ಗದಗ: ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು, ದಾಳಿ ಮಾಡಿ ನೂರಾರು ಟಿಪ್ಪರ್ ಮರಳು ಸೀಜ್

| Updated By: ಆಯೇಷಾ ಬಾನು

Updated on: Jan 03, 2024 | 11:50 AM

ಅಕ್ರಮ ಮರಳು ದಂಧೆ ಗೊತ್ತಿದ್ದರೂ, ಜಿಲ್ಲಾಡಳಿತ ಜಾಣಕುರುಡುತನ ಪ್ರದರ್ಶನ ಮಾಡಿತ್ತು. ಯಾವಾಗ ಡಿಸೆಂಬರ್ 27 ರಂದು ಟಿವಿ9 ಡಿಜಿಟಲ್​ನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಲಾಯಿತೋ ಆಗ ನಿದ್ದೆಯಿಂದ ಎದ್ದ ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ನೂರಾರು ಟಿಪ್ಪರ್ ಮರಳು ಸೀಜ್ ಮಾಡಿದ್ದಾರೆ.

ಗದಗ: ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು, ದಾಳಿ ಮಾಡಿ ನೂರಾರು ಟಿಪ್ಪರ್ ಮರಳು ಸೀಜ್
ನೂರಾರು ಟಿಪ್ಪರ್ ಮರಳು ಸೀಜ್
Follow us on

ಗದಗ, ಡಿ.29: ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ (Sand Mafia) ವಿಚಾರ ಭಾರಿ ಸದ್ದು ಮಾಡಿತ್ತು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ (Tv9 Impact) ಎಚ್ಚೆತ್ತುಕೊಂಡ‌ ಜಿಲ್ಲಾಡಳಿತ, ಗದಗ ಜಿಲ್ಲೆಯ‌ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳು ಅಡ್ಡೆ ಮೇಲೆ ದಾಳಿ ನಡೆಸಿ ನೂರಾರು ಟಿಪ್ಪರ್ ಮರಳು ಸೀಜ್ ಮಾಡಿದೆ. ಎಗ್ಗಿಲ್ಲದೇ ಅಕ್ರಮ‌ ಮರಳು ಗಣಿಗಾರಿಕೆ‌ ನಡಿತಾಯಿದ್ರೂ ಗಪ್ ಚುಪ್ ಆಗಿದ್ದ ಜಿಲ್ಲಾಡಳಿತ ಟಿವಿ9 ವರದಿ ಬಳಿಕ ಎಚ್ಚೆತ್ತುಕೊಂಡಿದ್ದು ಅಪಾರ‌ ಮರಳು ಸೀಜ್ ಮಾಡಿದೆ. ಕಂದಾಯ, ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಮರಳು ಸೀಜ್ ಮಾಡಲಾಗಿದೆ.

ಗದಗ ಜಿಲ್ಲಾ ಪೊಲೀಸರು ಅಲರ್ಟ್‌ ಆಗಿದ್ದು ಈಗ ನದಿ ಪಾತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳಿಗೆ ಕಾವಲು ಹಾಕಲಾಗಿದೆ. ಗದಗ ಜಿಲ್ಲೆಯ‌ ಮುಂಡರಗಿ ತಾಲೂಕಿನ ಸಿಂಗಟಾಲೂರ, ಶೀರನಹಳ್ಳಿ, ಹೆಸರೂರ ಗ್ರಾಮಗಳ ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿತ್ತು.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ: ಅಧಿಕಾರಿಗಳು ಶಾಮೀಲು ಆರೋಪ

ಗದಗ ಜಿಲ್ಲೆಯ‌ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿದೆ. ಈ ನದಿ ಪಾತ್ರದಲ್ಲಿ ಯಾವುದೇ ಮರಳು ಟೆಂಡರ್ ಇಲ್ಲ. ಇಲ್ಲಿ ನಡಿಯುತ್ತಿರುವ ಮರಳು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆಕೋರರು ನದಿ ಒಡಲು ಬಗೆದು ಮರಳು ಹೆಕ್ಕುತ್ತಿದ್ದಾರೆ. ಸಿಂಗಟಾಲೂರ, ಶೀರನಹಳ್ಳಿ, ಹೆಸರೂರ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡೆಸಿದ್ದಾರೆ. ಕಾನೂನು ಸಚಿವರ ತವರಲ್ಲೇ ಎಲ್ಲ ಕಾನೂನುಗಳು ಗಾಳಿಗೆ ತೂರಿ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ‌ ನಡೆದ್ರೂ ಗಣಿ ಹಾಗೂ ಕಂದಾಯ ಇಲಾಖೆ ಡೋಂಟ್ ಕೇರ್ ಅಂತಿವೆ ಎಂದು ರೈತರು, ನದಿ ಪಾತ್ರದ ಗ್ರಾಮಗಳ ಜನರು ಆಕ್ರೋಶ ಹೊರ ಹಾಕಿದೆ ಎಂದು ಟಿವಿ9 ವರದಿ ಮಾಡಿತ್ತು.

ಅಕ್ರಮ ಮರಳು ದಂಧೆ ಗೊತ್ತಿದ್ದರೂ, ಜಿಲ್ಲಾಡಳಿತ ಜಾಣಕುರುಡುತನ ಪ್ರದರ್ಶನ ಮಾಡಿತ್ತು. ಯಾವಾಗ ಡಿಸೆಂಬರ್ 27 ರಂದು ಟಿವಿ9 ಡಿಜಿಟಲ್​ನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಲಾಯಿತೋ ಆಗ ನಿದ್ದೆಯಿಂದ ಎದ್ದ ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ನೂರಾರು ಟಿಪ್ಪರ್ ಮರಳು ಸೀಜ್ ಮಾಡಿದ್ದಾರೆ. ಕೊನೆಗೂ ಜಿಲ್ಲಾಡಳಿತ‌ ಟಿವಿ9 ಡಿಜಿಟಲ್ ವರದಿಗೆ ಎಚ್ಚೆತ್ತುಕೊಂಡಂತಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:26 am, Fri, 29 December 23