Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ನಿರ್ಮಾಣಕ್ಕೆಂದು ತಂದ ಸಿಮೆಂಟ್, ಮರಳು ಮಿಶ್ರಣ ಕದ್ದ ಜನ, ವಿಡಿಯೋ ವೈರಲ್

ಪಾದಚಾರಿಗಳ ಬಳಕೆಗಾಗಿ ನಿರ್ಮಾಣ ಹಂತದಲ್ಲಿದ್ದ ರಸ್ತೆಯನ್ನು ಚಿತ್ರ-ವಿಚಿತ್ರ ಮಾಡಿದ್ದಾರೆ. ಜತೆಗೆ ರಸ್ತೆ ಕಾಂಕ್ರೀಟ್​ಗೆಂದು ಹಾಕಲಾಗಿದ್ದ ಸಿಮೆಂಟ್ ಜಲ್ಲಿ ಮತ್ತು ಮರಳು ಮಿಶ್ರಣವನ್ನು ಕದ್ದುಕೊಂಡು ಹೋಗಿದ್ದಾರೆ. ಈ ಘಟನೆ ಮಖ್ದೂಂಪುರ ಬ್ಲಾಕ್‌ನ ಔದನ್ ಬಿಘಾ ಗ್ರಾಮದಲ್ಲಿ ನಡೆದಿದೆ.

ರಸ್ತೆ ನಿರ್ಮಾಣಕ್ಕೆಂದು ತಂದ ಸಿಮೆಂಟ್, ಮರಳು ಮಿಶ್ರಣ ಕದ್ದ ಜನ, ವಿಡಿಯೋ ವೈರಲ್
ವೈರಲ್​​​ ವಿಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 06, 2023 | 3:27 PM

ಈ ಜನರೇ ಹೀಗೆ, ರಸ್ತೆ ಇಲ್ಲವೆಂದರೆ ಸರ್ಕಾರವನ್ನು ದೂರುತ್ತಾರೆ. ಇನ್ನು ರಸ್ತೆ ಮಾಡಿದ್ರೆ ಈ ಗತಿ ನೋಡಿ. ಜನಸಾಮಾನ್ಯರ ಓಡಾಟಕ್ಕೆಂದು ರಸ್ತೆಯನ್ನು ಮಾಡಿದ್ರೆ, ಅದನ್ನೇ ಜನ ಕಿತ್ತುಕೊಂಡು ಹೋಗಿದ್ದಾರೆ. ಈ ಘಟನೆ ಬಿಹಾರದ ಜೆಹಾನಾಬಾದ್‌ನಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಕೂಡ ಎಕ್ಸ್​​​ನಲ್ಲಿ ವೈರಲ್​​ ಆಗಿದೆ. ಪಾದಚಾರಿಗಳ ಬಳಕೆಗಾಗಿ ನಿರ್ಮಾಣ ಹಂತದಲ್ಲಿದ್ದ ರಸ್ತೆಯನ್ನು ಚಿತ್ರ-ವಿಚಿತ್ರ ಮಾಡಿದ್ದಾರೆ. ಜತೆಗೆ ರಸ್ತೆ ಕಾಂಕ್ರೀಟ್​ಗೆಂದು ಹಾಕಲಾಗಿದ್ದ ಸಿಮೆಂಟ್ ಜಲ್ಲಿ ಮತ್ತು ಮರಳು ಮಿಶ್ರಣವನ್ನು ಕದ್ದುಕೊಂಡು ಹೋಗಿದ್ದಾರೆ. ಈ ಘಟನೆ ಮಖ್ದೂಂಪುರ ಬ್ಲಾಕ್‌ನ ಔದನ್ ಬಿಘಾ ಗ್ರಾಮದಲ್ಲಿ ನಡೆದಿದೆ.

ಇನ್ನು ಈ ರಸ್ತೆ ನಿರ್ಮಾಣ ಮುಖ್ಯಮಂತ್ರಿ ಸಡಕ್ ಗ್ರಾಮ ಯೋಜನೆಯಡಿಯಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಯೋಜನೆ ಪ್ರಕಾರ ಈ ಗ್ರಾಮಕ್ಕೆ ಮೂರು ಕಿಲೋಮೀಟರ್ ರಸ್ತೆ ನಿರ್ಮಾಣ ಯೋಜನೆ ನಿಗದಿಯಾಗಿದ್ದು, ಇದನ್ನು ಮೂರು ತಿಂಗಳ ಹಿಂದೆ ಆರ್ ಜೆಡಿ ಶಾಸಕ ಸತೀಶ್ ಕುಮಾರ್ ದಾಸ್ ಚಾಲನೆ ನೀಡಿದ್ದರು. ಈ ಹಿಂದೆಯೇ ಯೋಜನೆಗೆ ಅನುದಾನವನ್ನು ನೀಡಲಾಗಿತ್ತು. ಇದೀಗ ಈ ರಸ್ತೆಗೆ ತರಲಾಗಿದ್ದ ವಸ್ತುಗಳನ್ನು ಜನರೇ ಕದ್ದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ : ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ, ಪತಿಯನ್ನ ಬಿಟ್ಟು ಬರುವಂತೆ ಶಾಲಾ ಶಿಕ್ಷಕಿಗೆ ಧಮ್ಕಿ

ವೈರಲ್​​ ವಿಡಿಯೋ ಇಲ್ಲಿದೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ಇದು ಸಾರ್ವಜನಿಕ ಹಣ, ಇನ್ನು ಲೂಟಿ ಮಾಡಬಾರದು, ಇನ್ನು ನಮ್ಮ ರಾಜಕೀಯ ನಾಯಕರು ಎಷ್ಟು ಲೂಟಿ ಮಾಡುತ್ತಾರೆ, ಅದನ್ನು ಯಾರು ತೋರಿಸುವುದಿಲ್ಲ. ಇದರ ಜವಾಬ್ದಾರಿ ಗುತ್ತಿಗೆದಾರರದ್ದು ಎಂದು ಹೇಳಿದ್ದಾರೆ. ಸಾರ್ವಜನಿಕ ಮತ್ತು ಸರ್ಕಾರ ಹೀಗೆ ಮಾಡುತ್ತಲೇ ಇರಿ, ಮಾಧ್ಯಮಗಳು ಸುದ್ದಿ ಮಾಡುತ್ತಾರೆ. ಸಮಸ್ಯೆ ಪರಿಹಾರ ಹೇಗೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Mon, 6 November 23