ಗದಗ: ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ(Power Generation) ಮಾಡುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಪವರ್ ಉತ್ಪಾದನೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದರೇ, ರಾಜ್ಯದಲ್ಲಿ ಗದಗ ಜಿಲ್ಲೆ ಮೊದಲಿದೆ. ಎಲ್ಲಿ ಕಣ್ಣು ಹಾಯಿಸಿದರೂ ಪವನ ಯಂತ್ರಗಳ ಕಲರವ. ಭರ್ ಭರ್ ಎಂದು ಸದ್ದು ಮಾಡಿ ಭರ್ಜರಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಯಂತ್ರಗಳು. ಹೌದು ಮುದ್ರಣ ಕಾಶಿ ಗದಗ ಜಿಲ್ಲೆ ಇಡೀ ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ಗಾಳಿ ಬಿಸುವ ಪ್ರದೇಶ. ಈ ಗಾಳಿ ಇವಾಗ ಜಿಲ್ಲೆಗೆ ಭಾರಿ ವರದಾನವಾಗಿದೆ. ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಪವನ್ ಯಂತ್ರಗಳನ್ನು ಆಳವಡಿಸಲಾಗಿದೆ. ಹೀಗಾಗಿ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಪವನ್ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದೆ.
ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಹಾಗೂ ಗಜೇಂದ್ರಗಡ ಬೆಟ್ಟ, ಲಕ್ಕುಂಡಿ, ಹರ್ತಿ, ನರೇಗಲ್, ಸೇರಿದಂತೆ ಜಿಲ್ಲೆಯಾದ್ಯಂತ 687 ಕ್ಕೂ ಹೆಚ್ಚು ಪವನ ಯಂತ್ರಗಳನ್ನು ಅಳವಡಿಸಲಾಗಿದೆ. ಇನ್ನೂ ಅಳವಡಿಸುವ ಕಾರ್ಯವೂ ನಡೆದಿದೆ. ಹೀಗಾಗಿ ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆಯ ಹೆಗ್ಗಳಿಕೆಗೆ ಗದಗ ಜಿಲ್ಲೆ ಪಾತ್ರವಾಗಿದೆ. ಪ್ರತಿ ತಿಂಗಳು 50 ರಿಂದ 60 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 50 ರಿಂದ 60 ಮಿಲಿಯನ್ ಯೂನಿಟ್ ವಿದ್ಯುತ್ ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತಿದೆ. ಭಾರತ ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ರೆ, ರಾಜ್ಯದಲ್ಲಿ ಗದಗ ಜಿಲ್ಲೆ ಅತೀ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದೆ.
ಇದನ್ನೂ ಓದಿ:Fire Accident: ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ; ವಿದ್ಯುತ್ ಉತ್ಪಾದನೆ ಸ್ಥಗಿತ
ಇನ್ನು ಈ ಕುರಿತು ಗದಗ ಹೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನೀಯರ್ ರಾಜೇಶ್ ಕಲ್ಯಾಣಶೆಟ್ಟಿ ‘ ಜಿಲ್ಲೆಯಲ್ಲಿ ಇನ್ನೂ ಹೆಚ್ವಿನ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಗದಗ ಜಿಲ್ಲೆ ಪವನ ಯಂತ್ರಗಳ ಅಳವಡಿಕೆಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಉತ್ತಮವಾದ ಗಾಳಿ ಇರೋದರಿಂದ ಪವನ್ ಯಂತ್ರಗಳಿಂದ ವಿದ್ಯುತ್ ಉತ್ಪಾದನೆ ಮಾಡಲು ಸಹಕಾರಿಯಾಗಿದೆ ಎಂದರು.
ಗದಗ ಜಿಲ್ಲೆಯಲ್ಲಿ ಸರ್ಕಾರದ ಹಾಗೂ ಖಾಸಗಿ ಮಾಲಿಕತ್ವದ ನೂರಾರು ವಿಂಡ್ ಫ್ಯಾನ್ ಗಳಿವೆ. ಸರ್ಕಾರಕ್ಕೆ ಹಾಗೂ ಖಾಸಗಿಯಾಗಿ ಕೂಡ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ವಿಂಡ ಫ್ಯಾನ್ ನಿಂದ ವಿದ್ಯುತ್ ಉತ್ಪಾದನೆ ಮಾಡಲು ಸಾಕಷ್ಟು ಅನುಕೂಲತೆ ಇರೋದರಿಂದ ವಿಂಡ್ ಕಂಪನಿಗಳು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪವನ ವಿದ್ಯುಂತ್ ಯಂತ್ರಗಳು ಅಳವಡಿಸುತ್ತಿವೆ. ಈ ಮೂಲಕ ಭರ್ಜರಿ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಇದರಿಂದ ಕೆಲ ಸ್ಥಳೀಯ ರೈತರಿಗೆ ಅನುಕೂಲವಾದ್ರೆ, ಇನ್ನೂ ಕೆಲ ರೈತರಿಗೆ ಅನಾನಕೂಲವೂ ಆಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ