K Chandrashekhar Rao -ತೆಲಂಗಾಣ ಅಸೆಂಬ್ಲಿ ಚುನಾವಣೆ ಪ್ರಚಾರ: ಮುಖ್ಯಮಂತ್ರಿ ಕೆಸಿಆರ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ

KCR Helicopter Emergency Landing: ಭಾನುವಾರವೂ ಪೈಲಟ್‌ನ ತಪ್ಪಿನಿಂದ ಹೆಲಿಕಾಪ್ಟರ್‌ ದಾರಿ ತಪ್ಪಿತ್ತು. ಇಂದು ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಹಠಾತ್ ಲ್ಯಾಂಡ್ ಆಗಿದೆ. ಇಂದು ಮಹಬೂಬ್‌ನಗರಕ್ಕೆ ಕೆಸಿಆರ್ ಭೇಟಿ ನೀಡಲಿದ್ದಾರೆ.

K Chandrashekhar Rao -ತೆಲಂಗಾಣ ಅಸೆಂಬ್ಲಿ ಚುನಾವಣೆ ಪ್ರಚಾರ: ಮುಖ್ಯಮಂತ್ರಿ ಕೆಸಿಆರ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ
ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ
Follow us
ಸಾಧು ಶ್ರೀನಾಥ್​
|

Updated on: Nov 06, 2023 | 2:58 PM

ಇದು ನಿಜಕ್ಕೂ ದೊಡ್ಡ ಬ್ರೇಕಿಂಗ್ ನ್ಯೂಸ್. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರರಾವ್ (ಕೆಸಿಆರ್ -Chief Minister K Chandrashekhar Rao) ಹೆಲಿಕಾಪ್ಟರ್ (Helicopter) ನಲ್ಲಿ ತಾಂತ್ರಿಕ ಸಮಸ್ಯೆ (technical problem) ಉಂಟಾಗಿದೆ. ದೇವರಕದ್ರಾ ಪ್ರವಾಸಕ್ಕೆ (Devarakadra public meeting) ತೆರಳಿದ್ದ s್ವಲ್ಪ ಸಮಯದಲ್ಲೇ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ. ಪೈಲಟ್ ಜಾಗರೂಕತೆಯಿಂದ ಹೆಲಿಕಾಪ್ಟರ್ ಅನ್ನು ಎರ್ರವಳ್ಳಿಯ ಜಮೀನಿನಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ಭಾನುವಾರವೂ ಪೈಲಟ್‌ನ ತಪ್ಪಿನಿಂದ ಹೆಲಿಕಾಪ್ಟರ್‌ ದಾರಿ ತಪ್ಪಿತ್ತು. ಇಂದು ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಹಠಾತ್ ಲ್ಯಾಂಡ್ ಆಗಿದೆ. ಇಂದು ಮಹಬೂಬ್‌ನಗರಕ್ಕೆ ಕೆಸಿಆರ್ ಭೇಟಿ ನೀಡಲಿದ್ದಾರೆ. ದೇವರಕದ್ರ, ಗದ್ವಾಲ್, ಮಕ್ತಲ್, ನಾರಾಯಣಪೇಟೆ.. ಹೀಗೆ ನಾಲ್ಕೂ ಕಡೆ ಪ್ರಜಾ ಆಶೀರ್ವಾದ ಸಾರ್ವಜನಿಕ ಸಭೆಗಳಲ್ಲಿ ಕೆಸಿಆರ್ ಭಾಗವಹಿಸಬೇಕಿದೆ. ಸಿಎಂ ಭೇಟಿ ಪ್ರವಾಸಕ್ಕೆ ಅಧಿಕಾರಿಗಳು ಮತ್ತೊಂದು ಹೆಲಿಕಾಪ್ಟರ್ ಸಿದ್ಧಪಡಿಸುತ್ತಿದ್ದಾರೆ.

ಸಭೆಗಳಲ್ಲಿ ಉತ್ಸಾಹ ತೋರಿಸುತ್ತಿರುವ ಸಿಎಂ ಕೆಸಿಆರ್‌:

ತೆಲಂಗಾಣ ಅಭ್ಯುದಯಕ್ಕಾಗಿಯೇ ತಮ್ಮ ಬಿಆರ್‌ಎಸ್‌ ಜನ್ಮ ತಾಳಿರುವುದು ಎಂದು ಕೆಸಿಆರ್‌ ಹೇಳಿದ್ದಾರೆ. ಬಿಆರ್‌ಎಸ್‌ನಿಂದ (BRS Supremo) ಮಾತ್ರ ತೆಲಂಗಾಣ ಅಭಿವೃದ್ಧಿ ಮತ್ತು ಕಲ್ಯಾಣ ಸಾಧ್ಯ. ಹಾಗಾಗಿ ಯೋಚಿಸಿ ಮತ ನೀಡಿ ಎಂದು ಕೆಸಿಆರ್ ಕರೆ ನೀಡಿದ್ದಾರೆ. 60 ಮತ್ತು 70 ವರ್ಷಗಳ ಹಿಂದೆ ರಚನೆಯಾದ ಇತರ ರಾಜ್ಯಗಳಿಗೆ ಹೋಲಿಸಿದರೆ ತೆಲಂಗಾಣದಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ ಎಂದು ಸಿಎಂ ಕೆಸಿಆರ್ ಹೇಳಿದರು. ಕೇವಲ ಒಂಬತ್ತೂವರೆ ವರ್ಷಗಳಲ್ಲಿ ತೆಲಂಗಾಣ ಇತರ ರಾಜ್ಯಗಳನ್ನು ಅನುಕರಿಸುವ ಮಟ್ಟಕ್ಕೆ ಬೆಳೆದಿದೆ ಎಂದರು. ಧರಣಿ ಕುರಿತ ಪ್ರತಿಪಕ್ಷಗಳ ಟೀಕೆಗೆ ಅವರು ಸೊಪ್ಪು ಹಾಕಲಿಲ್ಲ. ಧರಣಿ ಬೇಕೇ? ಬ್ರೋಕರ್ ವ್ಯವಸ್ಥೆ ಬೇಕೇ? ಪ್ರಗತಿ ಬೇಕಾ ಎಂದು ಮತದಾರರನ್ನು ಅವರು ಪ್ರಶ್ನಿಸಿದ್ದಾರೆ. ಬಿಆರ್ ಎಸ್ ನಿಂದ ಮಾತ್ರ ಗ್ರಾಮೀಣ ಪ್ರಗತಿ, ನಗರ ಪ್ರಗತಿ ಹಾಗೂ ಎಲ್ಲ ಜನರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. ರೈತ ಬಂಧು ಮತ್ತು ದಲಿತ ಬಂಧು ಮುಂದುವರಿಯಲಿದೆ ಎಂದು ಅವರು ಅಭಯ ನೀಡಿದ್ದಾರೆ.

Also Read:  ತೆಲಂಗಾಣ ಅಸೆಂಬ್ಲಿ ಚುನಾವಣೆ -ಕಾಂಗ್ರೆಸ್​​​ನ ಅಜರುದ್ದೀನ್ ಗೆ ಬಲವಾದ ಪೆಟ್ಟು ನೀಡಲಿರುವ ಅಸಾದುದ್ದೀನ್ ಓವೈಸಿ AIMIM ಪಕ್ಷ

ಕಾಂಗ್ರೆಸ್ ಮತ್ತು ಬಿಜೆಪಿಯ ಮಾತುಗಳನ್ನು ನಂಬಬೇಡಿ ಎಂದು ಕೆಸಿಆರ್ ಇದೆ ವೇಳೆ ಹೇಳಿದರು. ಬಿಆರ್ ಎಸ್ ನಿಂದ ಮಾತ್ರ ಅಭಿವೃದ್ಧಿ, ಕಲ್ಯಾಣ ಸಾಧ್ಯ ಎಂದರು. ಮತದಾನ ಎಂಬುದು ವಜ್ರಾಯುಧ.. ಸರಿಯಾದ ನಿರ್ಧಾರದೊಂದಿಗೆ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕೆಸಿಆರ್ ಇದೆ ವೇಳೆ ಕರೆ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್