Pralhad Joshi: ವಿದ್ಯುತ್ ಉತ್ಪಾದನೆಗಾಗಿ ಸುಧಾರಿತ ಮಾರ್ಗದಲ್ಲಿ ಕಲ್ಲಿದ್ದಲು ಪೂರೈಕೆಗೆ ಒತ್ತು -ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Electricity: ಇಂಧನ ನಿಗಮಗಳು ಹಾಗೂ ಕಂಪೆನಿಗಳಿಗೆ ಕಲ್ಲಿದ್ದಲು ಸಾಗಣೆ ಮಾಡಲು ರಸ್ತೆ ಹಾಗೂ ರೈಲು ಎರಡು ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು: ವಿದ್ಯುತ್ (Electricity) ಉತ್ಪಾದನಾ ಕಂಪನಿಗಳು ಹಾಗು ನಿಗಮಗಳಿಗೆ ಕಲ್ಲಿದ್ದಲನ್ನು (Coal) ಸುಧಾರಿತ ಮಾರ್ಗದಲ್ಲಿ ಪೂರೈಸುವಂತೆ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸಭೆ ನಡೆಸಿದರು. ಕಲ್ಲಿದ್ದಲು ಸುಗಮ ಪೂರೈಕೆ ಕುರಿತಂತೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.
ಕಲ್ಲಿದ್ದಲು ವಿತರಣೆಯಲ್ಲಿ ಪ್ರಸ್ತುತ ಎದುರಾಗುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಂಡು ಯಾವ ರೀತಿ ಟಿಪಿಪಿಗಳಿಗೆ ಕಲ್ಲಿದ್ದಲು ವಿತರಣೆಯನ್ನು ಸುಗಮಗೊಳಿಸಬಹುದು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಇಂಧನ ನಿಗಮಗಳು ಹಾಗೂ ಕಂಪೆನಿಗಳಿಗೆ ಕಲ್ಲಿದ್ದಲು ಸಾಗಣೆ ಮಾಡಲು ರಸ್ತೆ ಹಾಗೂ ರೈಲು ಎರಡು ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Chaired a meeting with Principal Secretaries of Karnataka, Andhra Pradesh, Telangana & Tamil Nadu. The meeting was also attended by Chairman of Karnataka Power Corporation, Andhra Pradesh GenCo, Tamil Nadu Generation & Distribution Corporation and Telangana State Power GenCo. pic.twitter.com/BRU9EffP42
— Pralhad Joshi (@JoshiPralhad) December 3, 2022
ಕಲ್ಲಿದ್ದಲು ವ್ಯಾಗನ್‌ಗಳ ಇಳಿಸುವಿಕೆಯ ಸಮಯವನ್ನು ಸುಧಾರಿಸಲು ಒತ್ತು ನೀಡಬೇಕಾಗಿದೆ. ದೀರ್ಘಾವಧಿಯ ಕಲ್ಲಿದ್ದಲು ದಾಸ್ತಾನು ನಿರ್ಮಿಸಲು ಆರ್‌ಎಸ್‌ಆರ್ (ರೈಲ್ ಕಮ್ ಸೀ) ಮೋಡ್ ಅನ್ನು ಅನ್ವೇಷಿಸಲು ಜೆನ್‌ಕೋಗೆ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ. ಇದಲ್ಲದೆ, ರೋಡ್ ಮೋಡ್ ಮತ್ತು ರೋಪ್‌ವೇ ಮೂಲಕ 40,000 TPD ಕಲ್ಲಿದ್ದಲನ್ನು ಎತ್ತಬಹುದು. ವ್ಯಾಗನ್ ಅನ್‌ಲೋಡಿಂಗ್ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆಗೆ ಜೋಶಿ ಸಲಹೆ ನೀಡಿದರು.
ಕರ್ನಾಟಕ ಇಂಧನ ನಿಗಮ, ಆಂಧ್ರ ಪ್ರದೇಶ ಜೆನ್ಕೋ, ತೆಲಂಗಾಣಾ ಜೆನ್ಕೋ ಮತ್ತು ತಮಿಳನಾಡು ಉತ್ಪಾದನೆ ಹಾಗೂ ವಿತರಣೆ ನಿಗಮದ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸಿದ್ದರು.
Published On - 6:40 pm, Sat, 3 December 22