ ಇಂದಿರಾನಗರದ ನಿವಾಸಿ ದೇವರಾಜು(50 ) ಮೃತ ವ್ಯಕ್ತಿ. ರಸ್ತೆ ಪಕ್ಕದ ಕಾಲುವೆಗೆ ತಡೆಗೋಡೆ ಇಲ್ಲದ್ದೆ ಇರುವುದು ವ್ಯಕ್ತಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಕ್ಕರೆ ಕಾರ್ಖಾನೆಯಲ್ಲಿ ಕ್ರೇನ್ ಬಿದ್ದು ಕಾರ್ಮಿಕ ದುರ್ಮರಣ
ಬೆಳಗಾವಿ: ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಶಿರಗುಪ್ಪಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕ್ರೇನ್ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಕಾರ್ಮಿಕ ದಿಲೀಪ್ ಚೋಟಿಲಾಲ್ ಯಾದವ್ ಮೃತ ಕಾರ್ಮಿಕ. ಸಕ್ಕರೆ ಕಾರ್ಖಾನೆಯಲ್ಲಿ ದುರಸ್ತಿ ವೇಳೆ ಸಂಭವಿಸಿದ ಅವಘಡ ಸಂಭವಿಸಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಲ್ಲಿಕ್ ಮಾಡಿ
Published On - 7:15 pm, Fri, 7 October 22