Telangana Election: ತೆಲಂಗಾಣ ಅಸೆಂಬ್ಲಿ ಚುನಾವಣೆ -ಕಾಂಗ್ರೆಸ್​​​ನ ಅಜರುದ್ದೀನ್ ಗೆ ಬಲವಾದ ಪೆಟ್ಟು ನೀಡಲಿರುವ ಅಸಾದುದ್ದೀನ್ ಓವೈಸಿ AIMIM ಪಕ್ಷ

ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ತಡೆಯಲು ಎಂಐಎಂ ಈ ತಂತ್ರಗಾರಿಕೆ ನಡೆಸುತ್ತಿದೆ ಎಂಬ ವಾದಗಳೂ ಕೇಳಿ ಬರುತ್ತಿವೆ. ಮೇಲಾಗಿ ಈ ಬಾರಿ ಕಾಂಗ್ರೆಸ್ ನಿಂದ ಟಫ್ ಫೈಟ್ ಎದುರಾಗಬಹುದು ಎಂಬ ಪ್ರಚಾರ ನಡೆಯುತ್ತಿದ್ದು, ಎಂಐಎಂ ಹುಷಾರಾಗಿ ಹಾಲಿ ಶಾಸಕರನ್ನು ಬದಲಾಯಿಸುತ್ತಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

Telangana Election: ತೆಲಂಗಾಣ ಅಸೆಂಬ್ಲಿ ಚುನಾವಣೆ -ಕಾಂಗ್ರೆಸ್​​​ನ ಅಜರುದ್ದೀನ್ ಗೆ ಬಲವಾದ ಪೆಟ್ಟು ನೀಡಲಿರುವ ಅಸಾದುದ್ದೀನ್ ಓವೈಸಿ AIMIM ಪಕ್ಷ
ಕಾಂಗ್ರೆಸ್​​​ನ ಅಜರುದ್ದೀನ್ ಗೆ ಬಲವಾದ ಪೆಟ್ಟು ನೀಡಲಿರುವ ಅಸಾದುದ್ದೀನ್ ಓವೈಸಿ
Follow us
ಸಾಧು ಶ್ರೀನಾಥ್​
|

Updated on: Nov 03, 2023 | 5:26 PM

ಸದ್ಯದಲ್ಲೇ ತೆಲಂಗಾಣ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಅಸಾದುದ್ದೀನ್ ಓವೈಸಿ ನಾಯಕತ್ವದ ಎಂಐಎಂ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ? ತನ್ನ ಪ್ರಾಬಲ್ಯದ ಹಳೆಯ ಕ್ಷೇತ್ರಗಳ (ಪಾತಬಸ್ತಿಯ) ಜತೆಗೆ ಹೊಸ ಬಲವಿರುವ ಕ್ಷೇತ್ರಗಳಲ್ಲಿಯೂ ತನ್ನ ಅಧಿಕಾರ ವ್ಯಾಪ್ತಿ ಪಸರಿಸುತ್ತಿದೆಯೇ? ಈ ವಿಚಾರಗಳ ಬಗ್ಗೆ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಾತ ಬಸ್ತಿ ಸೇರಿ ಇನ್ನೂ 9 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸ್ಪರ್ಧಿಸುತ್ತಿರುವ ಜುಬ್ಲಿ ಹಿಲ್ಸ್‌ನಲ್ಲಿ ಎಂಐಎಂ ಕೂಡ ಸ್ಪರ್ಧಿಸುತ್ತಿದೆ ಎಂಬ ಸುಳಿವು ನೀಡಿದ್ದಾರೆ.

ಇದುವರೆಗೆ ಏಳು ವಿಧಾನಸಭಾ ಸ್ಥಾನಗಳಿಗೆ ಸೀಮಿತವಾಗಿದ್ದ ಎಂಐಎಂ ಪಕ್ಷ ಈ ಬಾರಿ ಮತ್ತೆರಡು ಹೊಸ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಘೋಷಿಸಿದರು. ಪ್ರಸ್ತುತ ಎಂಐಎಂ ಪ್ರತಿನಿಧಿಸುವ ಚಾರ್ಮಿನಾರ್, ಚಂದ್ರಯ್ಯಗುಟ್ಟ, ಯಾಕತ್‌ಪುರ, ಬಹದ್ದೂರ್‌ಪುರ, ನಾಂಪಲ್ಲಿ, ಕಾರವಾನ್, ಮಲಕ್‌ಪೇಟ್ ಮತ್ತು ಈ ಬಾರಿ ಜುಬಿಲಿ ಹಿಲ್ಸ್ ಮತ್ತು ಪಾತಬಸ್ತಿಯ ರಾಜೇಂದ್ರ ನಗರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪಕ್ಷದ ಮುಖಂಡರು ಘೋಷಿಸಿದರು.

Also read: ರಾಹುಲ್​ ಬಾಬಾ ಪಕ್ಷವು ನನ್ನ ರಾಯಲ್ ಎನ್‌ಫೀಲ್ಡ್‌ನಲ್ಲಿ ಇರುವಷ್ಟು ಸೀಟು ಕೂಡ ತೆಲಂಗಾಣದಲ್ಲಿ ಗೆಲ್ಲುವುದಿಲ್ಲ ಎಂದು ಪಂಚ್ ಕೊಟ್ಟ ಅಸಾದುದ್ದೀನ್ ಓವೈಸಿ

ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ತಡೆಯಲು ಎಂಐಎಂ ಈ ತಂತ್ರಗಾರಿಕೆ ನಡೆಸುತ್ತಿದೆ ಎಂಬ ವಾದಗಳೂ ಕೇಳಿ ಬರುತ್ತಿವೆ. ಮೇಲಾಗಿ ಈ ಬಾರಿ ಕಾಂಗ್ರೆಸ್ ನಿಂದ ಟಫ್ ಫೈಟ್ ಎದುರಾಗಬಹುದು ಎಂಬ ಪ್ರಚಾರ ನಡೆಯುತ್ತಿದ್ದು, ಎಂಐಎಂ ಹುಷಾರಾಗಿ ಹಾಲಿ ಶಾಸಕರನ್ನು ಬದಲಾಯಿಸುತ್ತಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಎಂಐಎಂ ಈ ಬಾರಿ ನಾಲ್ವರು ಸಿಟ್ಟಿಂಗ್ ಶಾಸಕರನ್ನು ಬದಲಾಯಿಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದ್ದು ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜುಬ್ಲಿ ಹಿಲ್ಸ್ ಕ್ಷೇತ್ರ ಮಹತ್ವದ್ದು. ಆದರೆ, ಎಂಐಎಂ ಅಭ್ಯರ್ಥಿ ಕಣದಲ್ಲಿರುವುದರಿಂದ ಅಜರುದ್ದೀನ್ ಅವರಿಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಚುನಾವಣಾ ಪರಿಣತರು.

ಎಂಐಎಂ ಇಲ್ಲಿಯವರೆಗೆ ಆಡಳಿತಾರೂಢ ಪಕ್ಷದ ಮಿತ್ರ ಪಕ್ಷವಾಗಿ ಮುಂದುವರಿದಿದೆ. ಹಲವು ಸಭೆಗಳಲ್ಲಿ ಬಿಆರ್ ಎಸ್ ಮುಖ್ಯಸ್ಥ ಕೆಸಿಆರ್ ಅವರು ಎಂಐಎಂ ಜತೆ ಇರುವುದಾಗಿ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಬಿಆರ್‌ಎಸ್ ಶಾಸಕರು ಪ್ರಸ್ತುತ ಜುಬ್ಲಿ ಹಿಲ್ಸ್ ಮತ್ತು ರಾಜೇಂದ್ರ ನಗರ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತಿದ್ದಾರೆ. ಈ ಎರಡು ಭಾಗದಲ್ಲಿ ಈ ಬಾರಿ ಆಡಳಿತಾರೂಢ ಬಿಆರ್‌ಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಹಣಾಹಣಿ ಏರ್ಪಟ್ಟಿದ್ದು, ಎಂಐಎಂ ಪ್ರವೇಶದಿಂದ ಫೈಟ್‌ ಇನ್ನಷ್ಟು ಜೋರಾಗಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Also Read: ವಿಡಿಯೋ ವೈರಲ್ – ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಹಳೆ ಬಸ್ತಿಯಲ್ಲಿ ಬೈಕ್ ಸವಾರಿ ಮಾಡ್ತಾ ಸ್ವಾತಂತ್ರ್ಯ ಸಂಭ್ರಮಿಸಿದ್ದು ಹೇಗೆ ಗೊತ್ತಾ?

ತೆಲಂಗಾಣದಲ್ಲಿ ಎಂಐಎಂ ನಾಲ್ಕನೇ ಪ್ರಮುಖ ಪಕ್ಷವಾಗಲಿದೆ ಎಂದು ಇತ್ತೀಚೆಗೆ ಸಂಗಾರೆಡ್ಡಿಯಲ್ಲಿ ನಡೆದ ಸಭೆಯಲ್ಲಿ ಎಂಐಎಂ ನಾಯಕ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಎಂಐಎಂ ಪವರ್ ಪ್ಲೇಯರ್ ಪಾತ್ರ ವಹಿಸಲಿದೆ ಎಂದಿದ್ದಾರೆ. 9 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಓವೈಸಿ ನಾಮಪತ್ರ ಸಲ್ಲಿಕೆ ಆರಂಭಿಸಿದ್ದು, ಅಭ್ಯರ್ಥಿಗಳು ಅಂತಿಮಗೊಂಡಿಲ್ಲ. ಇನ್ನೆರಡು ದಿನದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ