ಅವಳಿ ಮಕ್ಕಳು, ಬಾಣಂತಿ ಸಾವು; ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

| Updated By: ಆಯೇಷಾ ಬಾನು

Updated on: Feb 05, 2024 | 8:08 AM

ಮಹಿಳೆ ಎರಡು ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಮಕ್ಕಳು ಮೃತಪಟ್ಟಿವೆ. ಹಾಗೇ ಬಾಣಂತಿಗೂ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೀಗಾಗಿ ಅವಳಿ ಮಕ್ಕಳು, ಬಾಣಂತಿ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅವಳಿ ಮಕ್ಕಳು, ಬಾಣಂತಿ ಸಾವು; ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ಆಸ್ಪತ್ರೆಯಲ್ಲಿ ಬಾಣಂತಿ ಕುಟುಂಬಸ್ಥರ ಆಕ್ರೋಶ
Follow us on

ಗದಗ, ಫೆ.05: ಆ ಮಹಿಳೆ ಮುದ್ದಾದ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಆದರೆ ಆ ಮುದ್ದು ಕಂದಮ್ಮಗಳು ಜಗತ್ತು ನೋಡುವ ಮುನ್ನವೇ ಮೃತಪಟ್ಟಿವೆ (Death). ಇತ್ತ ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ತಾಯಿ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದು ತಕ್ಷಣ ಬಾದಾಮಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಆ ಬಾಣಂತಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಬಾಣಂತಿ, ಅವಳಿ ಕಂದಮ್ಮಗಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿ ವಿರುಪಾಪುರ ಗ್ರಾಮದ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಖಾಸಗಿ ಆಸ್ಪತ್ರೆಗೆ ಫೆಬ್ರುವರಿ 2 ರಂದು 28 ವರ್ಷದ ತುಂಬು ಗರ್ಭಿಣಿ ನಂದಿನಿ ಹರಿಗೆಗೆ ಎಂದು ದಾಖಲಿಸಲಾಗಿತ್ತು. ಅಂದು ವೈದ್ಯರು ಎರಡು ಬಾರಿ ಸ್ಕ್ಯಾನ್ ಮಾಡಿದ್ದಾರೆ. ಆಗ ಎರಡು ಅವಳಿ ಮಕ್ಕಳು ಚೆನ್ನಾಗಿವೆ ಎಂದು ಹೇಳಿದ್ದಾರೆ. ಸಿಜೆರಿಯನ್ ಮಾಡಿಯೇ ಹೆರಿಗೆ ಮಾಡಿಬೇಕಾಗುತ್ತೆ ಅಂತ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ. ಫೆಬ್ರುವರಿ 2ರಂದು ಹೆರಿಗೆಯಾಗಿದ್ದು, ಮುದ್ದಾದ ಒಂದು ಗಂಡು, ಒಂದು ಹೆಣ್ಣು ಕಂದಮ್ಮಗಳಿಗೆ ಜನ್ಮ ನೀಡಿದ್ದಾಳೆ.

ಇದನ್ನೂ ಓದಿ: ಎಸ್​​ಎಸ್​​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಆರೋಪ: ಇಲಾಖೆಯಿಂದ ಅಧಿಕೃತ ಸ್ಪಷ್ಟನೆ ಸಾಧ್ಯತೆ

ಆದ್ರೆ, ಹೆರಿಗೆ ಬಳಿಕ ಎರಡು ಮಕ್ಕಳು ಮೃತಪಟ್ಟಿವೆ. ಬಾಣಂತಿ ನಂದಿನಿ ಕೂಡ ತೀವ್ರ ರಕ್ತ ಸ್ರಾವದಿಂದ ಅಸ್ವಸ್ಥಗೊಂಡ ಕಾರಣ ತಕ್ಷಣ ಅಲರ್ಟ್ ಆದ ವೈದ್ಯರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಬಾಣಂತಿ ನಂದಿನಿ ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಮತ್ತು ಮಕ್ಕಳ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ಎದುರು ಸಂಬಂಧಿಕರು ಪ್ರತಿಭಟನೆ ಮಾಡಿ ಆಕ್ರೊಶ ವ್ಯಕ್ತಪಡಿಸಿದ್ದಾರೆ. ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾರೊಡಗಿಮಠ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಜೆರಿಯನ್ ಮಾಡಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿವೆ. ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿಗೆ ಲೋ ಬಿಪಿ ಆಗಿದೆ. ಇಂದು ಚಿಕಿತ್ಸೆ ಫಲಿಸದೇ ಬಾಣಂತಿ ಸಾವನ್ನಪ್ಪಿದ್ದಾಳೆ. ಸಿಜೆರಿಯನ್ ಮಾಡಿ ಹೆರಿಗೆ ಮಾಡಿದ್ದಾರೆ. ಈ ವೇಳೆ ರಕ್ತದ ವ್ಯವಸ್ಥೆ ಮಾಡದೇ ಹೆರಿಗೆ ಮಾಡಿದ್ದಾರೆ. ಹೀಗಾಗಿ ರಕ್ತ ಕೊರತೆಯಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ ಎಂಬ ಆರೋಪಗಳು ಕೇಳೀ ಬಂದಿವೆ. ಗಜೇಂದ್ರಗಢ ಪಟ್ಟಣ ಮೃತ ಬಾಣಂತಿ ನಂದಿನಿ ತವರೂರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗಜೇಂದ್ರಗಢ ಪೊಲೀಸ್ರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದ್ರೆ, ವೈದ್ಯರು ಮಾತ್ರ ನಮ್ಮದೇನೂ ತಪ್ಪಿಲ್ಲ ಅಂತಿದ್ದಾರೆ. ತನಿಖೆ ಬಳಿಕವಷ್ಟೇ ಬಾಣಂತಿ, ಅವಳಿ ಮಕ್ಕಳ ಸಾವಿನ ಸತ್ಯ ಗೊತ್ತಾಗಲಿದೆ.

ಗದಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ