ಹುಬ್ಬಳ್ಳಿ: ಸ್ಮಶಾನ ಕಾಯುವವನನ್ನೂ ಬಿಟ್ಟಿಲ್ಲ ಕೊರೊನಾ ಪೆಡಂಭೂತ. ಇಲ್ಲಿನ ಸ್ಮಶಾನ ಕಾವಲುಗಾರನಿಗೆ ಕೊರೊನಾ ತಗುಲಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಹಿನ್ನೆಲೆ ನೋಡಿದಾಗ ಅದು ಹೇಗೆ ಸಾಧ್ಯ ಎಂದು ಬೆಚ್ಚಿಬೀಳುವಂತಿದೆ. 63 ವರ್ಷದ 363ನೇ ರೋಗಿಯೇ ಈ ಸ್ಮಶಾನ ಕಾಯುವಾತ.
ಸೋಂಕಿತ 236ನೇ ವ್ಯಕ್ತಿಯಿಂದ 363ನೇ ರೋಗಿಗೆ ಸೋಂಕು ತಗುಲಿದೆ. 236ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಹರಡಿದೆ. ಸೋಂಕಿತ 236ನೇ ವ್ಯಕ್ತಿ ಮಾರ್ಚ್ 27ರಂದು ಹುಬ್ಬಳ್ಳಿಯಲ್ಲಿ ಆಹಾರದ ಕಿಟ್ ಹಂಚಿದ್ದ. ಆತನ ಜೊತೆಗೂಡಿ ಕಿಟ್ ಹಂಚಿದ್ದ ಈ 63 ವರ್ಷದ ವ್ಯಕ್ತಿ.
ಇದೀಗ, 363ನೇ ಸೋಂಕಿತ ವೃದ್ಧ ಸ್ಮಶಾನ ಕಾವಲುಗಾರನ ಜೊತೆಗೆ ಕೆಲಸಕ್ಕಿದ್ದ ಇಬ್ಬರನ್ನೂ ಆರೋಗ್ಯ ಸಿಬ್ಬಂದಿ ಕಿಮ್ಸ್ಗೆ ಕರೆದೊಯ್ದಿದ್ದಾರೆ. ಹಾಗಾದ್ರೆ, 263ನೇ ಸೋಂಕಿತ ವ್ಯಕ್ತಿಯಿಂದ ಕಿಟ್ ಪಡೆದ ಇತರರ ಗತಿಯೇನು? 263ನೇ ಸೋಂಕಿತನ ಸಂಪರ್ಕದಲ್ಲಿದ್ದವರು ಸ್ವಯಂಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
Published On - 2:05 pm, Sat, 18 April 20