
ಗದಗ, ನವೆಂಬರ್ 08: ಆ ವ್ಯಕ್ತಿಗೆ (man) ಗಂಭೀರ ಕಾಯಿಲೆ ಇತ್ತು. ಬ್ರೇನ್ ಹ್ಯಾಬ್ರೇಜ್ ಹಾಗೂ ಪಿತ್ತಕೋಶ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಆರು ಗಂಟೆಗಳ ಕಾಲ ವೈದ್ಯರು ಆಪರೇಷನ್ ಮಾಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಸ್ಥಿತಿ ಚಿಂತಾಜನವಾಗಿತ್ತು. ವ್ಯಕ್ತಿ ಕೋಮಾಗೆ ಹೋಗಿದ್ದರು. ಆದರೆ ಮೃತಪಟ್ಟಿದ್ದಾರೆಂದು (death) ಸುದ್ದಿ ಹಬ್ಬಿತ್ತು. ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು. ಆದರೆ ನಡುರಸ್ತೆಯಲ್ಲಿ ಏಕಾಏಕಿ ವ್ಯಕ್ತಿ ಉಸಿರಾಟದಿಂದ ಎಲ್ಲರಿಗೂ ಅಚ್ಚರಿಯುಂಟಾಗಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂತಹದೊಂದು ಅಚ್ಚರಿ ಘಟನೆ ಗದಗ-ಬೆಟಗೇರಿಯಲ್ಲಿ ನಡೆದಿದೆ. ಗದಗ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ್ (38) ಅವರು ಬ್ರೇಜ್ ಹ್ಯಾಬ್ರೇಜ್, ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ನಾರಾಯಣ ವನ್ನಾಲ್ಗೆ ಸುಮಾರು ಆರು ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸ್ಥಿತಿ ಗಂಭೀರವಾಗಿತ್ತು. ಕೋಮಾಕ್ಕೆ ಹೋಗಿದ್ದರು.
ಇದನ್ನೂ ಓದಿ: ಕಲಬುರಗಿ: ಹಗಲಲ್ಲಿ ಕುರಾನ್ ಬೋಧಕ; ರಾತ್ರಿ ಮನೆಗಳಿಗೆ ಕನ್ನ, ಶಿಕ್ಷಕ ಅರೆಸ್ಟ್
ವೆಂಟಿಲೇಟರ್ ತೆಗೆದರೆ ಬದುಕಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಸಂಬಂಧಿಕರು ಆ್ಯಂಬುಲೆನ್ಸ್ನಲ್ಲಿ ಗದಗ ನಗರಕ್ಕೆ ಕೆರೆ ತರುವಾಗ ಪ್ರಾಣ ಹೋಗಿತ್ತಂತೆ. ಹೀಗಾಗಿ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆದರೆ ಮನೆಗೆ ತರುವ ವೇಳೆ ಮತ್ತೆ ಉಸಿರಾಡುವ ಮೂಲಕ ಎಲ್ಲರಿಗೂ ಅಚ್ಚರಿಗೊಳಿಸಿದ್ದಾರೆ.
ಇದನ್ನೂ ಓದಿ: ಒಂದೂವರೆ ಗಂಟೆಯಿಂದ ಆಗಸದಲ್ಲೇ ಸುತ್ತಾಡಿದ ವಿಮಾನ: ಮುಂದೇನಾಯ್ತು?
ಮೃತಪಟ್ಟಿದ್ದಾರೆ ಎಂದು ತಿಳಿದಿದ್ದ ನಾರಾಯಣ ಅಚ್ಚರಿ ಎಂಬಂತೆ ಉಸಿರಾಡಿದ್ದಾರೆ. ತಕ್ಷಣ ಕುಟುಂಬಸ್ಥರು ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಚ್ಚರಿಯ ಘಟನೆಯಿಂದ ಗದಗ-ಬೆಟಗೇರಿಯಲ್ಲಿ ಸಂಚಲನ ಮೂಡಿದೆ. ಇದು ದೇವರ ಪವಾಡ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ನಾರಾಯಣ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಒಟ್ಟಾರೆ ವೈದ್ಯರ ನಿರ್ಲಕ್ಷ್ಯದಿಂದ ಜೀವಂತವಾಗಿದ್ದ ವ್ಯಕ್ತಿಯ ಅಂತ್ಯಕ್ರಿಯೆ ಆಗುತ್ತಿತ್ತು. ಆದರೆ ಪವಾಡಸದೃತ್ ಎಂಬಂತೆ ಬದುಕುಳಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.