ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ 16ನೇ ಪದವಿ ಪ್ರದಾನ ಸಮಾರಂಭ ಮಾರ್ಚ್ 13ರಂದು ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದಿದ್ದು, 2020ರ ಬ್ಯಾಚಿನ 461 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಎಂ.ಅಣ್ಣಪ್ಪ ಪೈ ಕಲಿಕೆ ನಿರಂತರವಾಗಿರಲಿ ಎಂದರು. ಆಡಳಿತ ಮಂಡಳಿ ಉಪಾಧ್ಯಕ್ಷ, ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ರಂಗನಾಥ್ ಭಟ್ ಮಾತನಾಡಿ ರಾಷ್ಟ್ರದ ಪ್ರಗತಿಯಲ್ಲಿ ಕೊಡುಗೆ ನೀಡುವ ಮನೋಭಾವ ನಮ್ಮದಾಗಬೇಕು. ಬದುಕಿನಲ್ಲಿ ಸಂತಸ ಹಂಚಿಕೊಂಡು ಅವಕಾಶಗಳನ್ನು ಬಳಸಿಕೊಂಡು ಸಕಾರಾತ್ಮಕ ಚಿಂತನೆಯಿಂದ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂದೀಪ್ ಪ್ರಭು ಸಂಪಾದಕತ್ವದಲ್ಲಿ ರೂಪುಗೊಂಡ ಕಾಲೇಜಿನ ಇ ವಾರ್ಷಿಕ ಸಂಚಿಕೆ ಸಿಇಸಿ ಬುಲೆಟಿನ್ ಅನ್ನು ಅತಿಥಿ ಬಿ.ಹೆಚ್.ವಿ. ಪ್ರಸಾದ್ ಸಹಿತ ಗಣ್ಯರು ಲೊಕಾರ್ಪಣೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಸ್ವಾಗತಿಸಿ, ಸಹ ಪ್ರಾಧ್ಯಾಪಕ ಸತೀಶ್ ಎಸ್. ನಾಡಿಗ್ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಡಯಾನಾ ಗುಡಿನೊ, ಸಿಂಧು ಭಟ್, ತೇಜಸ್ವಿನಿ ಹೊಳ್ಳ. ಕೌಶಲ್ ಡಿ. ವಿದ್ಯಾ ಬಳಿಗೇರ್ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಎಂ.ವಾಮನ ಕಾಮತ್, ಸಹ ಕೋಶಾಧಿಕಾರಿ, ಬಸ್ತಿ ಪುರುಷೋತ್ತಮ ಶೆಣೈ, ಸದಸ್ಯರಾದ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಟಿ.ಗೋಪಾಲ ಕೃಷ್ಣ ಶೆಣೈ, ಶ್ರೀಕಾಂತ ಪೈ ಕಸ್ತೂರಿ, ಡಾ.ಪಿ.ಉಮಾನಂದ ಮಲ್ಯ, ಆಡಳಿತ ಕೌನ್ಸಿಲ್ ಸದಸ್ಯರಾದ ಎಂ.ವಿನಾಯಕ ಕಾಮತ್ ಹಾಗೂ ಕಾಲೇಜಿನ ವಿಭಾಗ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಪ್ರಿಯಾ ವಿ.ಫ್ರ್ಯಾಂಕ್ ವಂದಿಸಿದರು. ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಪ್ರಶಾಂತ್ ಕುಮಾರ್.ಎ ಕಾರ್ಯಕ್ರಮ ನಿರ್ವಹಿಸಿದರು.
ಪದವಿ ಪ್ರದಾನದ ಫೋಟೋಗಳಿವೆ
ಇದನ್ನೂ ಓದಿ
ಲಾಹೋರ್ ವಿಶ್ವವಿದ್ಯಾಲಯದಲ್ಲಿ ಪ್ರಿಯಕರನಿಗೆ ಲವ್ ಪ್ರಪೋಸ್ ಮಾಡಿದ ವಿದ್ಯಾರ್ಥಿನಿ! ಮುಂದೇನಾಯ್ತು?
ಬೀದರ್ನಲ್ಲಿ ಹೆಚ್ಚಾದ ಕೊರೊನಾ ಪ್ರಕರಣ: ಮಾಸ್ಕ್ ಧರಿಸದೆ ಜನರ ನಿರ್ಲಕ್ಷ್ಯ
Published On - 11:03 am, Sun, 14 March 21