ಕೊರೊನಾ ಮಧ್ಯೆಯೇ ಗದಗದಲ್ಲಿ ಸೈಟ್‌ ಹರಾಜು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಗದಗ: ಊರಿಗೆ ಒಂದು ಚಿಂತೆಯಾದ್ರೆ ಉಡಾಳನಿಗೆ ಮತ್ತೊಂದು ಚಿಂತೆ ಎನ್ನೋ ಮಾತಿದೆ. ಇದು ಗದಗ್​ನ ಕರ್ನಾಟಕ ಗೃಹಮಂಡಳಿ ಕಚೇರಿಗೆ ಪಕ್ಕಾ ಅನ್ವಯವಾಗುತ್ತೆ. ಯಾಕಂದ್ರೆ ಜಗತ್ತೆಲ್ಲಾ ಕೊರೊನಾ ವಿರುದ್ಧ ಹೋರಾಟ ಮಾಡ್ತಿರಬೇಕಾದ್ರೆ ಇವರು ಸೈಟ್‌ ಸೇಲ್‌ ಮಾಡೋಕೆ ಮುಂದಾಗಿದ್ದಾರೆ. ಹೌದು, ಎಲ್ಲೆಡೆಯಂತೆ ಗದಗ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಗದಗ ಜಿಲ್ಲೆಯಲ್ಲಿ ಇದುವರೆಗೆ 174 ಜನ ಸೋಂಕಿತರಾಗಿದ್ದಾರೆ. ಕೊರೊನಾದಿಂದ ಜನರನ್ನ ರಕ್ಷಿಸೋಕೆ ವೈದ್ಯರು ಮತ್ತು ಸರ್ಕಾರ ಹೋರಾಡ್ತಿರಬೇಕಾದ್ರೆ, ಗದಗ್​ನ ಕರ್ನಾಟಕ ಗೃಹಮಂಡಳಿ ಸೈಟ್‌ ಮಾರಿ […]

ಕೊರೊನಾ ಮಧ್ಯೆಯೇ ಗದಗದಲ್ಲಿ ಸೈಟ್‌ ಹರಾಜು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
Edited By:

Updated on: Jun 30, 2020 | 2:06 PM

ಗದಗ: ಊರಿಗೆ ಒಂದು ಚಿಂತೆಯಾದ್ರೆ ಉಡಾಳನಿಗೆ ಮತ್ತೊಂದು ಚಿಂತೆ ಎನ್ನೋ ಮಾತಿದೆ. ಇದು ಗದಗ್​ನ ಕರ್ನಾಟಕ ಗೃಹಮಂಡಳಿ ಕಚೇರಿಗೆ ಪಕ್ಕಾ ಅನ್ವಯವಾಗುತ್ತೆ. ಯಾಕಂದ್ರೆ ಜಗತ್ತೆಲ್ಲಾ ಕೊರೊನಾ ವಿರುದ್ಧ ಹೋರಾಟ ಮಾಡ್ತಿರಬೇಕಾದ್ರೆ ಇವರು ಸೈಟ್‌ ಸೇಲ್‌ ಮಾಡೋಕೆ ಮುಂದಾಗಿದ್ದಾರೆ.

ಹೌದು, ಎಲ್ಲೆಡೆಯಂತೆ ಗದಗ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಗದಗ ಜಿಲ್ಲೆಯಲ್ಲಿ ಇದುವರೆಗೆ 174 ಜನ ಸೋಂಕಿತರಾಗಿದ್ದಾರೆ. ಕೊರೊನಾದಿಂದ ಜನರನ್ನ ರಕ್ಷಿಸೋಕೆ ವೈದ್ಯರು ಮತ್ತು ಸರ್ಕಾರ ಹೋರಾಡ್ತಿರಬೇಕಾದ್ರೆ, ಗದಗ್​ನ ಕರ್ನಾಟಕ ಗೃಹಮಂಡಳಿ ಸೈಟ್‌ ಮಾರಿ ಕಾಂಚಾಣ ಎಣಿಸೋಕೆ ಮುಂದಾಗಿದೆ. ಈ ಸಂಬಂಧ ಅದು ಸೈಟ್‌ ಹರಾಜು ಪ್ರಕ್ರಿಯೆಯನ್ನ ಇವತ್ತು ನಗರದಲ್ಲಿ ನಡೆಸ್ತಿದೆ.

ಆದ್ರೆ ಇದಕ್ಕಾಗಿ ಕನಿಷ್ಠ ಮುನ್ನೆಚ್ಚರಿಕೆಯನ್ನ ಕೂಡಾ ಅದು ಕೈಗೊಂಡಿಲ್ಲ. ಸಾವಿರಾರು ಜನರು ಸೇರಿರೋ ಈ ಸಂದರ್ಭದಲ್ಲಿ ಅದು ಸ್ಯಾನಿಟೈಸರ್‌ ಆಗಲಿ, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಆಗಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳವ ವ್ಯವಸ್ಥೆಯನ್ನಾಗಲಿ ಮಾಡೇ ಇಲ್ಲ. ಪರಿಣಾಮ ಜನರಿಂದ ನೂಕುನುಗ್ಗಲಾಗಿದೆ. ಇಷ್ಟೇ ಅಲ್ಲ ಸೇರಿದ ಕೆಲ ಜನರು ಬೇಜವಾಬ್ದಾರಿ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Published On - 1:52 pm, Tue, 30 June 20