ಹಾಸನ: ಗರ್ಭಿಣಿಯರು (pregnant women) , ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳ (eggs) ವಿತರಣೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೊಳೆನರಸೀಪುರದ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ. ಹೌಸಿಂಗ್ ಬೋರ್ಡ್ನ ಕಿಕ್ಕೇರಮ್ಮ ದೇಗುಲದ ಬಳಿಯಿರುವ ಅಂಗನವಾಡಿಯಲ್ಲಿ ತಾಯಿ ಕಾರ್ಡ್ ಹೊಂದಿರುವ ಗರ್ಭಿಣಿ, ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳನ್ನು ನೀಡಿರುವುದಾಗಿ ಆರೋಪಿಸಲಾಗಿದೆ.
ಅಂಗನವಾಡಿಯಲ್ಲಿ ನೀಡಿದ್ದ ಮೊಟ್ಟೆ ಒಡೆದು ನೋಡಿದಾಗ ಹಾಳಾಗಿದ್ದು ಬೆಳಕಿಗೆ ಬಂದಿದೆ. ಕಳಪೆ ಗುಣಮಟ್ಟ, ಕೊಳೆತ ಮೊಟ್ಟೆ ಪೂರೈಸಿದವರ ವಿರುದ್ಧ ಕ್ರಮಕ್ಕೆ ಮಹಿಳೆಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೊಟ್ಟೆ ಖರೀದಿಸಲು ಬಿಡುಗಡೆಯಾಗದ ಅನುದಾನ: ಸಾಲದ ಸುಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು
ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೇರಿದಂತೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತದೆ. ಸರ್ಕಾರದಿಂದ ಇದಕ್ಕೆ ಅನುದಾನವು ಬಿಡುಗಡೆಯಾಗುತ್ತದೆ.
ರಾಜ್ಯದಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿವೆ. ಗರ್ಭಿಣಿಯರು, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕಾಂಶ ಬರಲಿ ಎನ್ನುವ ಉದ್ದೇಶದಿಂದ ಮೊಟ್ಟೆಯನ್ನು ನೀಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 pm, Thu, 6 July 23