ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ: ಅಧಿಕಾರಿಗಳು ಶಾಮೀಲು ಆರೋಪ
ಗದಗ ಜಿಲ್ಲೆಯಲ್ಲಿ ಮರಳು ಮಾಫಿಯಾಕ್ಕೆ ತುಂಗಭದ್ರಾ ನದಿ ವಿಲವಿಲ ಅಂತಿದೆ. ತುಂಗಭದ್ರಾ ನದಿಯಲ್ಲಿ ದಂಧೆಕೋರರು ರಾಜಾರೋಷವಾಗಿ ಜೆಸಿಬಿಗಳಿಂದ ನದಿ ಒಡಲು ಬಗೆಯುತ್ತಿದ್ದಾರೆ. ಕಾನೂನು ಸಚಿವರ ತವರು ಜಿಲ್ಲೆಯಲ್ಲೇ ಕಾನೂನು ಗಾಳಿ ತೂರಿ ಅಕ್ರಮ ಮರಳು ಮಾಫಿಯಾ ನಡೆದ್ರೂ ಜಿಲ್ಲಾಡಳಿತ ಮಾತ್ರ ಗಪ್ ಚುಪ್ ಆಗಿದೆ. ಇದು ರೈತರು, ನದಿ ಪಾತ್ರಗಳ ಗ್ರಾಮಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ, ಡಿಸೆಂಬರ್ 27: ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು (Sand) ದಂಧೆ ಎಗ್ಗಿಲ್ಲದೇ ಸಾಗಿದೆ. ಈ ನದಿ ಪ್ರಾತ್ರದಲ್ಲಿ ಯಾವುದೇ ಮರಳು ಟೆಂಡರ್ ಇಲ್ಲ. ಇಲ್ಲಿ ನಡೀಯುತ್ತಿರೋ ಮರಳು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆಕೋರರು ನದಿ ಒಡಲು ಬಗೆದು ಮರಳು ಹೆಕ್ಕುತ್ತಿದ್ದಾರೆ. ಸಿಂಗಟಾಲೂರ, ಶೀರನಹಳ್ಳಿ, ಹೆಸರೂರ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡೆಸಿದ್ದಾರೆ.
ಕಾನೂನು ಸಚಿವರ ತವರಲ್ಲೇ ಎಲ್ಲ ಕಾನೂನುಗಳು ಗಾಳಿಗೆ ತೂರಿ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ ನಡೆದ್ರೂ ಗಣಿ ಹಾಗೂ ಕಂದಾಯ ಇಲಾಖೆ ಡೋಂಟ್ ಕೇರ್ ಅಂತಿವೆ. ಇದು ರೈತರು, ನದಿ ಪಾತ್ರದ ಗ್ರಾಮಗಳ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.
ತುಂಗಭದ್ರಾ ನದಿಯಲ್ಲಿ ಮರಳು ಬಗೆದು ಮುಂಡರಗಿ ಪಟ್ಟಣದ ತಹಶೀಲ್ದಾರ, ಪೊಲೀಸ್ ಠಾಣೆ ಎದುರಲ್ಲೇ ಹಾದು ಗದಗ, ಹುಬ್ಬಳ್ಳಿಗೆ ಸಾಗಾಟ ಮಾಡ್ತಾಯಿದ್ರೂ ತಾಲೂಕ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ನದಿ ಪಾತ್ರದಲ್ಲಿ ರಾಶಿ ರಾಶಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ರು ಕೂಡ ದಾಳಿ ಮಾಡಿ ಸರ್ಕಾರದ ವಶಕ್ಕೆ ಪಡೆಯುತ್ತಿಲ್ಲ.
ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಉಂಟಾದ ಮರಳಿನ ಅಭಾವ: ಸದ್ದಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಸಾಗಾಟ ದಂಧೆ
ಅಕ್ರಮ ಸಂಗ್ರಹ ಮಾಡಿದ್ರೂ ಗಣಿ ಹಾಗೂ ಕಂದಾಯ ಇಲಾಖೆ ಗಪ್ ಚುಪ್ ಆಗಿವೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಮಂತ್ಲಿ ಫಿಕ್ಸ್ ಮಾಡಿ ಅಕ್ರಮಕ್ಕೆ ಸಾಥ್ ನೀಡಿದ್ದಾರೆ ಅನ್ನೋ ಆರೋಪ ನದಿ ಪಾತ್ರದಲ್ಲಿ ಕೇಳಿ ಬರ್ತಾಯಿದೆ. ನದಿ ಪಾತ್ರದಲ್ಲಿ ಅಪಾರ ಮರಳು ಸಂಗ್ರಹ ಕೂಡ ಜಿಲ್ಲಾಡಳಿತ ದಾಳಿ ಮಾಡಿ ಸೀಜ್ ಮಾಡ್ತಾಯಿಲ್ಲ. ಸೀಜ್ ಮಾಡಿದ್ರೆ ಸರ್ಕಾರಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತೆ. ಆದರೆ ಈ ಕೆಲಸ ಗಣಿ ಹಾಗೂ ತಾಲೂಕಾಡಳಿತ ಮಾಡುತ್ತಿಲ್ಲ. ಗಣಿ ಹಾಗೂ ತಾಲೂಕಾಡಳಿತ ಅಧಿಕಾರಿಗಳ ವರ್ತನೆ ಸಾಕಷ್ಟು ಅನುಮಾನ ಹುಟ್ಟಿಸಿದೆ.
ಇದನ್ನೂ ಓದಿ: ರಸ್ತೆ ನಿರ್ಮಾಣಕ್ಕೆಂದು ತಂದ ಸಿಮೆಂಟ್, ಮರಳು ಮಿಶ್ರಣ ಕದ್ದ ಜನ, ವಿಡಿಯೋ ವೈರಲ್
ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈಗ ಸರ್ಕಾರಕ್ಕೆ ಬರುವ ಲಕ್ಷಾಂತರ ರೂ. ಆದಾಯಕ್ಕೂ ಅಧಿಕಾರಿಗಳು ಕನ್ನ ಹಾಕ್ತಾಯಿದ್ದಾರೆ. ಬೇಲೆಯೇ ಎದ್ದು ಹೊಲ ಮೇಯುತ್ತಿದೆ ಅಂತ ಜನರು ಆರೋಪಿಸಿದ್ದಾರೆ. ಇನ್ನೂ ಜೆಸಿಬಿಗಳು ನೀರಿನಲ್ಲಿ ಬಳಸಿ ಮರಳು ಹೆಕ್ಕುತ್ತಿರೋದ್ರಿಂದ ನದಿ ನೀರು ಕಲುಷಿತ ಮಾಡಿ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಮಾಡ್ತಾರೆ ಅಂತ ಜನರು ಕಿಡಿಕಾರಿದ್ದಾರೆ. ಈ ಬಗ್ಗೆ ಡಿಸಿ ವೈಶಾಲಿ ಮೇಡಂ ಅವ್ರನ್ನು ಕೇಳಿದ್ರೆ, ಅಕ್ರಮ ನಡೆಯುತ್ತಿರೋದು ನನ್ನ ಗಮನಕ್ಕೆ ಬಂದಿದೆ. ಕ್ರಮಕ್ಕೆ ಟಾಸ್ಕ್ ಫೋರ್ಸ್ ಕಮಿಟಿಗೆ ಸಭೆ ಮಾಡಿ ಸೂಚನೆ ನೀಡಲಾಗಿದೆ. ಅಕ್ರಮ ಮರಳು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರೋದು ಅಧಿಕಾರಿಗಳಿಗೆ ಗೋತ್ತಿಲ್ಲ ಅಂತಿಲ್ಲ, ಗೋತ್ತಿದ್ರೂ ಜಾಣಕುರುಡುತ ಅಧಿಕಾರಿಗಳು ಪ್ರದರ್ಶನ ಮಾಡ್ತಾಯಿದ್ದಾರೆ. ಪ್ರಾಮಾಣಿಕ ರಾಜಕಾರಿಣಿ ಅಂತ ಕರೆಸಿಕೊಳ್ಳುವ ಕಾನೂನು ಸಚಿವ ಎಚ್ ಕೆ ಪಾಟೀಲ್ ಜಿಲ್ಲೆಯಲ್ಲಿ ಅಕ್ರಮ ನಡೆಯುತ್ತಿರೋದು ಮಾತ್ರ ವಿಪರ್ಯಾಸವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.