2 ಸಾವಿರ ಸಾಲ ನೀಡದಿದ್ದಕ್ಕೆ ಮಾಲೀಕನನ್ನೇ ಹತ್ಯೆಗೈದ ಚಾಲಕ

|

Updated on: Jan 13, 2020 | 9:15 AM

ಹಾಸನ: ಕೇವಲ 2 ಸಾವಿರ ಹಣ ಸಾಲ ನೀಡದಿದ್ದಕ್ಕೆ ಮಾಲೀಕನನ್ನು ಚಾಲಕ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಕಾಚಿಘಟ್ಟ ಗ್ರಾಮದ ಬಳಿ ನಡೆದಿದೆ. ವಡ್ಡರಹಟ್ಟಿಯ ನಿವಾಸಿ ನಾಗೇಶ್ ಸಿದ್ದಾಬೋವಿ(47) ಹತ್ಯೆಯಾದ ಟ್ರ್ಯಾಕ್ಟರ್ ಮಾಲೀಕ. ಜ.12ರಂದು ಕಲ್ಲು ತುಂಬಿಕೊಂಡು ಬರುವಾಗ ಟ್ರ್ಯಾಕ್ಟರ್ ಚಾಲಕ ರಂಗಸ್ವಾಮಿ ತನ್ನ ಮಾಲೀಕ ನಾಗೇಶ್​ ಬಳಿ 2 ಸಾವಿರ ರೂಪಾಯಿ ಸಾಲ ಕೇಳಿದ್ದ. ಸಾಲ ನೀಡಲು ಹಣವಿಲ್ಲ ಎಂದ ಮಾಲೀಕನ ಜೊತೆ ಚಾಲಕ ಜಗಳ ಮಾಡಿದ್ದಾನೆ. ಆಗ ಚಾಲಕನ ಮೇಲೆ ಮಾಲೀಕ ನಾಗೇಶ್ […]

2 ಸಾವಿರ ಸಾಲ ನೀಡದಿದ್ದಕ್ಕೆ ಮಾಲೀಕನನ್ನೇ ಹತ್ಯೆಗೈದ ಚಾಲಕ
Follow us on

ಹಾಸನ: ಕೇವಲ 2 ಸಾವಿರ ಹಣ ಸಾಲ ನೀಡದಿದ್ದಕ್ಕೆ ಮಾಲೀಕನನ್ನು ಚಾಲಕ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಕಾಚಿಘಟ್ಟ ಗ್ರಾಮದ ಬಳಿ ನಡೆದಿದೆ. ವಡ್ಡರಹಟ್ಟಿಯ ನಿವಾಸಿ ನಾಗೇಶ್ ಸಿದ್ದಾಬೋವಿ(47) ಹತ್ಯೆಯಾದ ಟ್ರ್ಯಾಕ್ಟರ್ ಮಾಲೀಕ.

ಜ.12ರಂದು ಕಲ್ಲು ತುಂಬಿಕೊಂಡು ಬರುವಾಗ ಟ್ರ್ಯಾಕ್ಟರ್ ಚಾಲಕ ರಂಗಸ್ವಾಮಿ ತನ್ನ ಮಾಲೀಕ ನಾಗೇಶ್​ ಬಳಿ 2 ಸಾವಿರ ರೂಪಾಯಿ ಸಾಲ ಕೇಳಿದ್ದ. ಸಾಲ ನೀಡಲು ಹಣವಿಲ್ಲ ಎಂದ ಮಾಲೀಕನ ಜೊತೆ ಚಾಲಕ ಜಗಳ ಮಾಡಿದ್ದಾನೆ. ಆಗ ಚಾಲಕನ ಮೇಲೆ ಮಾಲೀಕ ನಾಗೇಶ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಸಿಟ್ಟಿಗೆದ್ದು ಚೂಪಾದ ಹಾರೆಯಿಂದ ಮಾಲೀಕನಿಗೆ ಚಾಲಕ ರಂಗಸ್ವಾಮಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಾಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರೋಪಿ ರಂಗಸ್ವಾಮಿಯನ್ನು ಜಾವಗಲ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.